Sunday, October 13, 2024

ಹಳ್ಳಿಗಳಲ್ಲಿ ಶಾಖೆಗಳ ಆರಂಭಕ್ಕೆ ಸದಸ್ಯರ ವಿಶ್ವಾಸಾರ್ಹತೆಯೇ ಕಾರಣ-ಡಾ.ಎಂ.ಎನ್.ರಾಜೇಂದ್ರ ಕುಮಾರ್ |ವಂಡ್ಸೆ ಸಹಕಾರಿ ವ್ಯವಸಾಯಿಕ ಸಂಘದ ಹೊಸೂರು ನೂತನ ಶಾಖೆ, ಕಟ್ಟಡ ಉದ್ಘಾಟನೆ

ವಂಡ್ಸೆ, ಸೆ.16: ಹಲವಾರು ರಾಷ್ಟ್ರೀಕೃತ ಬ್ಯಾಂಕುಗಳು ಹುಟ್ಟಿದ ಈ ಜಿಲ್ಲೆಯಲ್ಲಿ, ಅವು ಸಂಕುಚಿತಗೊಳ್ಳುತ್ತಿರುವ ಕಾಲಘಟ್ಟದಲ್ಲಿ ಸಹಕಾರಿ ವ್ಯವಸಾಯಿಕ ಸಂಘಗಳು ಉತ್ತಮ ಸೇವೆಯಿಂದ ವಿಶ್ವಾಸಾರ್ಹತೆ ಸಂಪಾದಿಸಿ ಬಲಿಷ್ಠವಾಗಿ ಈ ಭಾಗದಲ್ಲಿ ಸಹಕಾರಿ ಕ್ಷೇತ್ರ ಬೆಳೆದಿದೆ. ಸಹಕಾರಿ ವ್ಯವಸ್ಥೆಗೆ ಜನರ ಸಹಕಾರ, ಸರಿಯಾದ ಸಮಯಕ್ಕೆ ಸಾಲದ ಮರುಪಾವತಿಯಿಂದಲಾಗಿದೆ ಇಂಥಹ ಗ್ರಾಮಾಂತರ ಪ್ರದೇಶದಲ್ಲಿ ಶಾಖೆಗಳು ಆರಂಭವಾಗುತ್ತಿದೆ ಎಂದು ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷರಾದ ಡಾ.ಎಂ.ಎನ್ ರಾಜೇಂದ್ರ ಕುಮಾರ್ ಹೇಳಿದರು.
ಅವರು ಸೆ.16ರಂದು ವಂಡ್ಸೆ ಸಹಕಾರಿ ವ್ಯವಸಾಯಿಕ ಸಂಘದ ಹೊಸೂರು ನೂತನ ಶಾಖೆ, ಕಟ್ಟಡವನ್ನು ಉದ್ಘಾಟಿಸಿ ಹೊಸೂರು ಕಾನ್‍ಬೇರು ಶ್ರೀ ಮಹಿಷಮರ್ದಿನಿ ದೇವಸ್ಥಾನದ ಸಭಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಆಯಾಯ ಗ್ರಾಮದ ಜನರ ಅಗತ್ಯತೆಗೆ ಬೇಕಾಗುವ ಸಾಲ ಸೌಲಭ್ಯವನ್ನು ಸಹಕಾರ ಸಂಘಗಳು ನೀಡಬೇಕು. ಅವರು ಸಾಲಕ್ಕಾಗಿ ಬೇರೆ ಕಡೆ ಅಲೆದಾಡಬಾರದು. ಸಾಲ ನೀಡಲು ಅಗತ್ಯದಷ್ಟು ಹಣವನ್ನು ದ.ಕ ಜಿಲ್ಲಾ ಕೇಂದ್ರ ಬ್ಯಾಂಕ್ ಒದಗಿಸುತ್ತದೆ. ಸಹಕಾರಿ ಸದಸ್ಯರಿಗೆ ಆರ್ಥಿಕ ಸಹಕಾರದಿಂದ ಅನುಕೂಲವಾಗಬೇಕು, ಕೃಷಿ ಅಭಿವೃದ್ಧಿ, ಉದ್ಯಮ ಮಾತ್ರವಲ್ಲದೆ ಮದುವೆಗೆ ಕೂಡಾ ತುರ್ತು ಸಾಲ ನೀಡುತ್ತಿರುವುದು ಶ್ಲಾಘನಾರ್ಹ ಎಂದು ಹೇಳಿದ ಅವರು ಗ್ರಾಮಾಂತರ ಪ್ರದೇಶದ ಸಹಕಾರಿಗಳ ಬೇಡಿಕೆಯಂತೆ ಇಲ್ಲಿ 55 ಲಕ್ಷ ವೆಚ್ಚದಲ್ಲಿ ಸ್ವಂತ ಕಟ್ಟಡ ನಿರ್ಮಾಣವಾಗಿದೆ. ಇದಕ್ಕೆ 7 ಲಕ್ಷ ರೂಪಾಯಿ ಅನುದಾನ ನೀಡುವುದಾಗಿ ಅವರು ಘೋಷಿಸಿದರು.
