Saturday, September 21, 2024

ಕೋಟೇಶ್ವರ: ಸೆ.15, 16 ರಂದು ಕೋಟಿಲಿಂಗೇಶ್ವರ ದೇಗುಲಕ್ಕೆ ರಜತ ರಥ ಸಮರ್ಪಣೆ

ಕೋಟೇಶ್ವರ: ಶ್ರೀ ಕೋಟಿಲಿಂಗೇಶ್ವರ ದೇಗುಲಕ್ಕೆ ಭಕ್ತರ ದೇಣಿಗೆಯಿಂದ 1.25 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ನೂತನ ರಜತ ರಥ ಸಮರ್ಪಣೆ ಕಾರ್ಯಕ್ರಮ ಸೆ.15 ಹಾಗೂ ಸೆ.16 ರಂದು ನಡೆಯಲಿದೆ.

ಖ್ಯಾತ ರಥಶಿಲ್ಪಿಗಳಾದ ಲಕ್ಷ್ಮೀ ನಾರಾಯಣ ಆಚಾರ್ಯ ಹಾಗೂ ರಾಜಗೋಪಾಲ ಆಚಾರ್ಯ ಅವರ ನೇತೃತ್ವದಲ್ಲಿ ನಿರ್ಮಿಸಲಾದ ನೂತನ ರಥವನ್ನು ಸೆ.15ರಂದು ಮಧ್ಯಾಹ್ನ 3ಗಂಟೆಗೆ ಇಲ್ಲಿನ ಶ್ರೀ ವಿಶ್ವಕರ್ಮ ಕರಕುಶಲ ಶಿಲ್ಪ ಕಲಾ ಶಾಲೆಯಿಂದ ರಜತರಥವನ್ನು ಪುರಮೆರವಣಿಗೆಯೊಂದಿಗೆ ಭಕ್ತರ ಸಮ್ಮುಖದಲ್ಲಿ ದೇಗುಲಕ್ಕೆ ತರಲಾಗುವುದು. ಸೆ.15 ಹಾಗೂ 16 ರಂದು ದೇಗುಲದ ಪ್ರಧಾನ ತಂತ್ರಿ ಪ್ರಸನ್ನಕುಮಾರ್ ಐತಾಳ್ ಅವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಗಳು ನಡೆಯಲಿದೆ.

ಸೆ.16 ರಂದು ಮಧ್ಯಾಹ್ನ ಅನ್ನಸಂತರ್ಪಣೆ ಹಾಗೂ ರಾತ್ರಿ 8 ಗಂಟೆಗೆ ಶ್ರೀ ದೇವರಿಗೆ ರಜತ ರಥ ಸಮರ್ಪಣೆ, ರಂಗಪೂಜೆ ಇನ್ನಿತರ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ ಎಂದು ದೇಗುಲದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೃಷ್ಣದೇವಕಾರಂತ ಕೋಣಿ ಅವರು ಸೆ.8 ರಂದು ಸಂಜೆ ದೇಗುಲದಲ್ಲಿ ನಡೆದ ವಿಶೇಷ ಸಭೆಯಲ್ಲಿ ತಿಳಿಸಿದ್ದಾರೆ. ರಥಶಿಲ್ಪಿ ರಾಜಗೋಪಾಲ ಆಚಾರ್ಯ ಮಾತನಾಡಿ, ಹದಿಮೂರುವರೆ ಫೀಟ್ ಎತ್ತರದ ನೂತನ ರಥವನ್ನು ಒಂದು ತಿಂಗಳ ಅವಧಿಯಲ್ಲಿ ನಿರ್ಮಾಣ ಮಾಡಲಾಗುತ್ತಿದೆ.  ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ಪ್ರಭಾಕರ ಶೆಟ್ಟಿ ಮಾತನಾಡಿ, ಕಾರ್ಯಕ್ರಮದಲ್ಲಿ ಭಕ್ತರ ಪಾಲ್ಗೊಳ್ಳುವಿಕೆ ಮಹತ್ವವಾದದ್ದು ಎಂದರು. ಮಾಜಿ ಧರ್ಮದರ್ಶಿಗಳಾದ ಸುರೇಶ ಬೆಟ್ಟಿನ್ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾತನಾಡಿದರು. ಬಿ.ಹೆರಿಯಣ್ಣ ಉಪಸ್ಥಿತರಿದ್ದರು.

ವಸ್ತ್ರ ಧಾರಣೆ:- ರಜತ ರಥ ಸಮರ್ಪಣ ಕಾರ್ಯಕ್ರಮದ ಪುರಮೆರವಣಿಗೆಯಲ್ಲಿ ಪುರುಷರು ಹಾಗೂ ಮಹಿಳೆಯರಿಗೆ ವಸ್ತ್ರ ಧಾರಣೆ ಬಗ್ಗೆ ವಿವರಿಸಲಾಗಿದ್ದು, ರಥಬೀದಿಯನ್ನು ಮಾವಿನತೋರಣಗಳಿಂದ ಶೃಂಗಾರ ಮಾಡುವುದಲ್ಲದೇ ದೀಪಾಲಂಕಾರಗೊಳಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಯಿತು. ಪುರಮೆರವಣಿಗೆಯಲ್ಲಿ ೧೫ ಭಜನ ತಂಡಗಳು, ಟ್ಯಾಬ್ಲೋ, ಕೀಲುಕುದುರೆ, ಪಂಚವಾದ್ಯ, ಅಲ್ಲದೇ ಇನ್ನಿತರ ವ್ಯವಸ್ಥೆಯನ್ನು ಅಣಿಗೊಳಿಸಲಾಗಿದೆ.

ಸುರೇಶ ಬೆಟ್ಟಿನ್ ಸ್ವಾಗತಿಸಿ ಪ್ರಾಸ್ತಾವಿಸಿದರು. ಚಂದ್ರಿಕಾ ಧನ್ಯ ವಂದಿಸಿದರು.

 

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!