Saturday, October 12, 2024

ಕೆ.ಐ.ಸಿ.ಎಂ, ಮೂಡುಬಿದಿರೆಯಲ್ಲಿ ಶಿಕ್ಷಕರ ದಿನಾಚರಣೆ| ಡಿಸಿಎಂ ಕೋರ್ಸ್ RANK ವಿಜೇತರಿಗೆ ಸನ್ಮಾನ

ಮೂಡುಬಿದಿರೆ: ಕರ್ನಾಟಕ ಇನ್ಸಿಟ್ಯೂಟ್ ಆಫ್ ಕೋ ಆಪರೇಟಿವ್ ಮ್ಯಾನೇಜ್‍ಮೆಂಟ್ ಮೂಡುಬಿದಿರೆಯ ತರಬೇತಿ ಸಂಸ್ಥೆಯಲ್ಲಿ ಶಿಕ್ಷಕರ ದಿನಾಚರಣೆ ಮತ್ತು ಜನವರಿಯಿಂದ ಜುಲೈ 2024ರ ಅಧಿವೇಶದ ಡಿಸಿಎಂ ಕೋರ್ಸ್ ರ್ಯಾಂಕ್ ವಿಜೇತರಿಗೆ ಸನ್ಮಾನ ಕಾರ್ಯಕ್ರಮವನ್ನು ನಡೆಯಿತು.

ಈ ಕಾರ್ಯಕ್ರಮದಲಿ ಸಹಕಾರ ರತ್ನ  ಪ್ರಸಸ್ತಿ ಪುರಸ್ಕøತರೂ, ರಾಜ್ಯದ ಸಹಕಾರ ಸಂಘಗಳ ಮಾತೃಸಂಸ್ಥೆಯಾದ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ಬೆಂಗಳೂರು ಇದರ ನಿರ್ದೇಶಕರು ಮತ್ತು ಉಡುಪಿ ಕೋ ಆಪರೇಟಿವ್ ಯೂನಿಯನ್‍ನ ಅಧ್ಯಕ್ಷರಾದ ಜಯಕರ ಶೆಟ್ಟಿ ಇಂದ್ರಾಳಿರವರು ಮುಖ್ಯ ಅತಿಥಿಗಳಾಗಿ ಆಗಮಿಸಿ, ಆರು Rank ವಿಜೇತರನ್ನು ಸನ್ಮಾನಿಸಿ ಅಭಿನಂದನೆಗಳನ್ನು ತಿಳಿಸಿದರು. ಎಲ್ಲಾ ಶಿಕ್ಷಣಾಥಿಗಳಿಗೆ ಪ್ರೇರೇಪಣಾ ಪೂರಕವಾದ ಸಹಕಾರಿ ಮಾಹಿತಿಗಳನ್ನು ಮತ್ತು ಶೈಕ್ಷಣಿಕ ಸಲಹೆಗಳನ್ನು ತಿಳಿಸಿದರು. Rank ಪಡೆದ ಶಿಕ್ಷಣಾರ್ಥಿಗಳನ್ನು ಮತ್ತು ಶಿಕ್ಷಣಾರ್ಥಿಗಳ ಸಾಧನೆಯಲ್ಲಿ ಗುರುಗಳ ಮಾರ್ಗದರ್ಶನದ ಬಗ್ಗೆ ಅಭಿನಂದಿಸುತ್ತಾ, ಶಿಕ್ಷಣ ಕ್ಷೇತ್ರದಲ್ಲಿ ಶಿಕ್ಷ್ಷಣಾರ್ಥಿಗಳಿಗೆ ಈಗಿರುವ ಸವಲತ್ತುಗಳ ಬಗ್ಗೆ, ಜೀವನದಲ್ಲಿ ಶ್ರೇಷ್ಠತೆಯನ್ನು ಪಡೆಯುವಲ್ಲಿ ವಿದ್ಯಾರ್ಥಿಗಳು ಹೇಗೆ ಸಮರ್ಥರಾಗಬೇಕೆಂದು, ಬಡಗಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯನ್ನು ಉನ್ನತ ಸ್ಥಾನಕ್ಕೆ ತರುವಲ್ಲಿ ತಾವು ಶ್ರಮವಹಿಸಿ ಕೈಗೊಳ್ಳಲಾದ ಕಾರ್ಯಕ್ರಗಳ ಬಗ್ಗೆ ಮಾತನಾಡುತ್ತಾ ಶಿಕ್ಷಣಾರ್ಥಿಗಳಿಗೆ ಸ್ಪೂರ್ತಿದಾಯಕ ಮಾತುಗಳಾನ್ನಾಡಿದರು.

ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದ ಮುಡುಬಿದಿರೆಯ ಎಕ್ಸೆಲೆಂಟ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ  ಪ್ರದೀಪ್ ಕುಮಾರ್ ಶೆಟ್ಟಿ ರವರು ಕರ್ಯಕ್ರಮ ಕುರಿತು ಮಾತನಾಡುತ್ತಾ, ಸ್ಪರ್ಧಾತ್ಮ್ಮಕ ಯುಗದಲ್ಲಿ IAS/KAS ಪರೀಕ್ಷೆಗಳನ್ನು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ವಿದ್ಯಾರ್ಥಿಗಳು ಸಮರ್ಥವಾಗಿ ಎದುರಿಸಿ, ಅಂತಹ ಕ್ಷೇತ್ರದಲ್ಲಿ ನಮ್ಮ ಶಿಕ್ಷಣಾರ್ಥಿಗಳು ಹೆಚ್ಚು ಹೆಚ್ಚು ಸಂಖ್ಯೆಗಳಲ್ಲಿ ಪರೀಕ್ಷೆಗಳನ್ನು ಬರೆದು ಆಡಳಿತಾತ್ಮಕ ಹುದ್ದೆಗಳನ್ನು ಪಡೆಯುವಲ್ಲಿ ಪ್ರಯತ್ನಿಸಬೇಕೆಂದು ಸಲಹೆ ನೀಡಿ, ಶಿಕ್ಷಣದ ಮಹತ್ವವನ್ನು ತಿಳಿಸಿ ರ್ಯಾಂಕ್ ವಿಜೇತರು ಮತ್ತು ಎಲ್ಲಾ ಶಿಕ್ಷಣಾರ್ಥಿಗಳ ಭವಿಷ್ಯ ಉಜ್ವಲವಾಗಲಿ ಎಂದು ಶುಭ ಕೋರಿದರು.

ಅತಿಥಿಗಳಾಗಿ ಆಗಮಿಸಿದ ಕರ್ನಾಟಕ ರಾಜ್ಯ ಸ್ಕೌಟ್ಸ್ ಮತ್ತು ಗೈಡ್ಸ್‍ನ ರಾಜ್ಯ ಸಂಘಟಕರಾದ ಶ್ರೀಮತಿ ಸುಮನ ಶೇಖರ್‍ರವರು ಭಾಗವಹಿಸಿ ಕಾರ್ಯಕ್ರದ ಬಗ್ಗೆ ಮತ್ತು Rank ವಿಜೇತ ಶಿಕ್ಷಣಾರ್ಥಿಗಳ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿ ಎಲ್ಲಾ ಶಿಕ್ಷಣಾರ್ಥಿಗಳಿಗೆ ಶುಭ ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಂಶುಪಾಲರಾದ ಡಾ. ಎಂ. ವಿಶ್ವೇಶ್ವರಯ್ಯರವರು, ಶಿಕ್ಷಣಾರ್ಥಿಗಳ ಸಾಧನೆ, ಶ್ರದ್ಧೆ ಮತ್ತು ನಿರಂತರ ಪರಿಶ್ರಮದ ಪ್ರತಿಫಲವಾಗಿದ್ದು, ಇತರೆ ಶಿಕ್ಷಣಾರ್ಥಿಗಳಿಗೆ ಮಾದರಿಯಾಗಿದೆ ಎಂದರು. ಜೀವನದಲ್ಲಿ ಗುರಿಯನ್ನು ಇಟ್ಟುಕೊಳ್ಳುವುದರ ಮಹತ್ವವನ್ನು ತಿಳಿಸಿದರು.

ಕಾರ್ಯಕ್ರಮವನ್ನು ತರಬೇತಿ ಸಂಸ್ಥೆಯ ಹಿರಿಯ ಉಪನ್ಯಾಸಕಿ ಶ್ರೀಮತಿ ಬಿಂದು ಬಿ ನಾಯರ್ ರವರು ಸ್ವಾಗತಿಸಿದರು. ಶಿಕ್ಷಣಾರ್ಥಿ ಹರೀಶ್ ರವರು ಕಾರ್ಯಕ್ರಮವನ್ನು ನಿರೂಪಿಸಿದರು, ಉಪನ್ಯಾಸಕರಾದ ಹರೀಶ್ ಬಿ.ಬಿ ವಂದಿಸಿದರು. ತರಬೇತಿ ಸಂಸ್ಥೆಯ 69ನೇ ತಂಡದ ಡಿ.ಸಿಎಂ ಶಿಕ್ಷಣಾರ್ಥಿಗಳು ಸಂಸ್ಥೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

 

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!