ಸಹಕಾರ ಕ್ಷೇತ್ರ ಇವತ್ತು ಬಲಿಷ್ಠವಾಗಿ ಬೆಳೆಯುತ್ತಿದೆ. ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಸಹಕಾರ ಕ್ಷೇತ್ರ ಬೆಳೆದಿದೆ. ಕೃಷಿಸಾಲ ಮರುಪಾವತಿಯಲ್ಲಿ ನಮ್ಮ ಜಿಲ್ಲೆ 28 ವರ್ಷಗಳಿಂದ ಮೊದಲ ಸ್ಥಾನದಲ್ಲಿದೆ. ದ.ಕ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕು ಕೂಡಾ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಗಮನ ಸಳೆಯುವ ಸಾಧನೆ ಮಾಡಿದೆ ಎಂದರು.
ವಂಡ್ಸೆ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷರಾದ ಎನ್.ಮಂಜಯ್ಯ ಶೆಟ್ಟಿ ಸಬ್ಲಾಡಿ ಅಧ್ಯಕ್ಷತೆ ವಹಿಸಿದ್ದರು. ಅಧ್ಯಕ್ಷೀಯ ಮಾತುಗಳನ್ನಾಡಿದ ಅವರು , ನಾನು ಗುತ್ತಿಗೆ ವೃತ್ತಿಯನ್ನು ಆರಂಭಿಸಿದ್ದು ಈ ಹೊಸೂರು ಗ್ರಾಮದಿಂದಲೇ. ಈ ಗ್ರಾಮದಲ್ಲಿ ಸಹಕಾರಿ ಸಂಸ್ಥೆಯ ಪೂರ್ಣ ಪ್ರಮಾಣದ ಶಾಖೆ ಆರಂಭಿಸಬೇಕು ಎನ್ನುವುದು ನನ್ನ ಯೋಚನೆಯಾಗಿದ್ದು ಸಹಕಾರಿಗಳ ಬೇಡಿಕೇಯೂ ಆಗಿತ್ತು. ಕಳೆದ ವರ್ಷ ಮಹಾಸಭೆಯಲ್ಲಿ ತಿಳಿಸಿದಂತೆ ಶಾಖೆ ದಾನಿಗಳ ಕೊಡಮಾಡಿದ ಸ್ಥಳದಲ್ಲಿ ಸ್ವಂತ ಕಟ್ಟಡದೊಂದಿಗೆ ಆರಂಭವಾಗಿದೆ. ಮುಂದೆ ಬೆಳ್ಳಾಲದಲ್ಲಿ ಕೂಡಾ ಶಾಖೆ ತೆರೆಯುವುದು, ಚಿತ್ತೂರಲ್ಲಿ ಶಾಖೆಗೆ ಸ್ವಂತ ಕಟ್ಟಡ ಮುಂದಿನ ಗುರಿಯಾಗಿದೆ ಎಂದರು.
