Saturday, September 21, 2024

ದೆಹಲಿ ಅಬಕಾರಿ ನೀತಿ ಹಗರಣ : ಸುದೀರ್ಘ ಜೈಲುವಾಸವು ಸ್ವಾತಂತ್ರ್ಯದ ಹರಣಕ್ಕೆ ಸಮ : ʼಸುಪ್ರೀಂʼ

ಜನಪ್ರತಿನಿಧಿ (ನವದೆಹಲಿ) :  ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರದ್ದು ಕಾನೂನಾತ್ಮಕ ಬಂಧನವೇ ಆಗಿದ್ದರೂ, ಅವರ ಸುದೀರ್ಘ ಜೈಲುವಾಸವು ಸ್ವಾತಂತ್ರ್ಯದ ಹರಣಕ್ಕೆ ಸರಿಯಾಗಿದೆ ಎಂದು ಸುಪ್ರೀಂ ಕೋರ್ಟ್ ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಭ್ರಷ್ಟಾಚಾರ ಪ್ರಕರಣದಲ್ಲಿ ಅರವಿಂದ ಕೇಜ್ರಿವಾಲ್ ಗೆ ಸುಪ್ರೀಂ ಕೋರ್ಟ್ ಇಂದು(ಶುಕ್ರವಾರ) ಜಾಮೀನು ಮಂಜೂರು ಮಾಡಿ ಆದೇಶಿಸಿದೆ.

ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಉಜ್ವಲ್ ಭುಯಾನ್ ಅವರ ನೇತೃತ್ವದ ನ್ಯಾಯಪೀಠ ಕೇಜ್ರಿವಾಲ್ ಅವರಿಗೆ ಜಾಮೀನು ಮಂಜೂರು ತೀರ್ಪು ಪ್ರಕಟಿಸಿದೆ. 10 ಲಕ್ಷ ರೂ ಜಾಮೀನು ಬಾಂಡ್ ಮತ್ತು ಇಬ್ಬರು ಶ್ಯೂರಿಟಿಗಳ ಆಧಾರದಲ್ಲಿ ಕೇಜ್ರಿವಾಲ್ ಅವರಿಗೆ ಜಾಮೀನು ನೀಡಿದೆ.

ಇನ್ನು, ಪ್ರಕರಣಕ್ಕೆ ಸಂಬಂಧಿಸಿದಂತೆ ಸಾರ್ವಜನಿಕವಾಗಿ ಯಾವುದೇ ರೀತಿಯ ಪ್ರತಿಕ್ರಿಯೆ ನೀಡದಂತೆ ಕೇಜ್ರಿವಾಲ್ ಅವರಿಗೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.

ಸುದೀರ್ಘ ಜೈಲುವಾಸ ಸ್ವಾತಂತ್ರ್ಯದ ಹರಣಕ್ಕೆ ಸಮಾನ  

ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಜಾಮೀನು ತೀರ್ಪಿನ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಅನೇಕ ಗಮನಾರ್ಹ ಅಂಶಗಳನ್ನು ಉಲ್ಲೇಖಿಸಿದ್ದು, ಪ್ರಮುಖವಾಗಿ ‘ಸುದೀರ್ಘ ಜೈಲುವಾಸ ಸ್ವಾತಂತ್ರ್ಯದ ಹರಣಕ್ಕೆ ಸಮಾನವಾಗಿದೆ. ಸಿಬಿಐ ಪ್ರಕರಣದಲ್ಲಿ ಮತ್ತಷ್ಟು ಬಂಧನ ಸಂಪೂರ್ಣ ಅಸಮರ್ಥನೀಯ ಎಂದು ನ್ಯಾಯಮೂರ್ತಿ ಭುಯಾನ್ ಹೇಳಿದ್ದಾರೆ. ಅಷ್ಟಲ್ಲದೇ ಜಾಮೀನು ನಿಯಮ ಮತ್ತು ಜೈಲು ಒಂದು ಅಪವಾದ. ವಿಚಾರಣೆಯ ಪ್ರಕ್ರಿಯೆ ಅಥವಾ ಬಂಧನಕ್ಕೆ ಕಾರಣವಾಗುವ ಹಂತಗಳು ಕಿರುಕುಳವಾಗಬಾರದು. ಸಿಬಿಐ ಬಂಧನವು ನ್ಯಾಯಸಮ್ಮತವಲ್ಲ, ಹೀಗಾಗಿ ಕೇಜ್ರಿವಾಲ್ ಅವರನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ನ್ಯಾಯಮೂರ್ತಿ ಭುಯಾನ್ ಹೇಳಿದ್ದಾರೆ.

“ಮಾರ್ಚ್ 2023 ರಲ್ಲಿ ಕೇಜ್ರಿವಾಲ್ ರನ್ನು ವಿಚಾರಣೆಗೆ ಒಳಪಡಿಸಿದರೂ ಸಿಬಿಐ ಅವರನ್ನು ಬಂಧಿಸಿರಲಿಲ್ಲ. ಇಡಿ ಬಂಧನವನ್ನು ತಡೆಹಿಡಿದ ನಂತರವೇ ಸಿಬಿಐ ಸಕ್ರಿಯವಾಯಿತು. ಬಳಿಕವಷ್ಟೇ ಸಿಬಿಐ ಕೇಜ್ರಿವಾಲ್ ಅವರನ್ನು ಕಸ್ಟಡಿಗೆ ಕೋರಿತು. 22 ತಿಂಗಳಿಗೂ ಹೆಚ್ಚು ಕಾಲ ಸಿಬಿಐನ ಇಂತಹ ಕ್ರಮವು ಬಂಧನದ ಸಮಯದ ಬಗ್ಗೆ ಗಂಭೀರ ಪ್ರಶ್ನೆಯನ್ನು ಹುಟ್ಟುಹಾಕಿದೆ. ಸಿಬಿಐನಿಂದ ಅಂತಹ ಬಂಧನವು ಇಡಿ ಪ್ರಕರಣದಲ್ಲಿ ನೀಡಲಾದ ಜಾಮೀನನ್ನು ಹತಾಶೆಗೊಳಿಸುವುದಾಗಿದೆ ಎಂದು ನ್ಯಾಯಮೂರ್ತಿ ಭುಯಾನ್ ಅಭಿಪ್ರಾಯಪಟ್ಟಿದ್ದಾರೆ.

ಇದೇ ಅಭಿಪ್ರಾಯವನ್ನು ಪುನರುಚ್ಛರಿಸಿದ ನ್ಯಾಯಪೀಠದ ಇನ್ನೋರ್ವ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರು, ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 41ಎ (3) ಯಾವುದೇ ಉಲ್ಲಂಘನೆಯಾಗಿಲ್ಲವೆಂದು ಹೇಳಿದ್ದಾರೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!