Sunday, October 13, 2024

ವಿದೇಶ ಪ್ರವಾಸಕ್ಕೆ ತೆರಳುವ ಮೋದಿ, ಉದ್ದೇಶಪೂರ್ವಕವಾಗಿಯೇ ಮಣಿಪುರಕ್ಕೆ ಭೇಟಿ ನೀಡುತ್ತಿಲ್ಲ : ಜೈರಾಮ್‌ ರಮೇಶ್‌

ಜನಪ್ರತಿನಿಧಿ (ನವದೆಹಲಿ) : ಸಂಘರ್ಷ ಪೀಡಿತ ಮಣಿಪುರದಲ್ಲಿನ ಪರಿಸ್ಥಿತಿ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ಇಂದು(ಶನಿವಾರ) ವಾಗ್ದಾಳಿ ಮಾಡಿದೆ. ದೇಶದ ಇತರ ಭಾಗಗಳು ಮತ್ತು ವಿದೇಶಗಳಿಗೆ ಪ್ರವಾಸಕ್ಕೆ ತೆರಳುವ ಪ್ರಧಾನಿ, ಹೆಚ್ಚಿನ ತೊಂದರೆ ಪೀಡಿತ ರಾಜ್ಯಕ್ಕೆ ಉದ್ದೇಶ ಪೂರ್ವಕವಾಗಿ ಭೇಟಿಯನ್ನು ನೀಡುತ್ತಿಲ್ಲ ಎಂದು ಕಿಡಿಕಾರಿದೆ.

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ಸಂವಹನದ ಉಸ್ತುವಾರಿ ಜೈರಾಮ್ ರಮೇಶ್, 2023ರ ಮೇ 3ರಂದು ಮಣಿಪುರ ಸಂಘರ್ಷದಿಂದ ಹೊತ್ತಿ ಉರಿಯಲು ಆರಂಭಿಸಿತು. 2023ರ ಜೂನ್ 4ರಂದು ಹಿಂಸಾಚಾರ, ಗಲಭೆಗೆ ಕಾರಣಗಳ ತನಿಖೆ ನಡೆಸಲು ಮೂವರು ಸದಸ್ಯರ ತನಿಖಾ ಆಯೋಗವನ್ನು ರಚಿಸಲಾಗಿದೆ. ಆಯೋಗಕ್ಕೆ ವರದಿ ಸಲ್ಲಿಸಲು ಆರು ತಿಂಗಳ ಕಾಲಾವಕಾಶ ನೀಡಲಾಗಿತ್ತು. ಆದರೆ, ಇದುವರೆಗೆ ಯಾವುದೇ ವರದಿ ಸಲ್ಲಿಸಿಲ್ಲ. ಆಯೋಗಕ್ಕೆ 2024ರ ನವೆಂಬರ್ 24ರವರೆಗೆ ಕಾಲಾವಕಾಶ ನೀಡಲಾಗಿದೆ ಎಂದು ಹೇಳಿದ್ದಾರೆ.

ಈ ಮಧ್ಯೆ ಮಣಿಪುರದ ಜನರ ನೋವು, ಸಂಕಟ ಅಡೆತಡೆಯಿಲ್ಲದೆ ಮುಂದುವರಿದಿದೆ. ಜೀವ ವಿಲ್ಲದ ಪ್ರಧಾನಿ ಅತ್ಯಂತ ತೊಂದರೆಗೀಡಾದ ರಾಜ್ಯಕ್ಕೆ ಭೇಟಿ ನೀಡುವುದನ್ನು ಉದ್ದೇಶಪೂರ್ವಕವಾಗಿ ತಡೆಯುವ ಮೂಲಕ ದೇಶದ ಇತರ ಭಾಗಗಳು ಮತ್ತು ವಿದೇಶಗಳ ಭೇಟಿಯನ್ನು ಮುಂದುವರೆಸಿದ್ದಾರೆ ಎಂದು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಜೈರಾಮ್ ರಮೇಶ್ ಫೋಸ್ಟ್ ಮಾಡಿದ್ದಾರೆ.

ಮಣಿಪುರದಲ್ಲಿ ಇದುವರೆಗೆ 220 ಕ್ಕೂ ಹೆಚ್ಚು ಜೀವಗಳನ್ನು ಬಲಿ ಪಡೆದ ಸರಣಿ ಹಿಂಸಾಚಾರದ ತನಿಖೆಗಳ ಕುರಿತು ವರದಿ ಸಲ್ಲಿಸಲು ಕೇಂದ್ರ ಸರ್ಕಾರ ತನಿಖಾ ಆಯೋಗಕ್ಕೆ ನವೆಂಬರ್ 20 ರವರೆಗೆ ಸಮಯ ನೀಡಿದ ಬೆನ್ನಲ್ಲೇ ಜೈರಾಮ್ ರಮೇಶ್ ಈ ಹೇಳಿಕೆ ನೀಡಿದ್ದಾರೆ.

https://x.com/Jairam_Ramesh/status/1834793297618804951

ಗುವಾಹಟಿ ಹೈಕೋರ್ಟ್‌ನ ಮಾಜಿ ಮುಖ್ಯ ನ್ಯಾಯಮೂರ್ತಿ ಅಜಯ್ ಲಂಬಾ ನೇತೃತ್ವದ ಆಯೋಗವನ್ನು ಜೂನ್ 4, 2023 ರಂದು ರಚಿಸಲಾಯಿತು. ನಿವೃತ್ತ ಐಎಎಸ್ ಅಧಿಕಾರಿ ಹಿಮಾಂಶು ಶೇಖರ್ ದಾಸ್ ಮತ್ತು ನಿವೃತ್ತ ಐಪಿಎಸ್ ಅಧಿಕಾರಿ ಅಲೋಕ ಪ್ರಭಾಕರ್ ಅವರನ್ನೊಳಗೊಂಡ ಸಮಿತಿಯು ಮೇ 3 ರಿಂದ ಮಣಿಪುರದಲ್ಲಿ ವಿವಿಧ ಸಮುದಾಯಗಳ ಸದಸ್ಯರನ್ನು ಗುರಿಯಾಗಿಸಿಕೊಂಡು ನಡೆದ ಹಿಂಸಾಚಾರ, ಗಲಭೆಗೆ ಕಾರಣಗಳು ಮತ್ತು ಪ್ರಸರಣಕ್ಕೆ ಸಂಬಂಧಿಸಿದಂತೆ ವಿಚಾರಣೆಯನ್ನು ಕಡ್ಡಾಯಮಾಡಲಾಗಿದೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!