spot_img
Wednesday, January 22, 2025
spot_img

ಎಕ್ಸಲೆಂಟ್‌ ಪದವಿ ಪೂರ್ವ ಕಾಲೇಜು : ಗುರುವಂದನಾ ಕಾರ್ಯಕ್ರಮ

ಜನಪ್ರತಿನಿಧಿ (ಸುಣ್ಣಾರಿ/ಕುಂದಾಪುರ) : ಶಾಲೆ, ಕಾಲೇಜುಗಳು ಸರ್ವ ಜನಾಂಗದ ಶಾಂತಿಯ ತೋಟ. ಇಂತಹ ಕಾರ್ಯಕ್ರಮಗಳು ಸಾರ್ವಜನಿಕವಾಗಿ ಆಯೋಜಿಸುವ ಉದ್ದೇಶ ಮುಂದಿನ ಪೀಳಿಗೆಗೆ ಮಾದರಿಯಾಗಿ ದಾಟಿಸುವುದೇ ಆಗಿದೆ ಹೊರತು ಬರೀ ವೈಭವೀಕರಣ ಅಲ್ಲ ಎಂದು ವಿಶ್ರಾಂತ ಪ್ರಾಂಶುಪಾಲ ಎಂ. ಬಾಲಕೃಷ್ಣ ಶೆಟ್ಟಿ ‌ಹೇಳಿದರು.

ಎಕ್ಸಲೆಂಟ್ ಪದವಿ ಪೂರ್ವ ಕಾಲೇಜು ಹಾಗೂ ಹೈಸ್ಕೂಲು ಸುಣ್ಣಾರಿ,‌ ಕುಂದಾಪುರ ಇಲ್ಲಿ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಆಯೋಜಿಸಿದ ಗುರುವಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಶಿಲೆಯಲ್ಲಿ ಶಿಲ್ಪವನ್ನು ಹುಡುಕುವುದಕ್ಕಾದರೇ ಶಿಕ್ಷಕನ ಸ್ಥಾನ ಸಾರ್ಥಕವಾಗುತ್ತದೆ. ಶಿಕ್ಷಕರು ಮಾದರಿಯನ್ನು ಸಮಾಜಕ್ಕೆ ನಿರ್ಮಾಣ ಮಾಡಿಕೊಡಬೇಕು. ಆ ಕೆಲಸವನ್ನು ಸರಿಯಾಗಿ ಮಾಡಿದ ಶಿಕ್ಷಕ ಎಂದಿಗೂ ಸಮಾಜದಲ್ಲಿ ಅಗ್ರಸ್ಥಾನದಲ್ಲಿ ಇರುತ್ತಾನೆ ಎಂದು ಅವರು ಅಭಿಪ್ರಾಯ ಪಟ್ಟರು.

