Sunday, October 13, 2024

ಭಾರತದಲ್ಲಿ ಪ್ರಜಾಪ್ರಭುತ್ವ ಮರಳಿ ಚೇತರಿಸಿಕೊಳ್ಳುತ್ತಿದೆ : ಅಮೇರಿಕಾದಲ್ಲಿ ರಾಗಾ ಅಭಿಮತ

ಜನಪ್ರತಿನಿಧಿ (ನವ ದೆಹಲಿ/ವಾಷಿಂಗ್ಟನ್) : ದೇಶದಲ್ಲಿ ಕಳೆದ 10 ವರ್ಷಗಳಿಂದ ಹದಗೆಟ್ಟು ಹೋಗಿದ್ದ ಪ್ರಜಾಪ್ರಭುತ್ವ ಈಗ ತನ್ನ ಮೊದಲಿನ ಸ್ಥಿತಿಗೆ ಮರಳಲು ಹೋರಾಟ ನಡೆಸುತ್ತಿದೆ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

ಅಮೆರಿಕದ ವಾಷಿಂಗ್ಟನ್ ನಲ್ಲಿರುವ ನ್ಯಾಷನಲ್ ಪ್ರೆಸ್ ಕ್ಲಬ್‌ನಲ್ಲಿ ವರದಿಗಾರರೊಂದಿಗೆ ಮಾತನಾಡಿರುವ ರಾಗಾ, ಕಳೆದ 10 ವರ್ಷಗಳಿಂದ ಭಾರತೀಯ ಪ್ರಜಾಪ್ರಭುತ್ವ ಹದಗೆಟ್ಟು ಹೋಗಿತ್ತು, ಈಗ ಮತ್ತೆ ಚೇತರಿಸಿಕೊಳ್ಳಲು ಹೋರಾಡುತ್ತಿದೆ ಎಂದು ಹೇಳಿದ್ದಾರೆ.

ಮಹಾರಾಷ್ಟ್ರ ಸರ್ಕಾರವನ್ನು ನಮ್ಮಿಂದ ಕಿತ್ತುಕೊಂಡರು. ನಾನು ಅದನ್ನು ಪ್ರತ್ಯಕ್ಷವಾಗಿ ನೋಡಿದ್ದೇನೆ. ನಮ್ಮ ಪಕ್ಷದ ಶಾಸಕರನ್ನು ಖರೀದಿಸಿ ಇದ್ದಕ್ಕಿದ್ದಂತೆ ಬಿಜೆಪಿ ನಾಯಕರಾದರು. ಹೀಗೆ ಭಾರತದಲ್ಲಿ ಪ್ರಜಾಪ್ರಭುತ್ವ ಆಕ್ರಮಣಕ್ಕೆ ಒಳಗಾಗಿದೆ. ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸಲಾಗಿದೆ. ಈಗ ಮತ್ತೆ ಪ್ರಜಾಪ್ರಭುತ್ವ ಪುಟಿದೇಳಲು ಹೋರಾಡುತ್ತಿದ್ದು, ಹಿಂದಿನ ಸ್ಥಿತಿಗೆ ಮರಳುತ್ತದೆ ಎಂಬ ವಿಶ್ವಾಸ ನನಗಿದೆ ಎಂದು ಹೇಳಿದರು.

ಈ ಬಾರಿಯ ಲೋಕಸಭೆ ಚುನಾವಣಾ ಫಲಿತಾಂಶಗಳನ್ನು ನೋಡಿದರೆ, ಭಾರತದಲ್ಲಿ ಪ್ರಜಾಪ್ರಭುತ್ವದ ಬಗ್ಗೆ ನಿಮಗೆ ಹೆಚ್ಚಿನ ಭರವಸೆ ನೀಡುತ್ತದೆಯೇ ಎಂದು ಸುದ್ದಿಗಾರರು ಪ್ರಶ್ನಿಸಿದ್ದಕ್ಕೆ ಪ್ರತಿಕ್ರಿಯಿಸಿದ ರಾಗಾ, ಹೌದು, ನನ್ನ ಪ್ರಕಾರ, ಆಗುತ್ತದೆ. ಆದರೆ ಭಾರತೀಯ ಮತದಾರರು ಸಾಕಷ್ಟು ಬದಲಾಗಿದ್ದಾರೆ ಎಂದು ಅಭಿಪ್ರಾಯ ಪಟ್ಟರು.

