Saturday, October 12, 2024

ಕುಂದಾಪುರ ತಾಲೂಕು ಕಚೇರಿ ಅವ್ಯವಸ್ಥೆಗೆ ಶಾಸಕರೇ ಕಾರಣ : ವಿಕಾಸ್‌ ಹೆಗ್ಡೆ ಆಕ್ರೋಶ

ತಾಲೂಕು ಕಚೇರಿಯಲ್ಲಿ ವಿದ್ಯುತ್ ಇಲ್ಲದಾಗ ಜನರೇಟರ್ ಬಳಸಲು ಬೇಕಾದ ಡೀಸೆಲ್ ಇಲ್ಲಾ ಎನ್ನುವುದು ಅತ್ಯಂತ ನಾಚಿಕೆಗೇಡಿನ ಸಂಗತಿ : ವಿಕಾಸ್‌ ಹೆಗ್ಡೆ 

ಜನಪ್ರತಿನಿಧಿ (ಕುಂದಾಪುರ) : ಕುಂದಾಪುರ ತಾಲ್ಲೂಕು ಕಚೇರಿ ಅವ್ಯವಸ್ಥೆಗೆ ಶಾಸಕರು ಕೂಡ ಕಾರಣ. ತಾಲ್ಲೂಕು ಕಚೇರಿ ಕುಂದಾಪುರ ಹಾಗೂ ಬೈಂದೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿ ಹೊಂದಿದ್ದು, ಇಲ್ಲಿನ ಸಮಸ್ಯೆಗಳಿಗೆ ಶಾಸಕರ ಬೇಜವಾಬ್ದಾರಿ ಕೂಡ ಕಾರಣ. ಇವತ್ತು ವಿದ್ಯುತ್ ಇಲ್ಲದಾಗ ಜನರೇಟರ್ ಬಳಸಲು ಬೇಕಾದ ಡೀಸೆಲ್ ಇಲ್ಲಾ ಎನ್ನುವುದು ಅತ್ಯಂತ ನಾಚಿಕೆಗೇಡಿನ ಸಂಗತಿ. ಕಚೇರಿ ನಿರ್ವಹಣೆಗೆ ಸರ್ಕಾರದಿಂದ ಬಂದ ಹಣ ಎಲ್ಲಿಗೆ ಹೋಗುತ್ತಿದೆ ಎನ್ನುವುದನ್ನು ಸಂಬಂಧಿತರು ಸಾರ್ವಜನಿಕರಿಗೆ ಮಾಹಿತಿ ನೀಡಬೇಕು, ಜನಸಾಮಾನ್ಯರನ್ನು ಹೈರಾಣ ಮಾಡುವುದು ತಾಲ್ಲೂಕು ಕಚೇರಿಯ ಹೆಚ್ಚಿನ ಸಿಬ್ಬಂದಿಗಳಿಗೆ ಅವರ ಜೀವನದ ಒಂದು ಭಾಗವಾಗಿ ಬಿಟ್ಟಿದೆ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ. ವಿಕಾಸ್ ಹೆಗ್ಡೆ ಕಿಡಿ ಕಾರಿದ್ದಾರೆ.

ಇವರು ಮಾಡಿದ ತಪ್ಪಿಗೆ ಜನಸಾಮಾನ್ಯರು ದಿನನಿತ್ಯ ತಾಲ್ಲೂಕು ಕಚೇರಿಗೆ ಅಲೆದಾಡುವುದು ಕುಂದಾಪುರ ತಾಲ್ಲೂಕು ಕಚೇರಿಯ ದಿನನಿತ್ಯದ ವ್ಯವಸ್ಥೆ. ಶಾಸಕರು ಈ ಬಗ್ಗೆ ಮೌನ ವಹಿಸಿರುವುದೇ ಈ ಎಲ್ಲಾ ಸಮಸ್ಯೆಗಳಿಗೆ ಕಾರಣ. ಅಧಿಕಾರಿಗಳು ಸಭೆಗಳಲ್ಲಿ ಹಾರಿಕೆಯ ಉತ್ತರ ಕೊಟ್ಟಾಗ ಅವರನ್ನು ತರಾಟೆಗೆ ತೆಗೆದುಕೊಳ್ಳುವ ಗೋಜಿಗೆ ಹೆಚ್ಚಿನ ಜನಪ್ರತಿನಿದಿನಗಳು ಹೋಗದ ಕಾರಣ ಸರ್ಕಾರಿ ನೌಕರರು ಆಡಿದ್ದೇ ಆಟವಾಗಿದೆ ಎಂದು ಅವರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳ ಸೇವೆ ಮಾಡಬೇಕಾದವರು ಪ್ರಜೆಗಳನ್ನು ಅನಗತ್ಯ ಹಿಂಸಿಸುವ ಮನಸ್ಥಿತಿ ಬೆಳೆಸಿಕೊಂಡಿದ್ದಾರೆ. ಕುಂದಾಪುರ ತಾಲ್ಲೂಕು ಕಚೇರಿಯಲ್ಲಿ ಜನರೇಟರ್ ಗೆ ಡೀಸೆಲ್ ಇಲ್ಲದೇ ಇರುವ ವಿಚಾರವನ್ನು ಸಂಬಂಧಿತರು ಗಂಭೀರವಾಗಿ ಪರಿಗಣಿಸಿ ಅದರ ಬಗ್ಗೆ ತನಿಖೆ ನಡೆಸಿ ತಪ್ಪು ನಡೆದಿದ್ದಲ್ಲಿ ಕ್ರಮವಾಗಬೇಕು. ಜನಸಾಮಾನ್ಯರ ದೈನಂದಿನ ಕೆಲಸ ಕಾರ್ಯಗಳು ಸುಗಮವಾಗಿ ಸಾಗಲು ಇನ್ನಾದರೂ ಕುಂದಾಪುರ ಹಾಗೂ ಬೈಂದೂರು ಕ್ಷೇತ್ರದ ಶಾಸಕರುಗಳು ಕ್ರಮಕೈಗೊಳ್ಳಬೇಕು ಎಂದು ವಿಕಾಸ್ ಹೆಗ್ಡೆ ಪತ್ರಿಕಾ ಹೇಳಿಕೆ ಮೂಲಕ ಆಗ್ರಹಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!