Sunday, October 13, 2024

ಪಡುಕೋಣೆ ವ್ಯವಸಾಯ ಸೇವಾ ಸಹಕಾರಿ ಸಂಘ: 58 ಲಕ್ಷ ನಿವ್ವಳ ಲಾಭ| ಶೇ.14.5% ಡಿವಿಡೆಂಡ್ ಘೋಷಣೆ

ಕುಂದಾಪುರ: ಪಡುಕೋಣೆ ವ್ಯವಸಾಯ ಸೇವಾ ಸಹಕಾರಿ ಸಂಘವು ರೈತರ, ಕೃಷಿಕರ, ಕಾರ್ಮಿಕರ ಮತ್ತು ಎಲ್ಲಾ ವರ್ಗದ ಗ್ರಾಹಕರ ಮೆಚ್ಚುಗೆಗಳಿಸಿಕೊಂಡು ಮುನ್ನಡೆಯುತ್ತಿದ್ದು ಕಳೆದ ಏಳು ವರ್ಷಗಳಿಂದ ಉತ್ತಮ ಲಾಭವನ್ನು ಗಳಿಸಿ, ಆಡಿಟ್ ವರ್ಗೀಕರಣದಲ್ಲಿ ‘ಎ’ ತರಗತಿಯಲ್ಲಿದೆ. ವರದಿ ವರ್ಷದಲ್ಲಿ ರೂ. 58.27 ಲಕ್ಷ ಲಾಭ ಗಳಿಸಿರುವುದು ಪ್ರಗತಿಯ ಸಂಕೇತವಾಗಿದೆ. ಸದಸ್ಯರಿಗೆ ಶೇ.14.5 ಡಿವಿಡೆಂಡ್ ನೀಡಲು ನಿರ್ಧರಿಸಲಾಗಿದೆ ಎಂದು ಪಡುಕೋಣೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ರಾಜೀವ ಪಡುಕೋಣೆ ತಿಳಿಸಿದರು.
ಅವರು ಸೆ.15ರಂದು ನಾಡದ ಹಾಡಿಗರಡಿ ಶ್ರೀ ನಂದಿಕೇಶ್ವರ ಸಭಾಭವನದಲ್ಲಿ ನಡೆದ ಪಡುಕೋಣೆ ವ್ಯವಸಾಯ ಸೇವಾ ಸಹಕಾರಿ ಸಂಘದ ವಾರ್ಷಿಕ ಸರ್ವಸದಸ್ಯರ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬೈಂದೂರು ತಾಲೂಕಿನ ನಾಡ ಮತ್ತು ಹಡವು ಗ್ರಾಮಗಳು ಸಂಘದ ಕಾರ್ಯಕ್ಷೇತ್ರವಾಗಿದೆ. ಬೈಂದೂರು ತಾಲೂಕಿನ ಬಡಾಕೆರೆ, ನಾವುಂದ, ಹೇರೂರು, ಮರವಂತೆ, ಹಾಗೂ ಕುಂದಾಪುರ ತಾಲೂಕಿನ ಸೇನಾಪುರ, ಆಲೂರು, ಹಕ್ಲಾಡಿ, ಗುಜ್ಜಾಡಿ, ಹೆಮ್ಮಾಡಿ ಮತ್ತು ತ್ರಾಸಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ರಾಮಗಳು ಉಪನಿಬಂಧನೆಯಂತೆ ಸಂಘದ ಕಾರ್ಯವ್ಯಾಪ್ತಿಗೆ ಒಳಪಟ್ಟಿದೆ. ಸಂಘವು ವರದಿ ವರ್ಷದಲ್ಲಿ 134.46 ಕೋಟಿಗೂ ಮಿಕ್ಕಿ ವ್ಯವಹಾರ ಸಾಧಿಸುವ ಮೂಲಕ ಗುರಿಮೀರಿದ ಸಾಧನೆಗೈದಿದೆ. ಠೇವಣಿ ಸಂಗ್ರಹಣೆಯಲ್ಲಿ ಪೈಪೋಟಿ ಇದ್ದರೂ ನಮ್ಮ ಸಂಘವು ವರ್ಷಾರಂಭಕ್ಕೆ ರೂ. 