ನಮ್ಮಲ್ಲಿ ಸಮತೋಲನದ ಮನೋಭಾವ ಇದ್ದರೆ ಮತದಾರನು ಬಹಳ ಜ್ಞಾನ ಮತ್ತು ಸ್ಥಿತಿಸ್ಥಾಪಕನಾಗಿರಬಹುದು. ಇದು ಪ್ರಜಾಪ್ರಭುತ್ವಕ್ಕೆ ಪೂರಕವಾಗಿದೆ ಎಂದಿದ್ದಲ್ಲದೇ, ಈ ಬಾರಿ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ನಮ್ಮ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲಾಯಿತು, ಆದಾಗ್ಯೂ ನಾವು ಚುನಾವಣೆಯನ್ನು ಸಮರ್ಥವಾಗಿ ಎದುರಿಸಿದ್ದೇವೆ. ಇಂತಹ ವಿಷಯಗಳು ಬಹುಶಃ ನಮ್ಮ ಭಾರತದಲ್ಲಿ ಮತ್ತು ಇರಾಕ್‌ನಲ್ಲಿ ಸಂಭವಿಸಬಹುದು. ನಾವು ಚುನಾವಣೆ ಸಂದರ್ಭದಲ್ಲಿ ಅಕ್ಷರಶಃ ಹಣದ ಕೊರತೆಯನ್ನು ಎದುರಿಸಿದ್ದೆವು ಎಂದು ಅವರು ವಿಷಾದ ವ್ಯಕ್ತ ಪಡಿಸಿದರು.

ನನ್ನಲ್ಲಿ 20ಕ್ಕೂ ಹೆಚ್ಚು ಪ್ರಕರಣಗಳಿವೆ. ಭಾರತೀಯ ಇತಿಹಾಸದಲ್ಲಿ ಮಾನನಷ್ಟಕ್ಕಾಗಿ ಜೈಲು ಶಿಕ್ಷೆ ಅನುಭವಿಸಿದ ಏಕೈಕ ವ್ಯಕ್ತಿ ನಾನು. ಜೈಲಿನಲ್ಲಿರುವ ಮುಖ್ಯಮಂತ್ರಿ ನಮ್ಮ ದೇಶದಲ್ಲಿದ್ದಾರೆ. ಇದನ್ನೆಲ್ಲಾ ಭಾರತೀಯ ಮತದಾರ ಸೂಕ್ಷ್ಮವಾಗಿ ಗಮನಿಸುತ್ತಿದ್ದು,  ಪ್ರಜಾಪ್ರಭುತ್ವದ ಬೆಳವಣಿಗೆಯನ್ನು ಗಮನಿಸುತ್ತಿದ್ದಾನೆ ಎಂದರು.

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ರಾಗಾ ವಾಗ್ದಾಳಿ : ಭಾರತದಲ್ಲಿ ಈ 21ನೇ ಶತಮಾನದ ಆಧುನಿಕ ಜಗತ್ತಿನಲ್ಲಿ ನಾನು ದೇವರೊಂದಿಗೆ ಮಾತನಾಡುತ್ತೇನೆ ಎಂದು ಜನರಿಗೆ ಹೇಳುತ್ತಿದ್ದಾರೆ. ನಾನು ಎಲ್ಲರಿಗಿಂತ ಭಿನ್ನ. ನೀವು ಜೈವಿಕ ವ್ಯಕ್ತಿಗಳು, ನೀವು ಜೈವಿಕವಲ್ಲದ ವ್ಯಕ್ತಿ. ನಾನು ದೇವರೊಂದಿಗೆ ನೇರ ಸಂಪರ್ಕವನ್ನು ಹೊಂದಿದ್ದೇನೆ ಎನ್ನುತ್ತಾರೆ. ಈ ವಿಷಯ ಚುನಾವಣೆಯಲ್ಲಿ ನಮಗೆ ಸಹಾಯ ಮಾಡಿತ್ತು. ನಾವು ಪ್ರಧಾನಿಯನ್ನು ಸೋಲಿಸಿದ್ದೇವೆ ಎಂದರು.

ಪ್ರಧಾನ ಮಂತ್ರಿಗಳು ಲೋಕಸಭೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಸಂವಿಧಾನ ಪುಸ್ತಕಕ್ಕೆ ನಮಸ್ಕರಿಸಿದ್ದು ವಿರೋಧಾಬಾಸವಾಗಿ ಕಂಡಿತು. ಒಂದೆಡೆ ಸಂವಿಧಾನವನ್ನು, ಪ್ರಜಾಪ್ರಭುತ್ವ ರಚನೆಯ ಮೇಲೆ ದಾಳಿ ಮಾಡುತ್ತಿದ್ದಾರೆ. ನಂತರ ಭಾರತೀಯರು ಸಂವಿಧಾನ, ಪ್ರಜಾಪ್ರಭುತ್ವಕ್ಕೆ ಗೌರವ ಕೊಡಬೇಕು, ಅದನ್ನು ರಕ್ಷಿಸಬೇಕು ಎನ್ನುವ ಧ್ವಂದ್ವ ನಿಲುವು ಅವರದ್ದಾಗಿ ಎಂದು ರಾಹುಲ್‌ ಗಾಂಧಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹರಿಹಾಯ್ದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!