ಒಂದು ಜನಾಂಗವನ್ನು ಹಾಳು ಮಾಡುವ ಶಕ್ತಿ ಶಿಕ್ಷಕನಿಗಿದೆ, ಒಂದು ಜನಾಂಗವನ್ನು ಉದ್ಧರಿಸುವ ಶಕ್ತಿಯೂ ಶಿಕ್ಷಕರಿಗಿದೆ. ಶಿಕ್ಷಣ ಸಂಸ್ಥೆಗಳು ಮತ್ತು ಶಿಕ್ಷಕರ  ಜವಾಬ್ದಾರಿ ಮಹತ್ತರವಾದದ್ದು ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಸರಕಾರಿ ಪ.ಪೂ ಕಾಲೇಜು (ಪ್ರೌಢ ವಿಭಾಗ) ಉಪ್ಪುಂದದ ದೈಹಿಕ ಶಿಕ್ಷಣ ಶಿಕ್ಷಕ ಮಂಜುನಾಥ ಶೆಟ್ಟಿ, ಕೆ.ಪಿ‌.ಎಸ್ ಬಿದ್ಕಲಕಟ್ಟೆಯ ಮುಖ್ಯ ಶಿಕ್ಷಕರು ಕರುಣಾಕರ ಶೆಟ್ಟಿ, ಸ.ಹಿ.ಪ್ರಾ. ಶಾಲೆ ಹೇರಂಜಾಲು ಇಲ್ಲಿನ ಮುಖ್ಯ ಶಿಕ್ಷಕರು ಜಯಾನಂದ ಪಟಗಾರ್, ಸ.ಹಿ.ಪ್ರಾ ಶಾಲೆ ಹಂಗಳೂರಿನ ಮುಖ್ಯ ಶಿಕ್ಷಕರು ಸೀತಾರಾಮ್ ಶೆಟ್ಟಿ, ಸ.ಹಿ.ಪ್ರಾ.ಶಾಲೆ ಗೋಪಾಡಿ ಪಡುವಿನ ಸಹ ಶಿಕ್ಷಕರು ಶ್ರೀನಿವಾಸ ಶೆಟ್ಟಿ ಅವರನ್ನು ಈ ಸಂದರ್ಭ ಸನ್ಮಾನಿಸಿ ಗೌರವಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಕೆ.ಪಿ.ಎಸ್ ಬಿದ್ಕಲಕಟ್ಟೆಯ ಮುಖ್ಯಶಿಕ್ಷಕ ಕರುಣಾಕರ ಶೆಟ್ಟಿ ಮಾತನಾಡಿ, ಗುರು ಶಿಷ್ಯ ಪರಂಪರೆಯನ್ನು ಮುಂದೆ ದಾಟಿಸುವ ಯಶಸ್ವಿ ಕಾರ್ಯಕ್ರಮವಿದು. ಶಿಕ್ಷಕರೇ ತನ್ನ ಗೌರವ ಕಳೆದುಕೊಂಡಿದ್ದಾರೆಯೇ ಹೊರತು ಸಮಾಜ ಶಿಕ್ಷಕರ ಮೇಲಿಟ್ಟ ಗೌರವವನ್ನು ಎಂದಿಗೂ ಕಡಿಮೆ ಮಾಡಿಲ್ಲ. ಎಂದು ಅವರು ಅಭಿಪ್ರಾಯ ಪಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ  ಎಂ. ಎಂ. ಹೆಗ್ಡೆ ಎಜುಕೇಶನ್ & ಚಾರಿಟಬಲ್ ಟ್ರಸ್ಟ್ ನ ಅಧ್ಯಕ್ಷರಾದ ಎಂ. ಮಹೇಶ್ ಹೆಗ್ಡೆ ಮಾತನಾಡಿ, ಜೀವನದ ಸಂಪೂರ್ಣ ವಿಕಾಸಕ್ಕೆ ಶಿಕ್ಷಣವೇ ಮುಖ್ಯ. ಮಕ್ಕಳು ಶಾಶ್ವತವಾಗಿ ನೆನಪಿಸಿಕೊಳ್ಳುವ ಎರಡೇ ವಿಷಯಗಳೇನೆಂದರೆ ತಾವು ಕಲಿತ ಶಿಕ್ಷಣ ಸಂಸ್ಥೆ ಹಾಗೂ ಕಲಿಸಿದ ಶಿಕ್ಷಕರನ್ನು ಮಾತ್ರ. ಹಾಗಾಗಿ ಶಿಕ್ಷಣ ಸಂಸ್ಥೆ ಹಾಗೂ ಶಿಕ್ಷಕರಿಗೆ ಮಹತ್ತರ ಜವಾಬ್ದಾರಿ ಇದೆ ಎಂದರು.

ಇದೇ ಸಂದರ್ಭದಲ್ಲಿ ರಾಷ್ಟಮಟ್ಟದ ಕರಾಠೆ ಕಟಾ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಗಳಿಸಿದ ವಿದ್ಯಾರ್ಥಿ ಅನೀಶ್ ಆರ್ ಶೆಟ್ಟಿಯನ್ನು ಸನ್ಮಾನಿಸಲಾಯಿತು.

ಹೊಂಬಾಡಿ ಮಂಡಾಡಿ ಪಂಚಾಯತ್ ನ ಉಪಾಧ್ಯಕ್ಷ ಅರುಣ್ ಕುಮಾರ್‌ ಶೆಟ್ಟಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಎಕ್ಸಲೆಂಟ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ನಾಗರಾಜ್ ಶೆಟ್ಟಿ ಪ್ರಸ್ತಾವಿಸಿ ಸ್ವಾಗತಿಸಿದರು, ಎಕ್ಸಲೆಂಟ್ ಹೈಸ್ಕೂಲ್ ನ ಮುಖ್ಯೋಪಾಧ್ಯಾಯರಾದ ಸರೋಜಿನಿ ಪಿ. ಆಚಾರ್ಯ ಧನ್ಯವಾದ‌ ಸಮರ್ಪಿಸಿದರು. ಉಪನ್ಯಾಸಕ ಶ್ರೀನಿವಾಸ ವೈದ್ಯ ಕಾರ್ಯಕ್ರಮ ನಿರೂಪಿಸಿದರು.

ಪ್ರಸಿದ್ಧ ಹಾಸ್ಯ ಕಲಾವಿದ  ರಿಚರ್ಡ್ ಲೂಯೀಸ್ ಹಾಗೂ ಕಿರ್ಲೋಸ್ಕರ್ ಸತ್ಯನಾರಾಯಣ ಹಾಗೂ ತಂಡದವರಿಂದ ಹಾಸ್ಯ ಸಂಜೆ ಕಾರ್ಯಕ್ರಮ ನಡೆಯಿತು.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!