33.67 ಕೋಟಿ ಠೇವಣಾತಿ ಇದ್ದು, ರೂ. 3.93 ಕೋಟಿ ಹೆಚ್ಚಳವಾಗಿದ್ದು, ವರ್ಷಾಂತ್ಯಕ್ಕೆ ಒಟ್ಟು ರೂ. 37.60 ಕೋಟಿ ಠೇವಣಿ ಸಂಗ್ರಹಿಸಿದೆ, ವರದಿ ವರ್ಷದ ಅಂತ್ಯಕ್ಕೆ ಶೇ. 11.67 ಠೇವಣೆ ಹೆಚ್ಚಳ ಆಗಿರುತ್ತದೆ. ಸ್ಪರ್ಧಾತ್ಮಕ ಆರ್ಥಿಕ ಹಿನ್ನೆಲೆಯಲ್ಲಿಯೂ ಸಂಘವು ಆರ್ಥಿಕ ವರ್ಷಾರಂಭಕ್ಕೆ ರೂ. 28.55 ಕೋಟಿ ಸಾಲ ಇದ್ದು, ರೂ. 3.38 ಕೋಟಿ ಸಾಲ ಹೆಚ್ಚಳವಾಗಿದ್ದು, ವರ್ಷಾಂತ್ಯದಲ್ಲಿ ಸೇವಾ ಬದ್ಧತೆಯನ್ನು ಮೆರೆದು ರೂ.31.93 ಕೋಟಿ ಸಾಲ ನೀಡಿದೆ, ವರದಿ ವರ್ಷದ ಅಂತ್ಯಕ್ಕೆ ಶೇ. 11.82 ಸದಸ್ಯರ ಸಾಲ ಹೆಚ್ಚಳ ಆಗಿರುತ್ತದೆ ಎಂದರು.
ವರದಿ ವರ್ಷದಲ್ಲಿ 404 ಜನ ಸದಸ್ಯರಿಗೆ ಮಂಗಳಾ ಕಿಸಾನ್ ಕಾರ್ಡ್ ಯೋಜನೆಯಡಿ ರೂ. 5,43,17,200.00 ಸಾಲ ನೀಡಲಾಗಿದೆ. 54 ನವೋದಯ ಸ್ವ-ಸಹಾಯ ಗುಂಪುಗಳಿಗೆ ನೀಡಿದ ಸಾಲ ರೂ. 3,34,78,158.00 ಹೊರಬಾಕಿ ಇರುತ್ತದೆ. ಸಂಘದ ವ್ಯಾಪ್ತಿಯ ಪಡಿತರ ಚೀಟಿದಾರರಿಗೆ ಅನುಕೂಲವಾಗುವಂತೆ ನಾಡ, ಹಡವು ಮತ್ತು ಕೋಣ್ಕಿ ಈ ಮೂರು ಡಿಪೋಗಳಲ್ಲಿ ಪಡಿತರವನ್ನು ಸಮರ್ಪಕವಾಗಿ ವಿತರಿಸಲಾಗುತ್ತಿದೆ. ಮತ್ತು ರೈತರಿಗೆ ಅನುಕೂಲವಾಗುವಂತೆ ರಸಗೊಬ್ಬರವನ್ನು ಸಂಘದಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದರು.
ವರ್ಷಾಂತ್ಯಕ್ಕೆ ಅಂತ್ಯಕ್ಕೆ ಒಟ್ಟು 4551 ಸದಸ್ಯರಿದ್ದಾರೆ. ವರದಿ ವರ್ಷಾಂತ್ಯಕ್ಕೆ ರೂ.1,40,75,610.00 ಪಾಲು ಹಣ ಇರುತ್ತದೆ. ವರ್ಷದಲ್ಲಿ ಶೇ.6.49 ಪಾಲುಹಣ ಹೆಚ್ಚಳ ಆಗಿದೆ. ವರದಿ ವರ್ಷದ ಅಂತ್ಯಕ್ಕೆ ಶೇ. 11.67 ಠೇವಣೆ ಹೆಚ್ಚಳ ಆಗಿದೆ ಎಂದರು.