ಪ್ರಸ್ತುತ 5737 ಎ ದರ್ಜೆ ಸದಸ್ಯರು, 5598 ಕ ದರ್ಜೆ ಸದಸ್ಯರನ್ನು ಹೊಂದಿ ರೂ.32,315,245 ಪಾಲುಹಣವನ್ನು ಹೊಂದಿದೆ. ರೂ.512,234,966.22 ಒಟ್ಟು ವಿವಿಧ ಠೇವಣಾತಿಗಳನ್ನು ಹೊಂದಿದೆ. ದ.ಕ ಜಿಲ್ಲಾ ಕೇಂದ್ರ ಬ್ಯಾಂಕಿನಿಂದ 425,814,469 ರೂ.ಸಾಲ ಪಡೆಯಲಾಗಿದೆ. ಸರಕಾರ ರೂಪಿಸಿದ ಕಿಸಾನ್ ಕ್ರೆಡಿಟ್ ಸಾಲ ಯೋಜನೆಯಲ್ಲಿ ರೈತ ಸದಸ್ಯರಿಗೆ ರೂ.19,19,30,500 ಮುಂಗಡ ನೀಡಲಾಗಿದೆ. ವರದಿ ವರ್ಷದಲ್ಲಿ 1 ಕೋಟಿ 33 ಲಕ್ಷ ಲಾಭ ಗಳಿಸಿದೆ. ಸಂಘದ ಸೇವೆ ಮತ್ತು ಪೂರೈಕೆ ವಿಭಾಗದ ಅಂಗವಾಗಿ ಆರು ನ್ಯಾಯಬೆಲೆ ಅಂಗಡಿಗಳನ್ನು ಹೊಂದಿ ಪಡಿತರ ಸಾಮಗ್ರಿ ಮತ್ತು ರೈತ ಸದಸ್ಯರುಗಳಿಗೆ ಅನುಕೂಲವಾಗುವಂತೆ ರಸಗೊಬ್ಬರ ವಿತರಿಸಲಾಗುತ್ತಿದೆ ಎಂದರು.
ಪಡಿತರ ವಿಭಾಗವನ್ನು ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಉದ್ಘಾಟಿಸಿದರು. ಸೇಪ್ ಲಾಕರ್‍  ಜಿಲ್ಲಾ ಸಹಕಾರಿ ಯೂನಿಯನ್ ಉಡುಪಿ ಇದರ ಅಧ್ಯಕ್ಷರಾದ ಜಯಕರ ಶೆಟ್ಟಿ ಇಂದ್ರಾಳಿ ಉದ್ಘಾಟಿಸಿದರು.
ಮೂಕಾಂಬಿಕಾ ದೇವಸ್ಥಾನ ಕೊಲ್ಲೂರು ಇದರ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯರಾದ ವಂಡಬಳ್ಳಿ ಜಯರಾಮ ಶೆಟ್ಟಿ, ಡಾ.ಅತುಲ್ ಕುಮಾರ್ ಶೆಟ್ಟಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕರಾದ ಎಸ್.ರಾಜು ಪೂಜಾರಿ, ಎಂ.ಮಹೇಶ್ ಹೆಗ್ಡೆ, ಇಡೂರು-ಕುಂಜ್ಞಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಆಶಾ ಆಚಾರ್ಯ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಅರುಣಕುಮಾರ್ ಶೆಟ್ಟಿ, ಸ್ಥಳದಾನಿಗಳಾದ ಭೋಜರಾಜ ಶೆಟ್ಟಿ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಕದಳಿ ಹೊಸೂರು ಇಲ್ಲಿನ ಆಡಳಿತ ಮೊಕ್ತೇಸರ ರಮಾನಂದ ಮಧ್ಯಸ್ಥ, ಹೊಸೂರು ಕಾನ್‍ಬೇರು ಶ್ರೀ ಮಹಿಷಾಮರ್ದಿನಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ದೇವಲ್ಕುಂದ ಶಿವರಾಮ ಶೆಟ್ಟಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಡಾ.ಎಂಎನ್ ರಾಜೇಂದ್ರ ಕುಮಾರ್, ಸ್ಥಳದಾನಿಗಳಾದ ಮೂಕಾಂಬು ಭೋಜರಾಜ ಶೆಟ್ಟಿ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. ಹಾಗೂ ಹೊಸೂರು ಗ್ರಾಮಸ್ಥರು, ಸಂಘದ ಸ್ಥಳೀಯ ನಿರ್ದೇಶಕರ ವತಿಯಿಂದ ಸಂಘದ ಅಧ್ಯಕ್ಷರಾದ ಎನ್. ಮಂಜಯ್ಯ ಶೆಟ್ಟಿ ಸಬ್ಲಾಡಿ ಅವರನ್ನು ಸನ್ಮಾನಿಸಲಾಯಿತು. ಬೇರೆ ಬೇರೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರು, ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳನ್ನು ಗೌರವಿಸಲಾಯಿತು.
