spot_img
Monday, June 23, 2025
spot_img

ಯು.ಎ.ಇ: ಸಿ.ಬಿ.ಎಸ್.ಸಿ. ಕ್ಲಸ್ಟರ್ ವಿಭಾಗದ ಚೆಸ್ ಟೂರ್ನಮೆಂಟ್ ಉದ್ಘಾಟನೆ

ಜನಪ್ರತಿನಿಧಿ (ಅಬುಧಾಬಿ) : ಯು.ಎ.ಇ.ನ ಏಳು ಎಮಿರೇಟ್ಸ್ ವ್ಯಾಪ್ತಿಯ  ಶೈಕ್ಷಣಿಕ ಕ್ಲಸ್ಟರ್ ವಿಭಾಗದ ಸಿ.ಬಿ.ಎಸ್.ಸಿ.ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡ ಚೆಸ್ ಟೂರ್ನಮೆಂಟ್ ಅಬುದಾಭಿಯ ಇಂಡಿಯನ್ ಸ್ಕೂಲ್‌ (Al wathba branch)ನಲ್ಲಿ ಉದ್ಘಾಟನಾ ಕಾರ್ಯಕ್ರಮ ನಡೆಯಿತು.

ಅಬುಧಾಬಿ ಇಂಡಿಯನ್ ಸ್ಕೂಲಿನ ಶೈಕ್ಷಣಿಕ ಮತ್ತು ಕ್ರೀಡಾ ವಿಭಾಗದ ಆಡಳಿತ ಸಂಯೋಜಕ ಪರೀಕ ಸವೇೂ೯ತ್ತಮ ಶೆಟ್ಟಿ  ಚೆಸ್ ಪಂದ್ಯಾಟಕ್ಕೆ ಚಾಲನೆ ನೀಡಿ ಮಾತನಾಡಿ, ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪೂರಕವಾಗಿ ನಿಲುವ ಕ್ರೀಡೆ ಇದ್ದರೆ ಅದು ಚೆಸ್. ಈ ಆಟದಲ್ಲಿ ತೊಡಗಿಸಿಕೊಂಡಾಗ ವಿದ್ಯಾರ್ಥಿಗಳಲ್ಲಿ ಜ್ಞಾಪಕ ಶಕ್ತಿ ಸೃಜನಶೀಲತೆ ಯೇೂಚನಾಶಕ್ತಿ ಬೆಳೆಯಲು ಸಹಕಾರಿಯಾಗುತ್ತದೆ ಮಾತ್ರವಲ್ಲ ವಿದ್ಯಾರ್ಥಿಗಳಿಗೆ ಬದುಕಿನ  ಮುಂದಿನಸವಾಲುಗಳನ್ನು ಎದುರಿಸುವ ಕೌಶಲ್ಯತೆಯನ್ನು ಬೆಳೆಸುವುದರಲ್ಲಿ ಚೆಸ್ ಕ್ರೀಡೆ  ಸಹಕಾರಿ ಅನ್ನುವುದರೊಂದಿಗೆ ವಿಶ್ವದ ಹಾಗೂ ಭಾರತದ ಚೆಸ್   ದಿಗ್ಗಜರ ಸಾಧನೆಯು ನಮ್ಮ  ವಿದ್ಯಾರ್ಥಿಗಳಿಗೆ ಪ್ರೇರಣೆಯಾಗ ಬೇಕು ಎಂದು ಶುಭ ಹಾರೈಸಿದರು.

ಸಂಸ್ಥೆಯ ಪ್ರಾಂಶುಪಾಲೆ ಡಾ. ಅಲ್ಫನಾ ಸ್ವಾನಿ ಅಧ್ಯಕ್ಷತೆ ವಹಿಸಿದ್ದರು. ವಿಶೇಷ ಅತಿಥಿಯಾಗಿ ಎಂ.ಜಿ.ಎಂ.ಕಾಲೇಜಿನ ರಾಜ್ಯ ಶಾಸ್ತ್ರ ನಿವೃತ್ತ  ಮುಖ್ಯಸ್ಥ ಪ್ರೊ.ಕೊಕ್ಕಣೆ೯ ಸುರೇಂದ್ರನಾಥ ಶೆಟ್ಟಿ, ಸಂಸ್ಥೆಯ ಉಪ ಪ್ರಾಂಶುಪಾಲೆ ಲಿಟ್ಟಿ ಥಾಮಸ್, ಯು.ಎ.ಇ.ಚೆಸ್ ಫೆಡರೇಶನ್ ಮುಖ್ಯ ತರಬೇತುದಾರ  ಎನ್. ಎಂ. ಸಿ. ಬೊಗಡಾನ್, ಪಂದ್ಯಗಳ ಮುಖ್ಯ ವೀಕ್ಷಕ ಅಜುರುದ್ದೀನ್ ಆಡಳಿತಾಧಿಕಾರಿ ಅನೀಶ್ ಚತುರ್ವೇದಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,400SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!