Saturday, October 12, 2024

ಸಪ್ಟೆಂಬರ್ 14 ಮತ್ತು 15 ರಂದು ಯಕ್ಷಗಾನ ಕಲಾಕೇಂದ್ರದಲ್ಲಿ ಯಕ್ಷಗಾನ ಬಣ್ಣಗಾರಿಕೆ ಮತ್ತು ವೇಷಗಾರಿಕೆ ಕಾರ್ಯಗಾರ

ಸಾಲಿಗ್ರಾಮ: ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಇವರು ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ ಇವರ ಸಹಯೋಗದೊಂದಿಗೆ ಎರಡು ದಿನಗಳ ’ ಯಕ್ಷಗಾನ ಬಣ್ಣಗಾರಿಕೆ ಮತ್ತು ವೇಷಗಾರಿಕೆ ಕಾರ್ಯಗಾರ’ ವನ್ನು ದಿನಾಂಕ 14-9-2024 ಮತ್ತು15-9-2024 ರಂದು ಬೆಳ್ಳಿಗ್ಗೆ 10 ಗಂಟೆಗೆ ಸಾಲಿಗ್ರಾಮದ ಗುಂಡ್ಮಿಯಲ್ಲಿರುವ ಯಕ್ಷಗಾನ ಕಲಾಕೇಂದ್ರದ ಸದಾನಂದ ರಂಗ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ.

ದಿನಾಂಕ 14 ಸಪ್ಟೆಂಬರ್ 2024 ರಂದು ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾದ ಡಾ. ತಲ್ಲೂರು ಶಿವರಾಮ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ಮಾಹೆಯ ಸಹ ಕುಲಪತಿಗಳಾದ ಡಾ. ಹೆಚ್.ಎಸ್. ಬಳ್ಳಾಲ್ ಇವರು ಈ ಕಾರ್ಯಕ್ರಮದ ಉದ್ಘಾಟನೆ ಮಾಡಲಿರುವರು. ಉಡುಪಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀಮತಿ ಪೂರ್ಣಿಮ, ಉದ್ಯಮಿ ಎಮ್ ದಿನೇಶ ಹೆಗ್ಡೆ ಉಪಸ್ಥಿತರಿರುವರು.

ಗಣೇಶ ಚೇರ್ಕಾಡಿ ನಿರ್ದೇಶನದಲ್ಲಿ  ಗಣೇಶ ಜನ್ನಾಡಿ,  ಮಿಥುನ್ ಬ್ರಹ್ಮಾವರ,  ವೈಕುಂಠ ಹೇರ್ಳೆ, ಅಶೋಕ್ ಆಚಾರ್,  ಕೂರಾಡಿ ರಾಮ ಬಾಯರಿ, ಶ್ರೀಕಾಂತ ವಡ್ಡರ್ಸೆ,  ಸೀತಾರಾಮ ಸೋಮಯಾಜಿ,  ವಿಭವನ್ ಗುಂಡ್ಮಿ  ಕೇಶವ ಆಚಾರ್ ಇವರುಳು ಕಾರ್ಯಗಾರದಲ್ಲಿ ಯಕ್ಷಗಾನ ಕೇಂದ್ರದ ವಿದ್ಯಾರ್ಥಿಗಳಿಗೆ ಬಣ್ಣಗಾರಿಕೆ ಮತ್ತು ವೇಷಗಾರಿಕೆಯನ್ನು ಕಲಿಸಿಕೂಡುವ ಸಂಪನ್ಮೂಲ ವ್ಯಕ್ತಿಗಳು.

ದಿನಾಂಕ 15 ಸಪ್ಟೆಂಬರ್ 2024 ರಂದು ಅಪರಾಹ್ನ 12 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು ತಲ್ಲೂರು ಶಿವರಾಮ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಕಲಾಕೇಂದ್ರದ ಅಧ್ಯಕ್ಷರಾದ ಆನಂದ ಸಿ ಕುಂದರ್, ಕಲಾರಂಗದ ಕಾರ್ಯದರ್ಶಿ ಮುರಳಿ ಕಡೆಕಾರ್ ಉಪಸ್ಥಿತರಿರುತ್ತಾರೆ.

 

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!