ಸಂಘದ ಉಪಾಧ್ಯಕ್ಷರಾದ ಜಗನ್ನಾಥ ಶೆಟ್ಟಿ ಹೊಸೂರು, ಮಖ್ಯಕಾರ್ಯನಿರ್ವಹಣಾಧಿಕಾರಿ ಸೀತಾರಾಮ ಜಿ ಪೂಜಾರಿ, ನಿರ್ದೇಶಕರಾದ ಕೆ.ಭುಜಂಗ ಶೆಟ್ಟಿ ಕೆರಾಡಿ, ಐ.ಗೋವರ್ಧನ ಶೆಟ್ಟಿ ಇಡೂರು, ಬಿ.ರಾಮ ಹೊಸೂರು, ಸಂಜೀವ ಪೂಜಾರಿ ವಂಡ್ಸೆ, ಎ.ಜಯರಾಮ ಶೆಟ್ಟಿ ವಂಡ್ಸೆ, ಶೀನಪ್ಪ ಶೆಟ್ಟಿ ಹೊಸೂರು, ಕ್ರಷ್ಣಯ್ಯ ಆಚಾರ್ ಚಿತ್ತೂರು, ಶ್ರೀಮತಿ ಕಸ್ತೂರಿ ಎಸ್.ಶೆಟ್ಟಿ ಚಿತ್ತೂರು, ರಾಮಚಂದ್ರ ಮಂಜ ಚಿತ್ತೂರು, ಸುನೀಲ್ ನಾಯ್ಕ್ ಕೆರಾಡಿ, ಶ್ರೀಮತಿ ನಾಗರತ್ನ ಶೆಟ್ಟಿ ಹೊಸೂರು, ಶೇಖರ ಶೆಟ್ಟಿ ಬೆಳ್ಳಾಲ, ಶಿವಪ್ಪ ಶೆಟ್ಟಿ ಜನ್ನಾಲು, ವಲಯ ಮೇಲ್ವಿಚಾರಕರಾದ ಚಂದ್ರಶೇಖರ ಶೆಟ್ಟಿ ಉಪಸ್ಥಿತರಿದ್ದರು.
ಸಂಘದ ಅಧ್ಯಕ್ಷರಾದ ಎನ್.ಮಂಜಯ್ಯ ಶೆಟ್ಟಿ ಸಬ್ಲಾಡಿ ಸ್ವಾಗತಿಸಿ ಪ್ರಸ್ತಾವಿಕ ಮಾತುಗಳನ್ನಾಡಿದರು. ಪ್ರವೀಣ ಶೆಟ್ಟಿ ಸನ್ಮಾನ ಪತ್ರ ವಾಚಿಸಿದರು. ಮಖ್ಯಕಾರ್ಯನಿರ್ವಹಣಾಧಿಕಾರಿ ಸೀತಾರಾಮ ಜಿ ಪೂಜಾರಿ ವಂದಿಸಿದರು. ಪತ್ರಕರ್ತ ಸುಬ್ರಹ್ಮಣ್ಯ ಪಡುಕೋಣೆ ಕಾರ್ಯಕ್ರಮ ನಿರ್ವಹಿಸಿದರು.

ವಿಡಿಯೋ ಲಿಂಕ್ https://fb.watch/uDSl2dIfHu/

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!