ಈ ಸಂದರ್ಭದಲ್ಲಿ ರಾಜ್ಯ ಮಟ್ಟದ ಶ್ರೇಷ್ಠ ವೈದ್ಯ ಪ್ರಶಸ್ತಿ ಪುರಸ್ಕøತ ನಾಡ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಚಿಕ್ಮರಿ, ಸ್ಥಳೀಯ ಪ್ರಗತಿಪರ ಕೃಷಿಕರಾದ ರಾಮ ಪೂಜಾರಿ ಪಡುಕೋಣೆ, ನರಸಿಂಹ ದೇವಾಡಿಗ ಪಡುಕೋಣೆ ಇವರನ್ನು ಸನ್ಮಾನಿಸಲಾಯಿತು.
ಡಾ.ಚಿಕ್ಮರಿ ಸನ್ಮಾನಿತರ ಪರವಾಗಿ ಮಾತನಾಡಿ ಪಡುಕೋಣೆ ವ್ಯವಸಾಯ ಸೇವಾ ಸಹಕಾರಿ ಸಹಕಾರ ಸೇವೆಯೊಂದಿಗೆ ಸಮಾಜಮುಖಿಯಾಗಿ ತೊಡಗಿಸಿಕೊಂಡಿದೆ. ಕೊರೋನಾ ಕಾಲಘಟ್ಟದಲ್ಲಿ ಸಾಕಷ್ಟು ಸೇವೆಯನ್ನು ನೀಡಿದೆ. ಹೀಗೆ ಸೇವಾ ಕಾರ್ಯಗಳು ನಿರಂತರವಾಗಿ ನಡೆಯಲಿದೆ ಎಂದರು.
ಸಂಘದ ವ್ಯಾಪ್ತಿಯಲ್ಲಿ ಎಸ್.ಎಸ್.ಎಲ್.ಸಿ, ಪಿಯುಸಿಯಲ್ಲಿ ಶೈಕ್ಷಣಿಕವಾಗಿ ಸಾಧನೆ ಮಾಡಿದ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿವೇತನದೊಂದಿಗೆ ಪುರಸ್ಕರಿಸಲಾಯಿತು.
ಸಂಘದ ಉಪಾಧ್ಯಕ್ಷರಾದ ರಾಮ ಪೂಜಾರಿ, ನಿರ್ದೇಶಕರಾದ ಅಶೋಕ ಶೆಟ್ಟಿ, ಕುಷ್ಟ ಪೂಜಾರಿ, ಫಿಲಿಪ್ ಡಿ’ಸಿಲ್ವ, ಜಿ.ರಾಜು ಭಂಡಾರಿ, ಸುಬ್ರಮಣ್ಯ ಪಡುಕೋಣೆ, ವಸಂತಿ ಕಾಂಚನ್, ಶ್ರೀಮತಿ ಸುಲೋಚನಾ ಯಾನೆ ನಾಗರತ್ನ, ಶ್ರೀಮತಿ ಸುನೀತಾ, ರಾಜೇಶ ಪಡುಕೋಣೆ, ಹೆಚ್ ರಾಜೀವ ಶೆಟ್ಟಿ, ಅಶೋಕ, ಮಂಜು ಕುಲಾಲ, ಹಾಗೂ ಶಂಕರ ಕಾಂಚನ್, ವಲಯ ಮೇಲ್ವಿಚಾರಕ ಶಿವರಾಮ ಯಡ್ತರೆ ಉಪಸ್ಥಿತರಿದ್ದರು.
ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಭಾಸ್ಕರ್ ಎಮ್ ವರದಿ ಮಂಡಿಸಿದರು. ನಿರ್ದೇಶಕ ರಾಜೇಶ ಪಡುಕೋಣೆ ಸನ್ಮಾನಿತರ ಪಟ್ಟಿ ವಾಚಿಸಿದರು. ನಿರ್ದೇಶಕ ಸುಬ್ರಹ್ಮಣ್ಯ ಪಡುಕೋಣೆ ಕಾರ್ಯಕ್ರಮ ನಿರ್ವಹಿಸಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!