Saturday, October 12, 2024

ವಂಡ್ಸೆ 22ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಂಪನ್ನ

ವಂಡ್ಸೆ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವಂಡ್ಸೆ ಇದರ 22ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಸೆ.7 ಮತ್ತು ಸೆ.8ರಂದು ನಡೆಯಿತು.

ಧಾರ್ಮಿಕ ಸಭಾ ಕಾರ್ಯಕ್ರಮ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾದ ಗಿರೀಶ್ ಎನ್.ನಾಯ್ಕ್ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ಆಯುಷ್ ಕಲ್ಮಾಡಿ, ಪ್ರತೀಕ್ಷಾ ವಂಡ್ಸೆ, ದ್ವಿತೀಯ ಪಿಯುಸಿಯಲ್ಲಿ ಸಾಧನೆ ಮಾಡಿದ ಗಗನ್ ಪೈ ವಂಡ್ಸೆ, ಕೌಶಲ ಆಚಾರ್ಯ ವಂಡ್ಸೆ ಇವರುಗಳಿಗೆ ಪ್ರತಿಭಾ ಪುರಸ್ಕಾರ ನೆರವೇರಿಸಲಾಯಿತು.

ನಿವೃತ್ತ ಬಿ.ಎಸ್.ಎನ್.ಎಲ್ ಅಧಿಕಾರಿ ಗಿಳಿಯಾರು ಶ್ರೀಧರ ಶೆಟ್ಟಿ ಶುಭಶಂಸನೆಯ ಮಾತುಗಳನ್ನಾಡಿ ಸಾರ್ವಜನಿಕ ಗಣೇಶೋತ್ಸವ ಜನರನ್ನು ಒಗ್ಗೂಡಿಸುವ, ಧಾರ್ಮಿಕ ಮನೋಭಾವ ಬೆಳೆಸುವ ಕೆಲಸ ಮಾಡುತ್ತಿದೆ. ಗಣೇಶೋತ್ಸವದ ಆಚರಣೆಯೊಂದಿಗೆ ಹಿನ್ನೆಲೆಯನ್ನು ಅರ್ಥ ಮಾಡಿಕೊಂಡಾಗ ಕಾರ್ಯಕ್ರಮ ಅರ್ಥಪೂರ್ಣವಾಗುತ್ತದೆ ಎಂದರು.

ಗ್ರಾ.ಪಂ.ಮಾಜಿ ಸದಸ್ಯ ಗುಂಡು ಪೂಜಾರಿ ಮಾತನಾಡಿ, ಆಧುನಿಕತೆಯಲ್ಲಿ ಭರದಲ್ಲಿ ಪರಂಪರೆಯ ಮೌಲ್ಯಗಳನ್ನು ಮರೆಯುತ್ತಿದ್ದೇವೆ. ಧಾರ್ಮಿಕ ನಂಬಿಕೆಗಳಿಗೂ ಆಧುನಿಕತೆ, ಆಡಂಭರ ಆವರಿಸಿಕೊಂಡಿವೆ. ಬನ, ವನಗೊಂದಿಗೇ ಆರಾಧಿಸಲ್ಪಡುವ ದೈವಗಳು ಇಂದು ಕಾಂಕ್ರೀಟಿಕೃತ ಭವ್ಯ ಕಟ್ಟಡದಲ್ಲಿ ಸ್ಥಾನ ಪಡೆದಿವೆ. ನಾಗಾರಾಧನೆ, ಭೂತಾರಾಧನೆಯ ಮೇಲೂ ಆಧುನಿಕತೆ ಪ್ರಭಾವ ಬೀರಿದೆ. ಇದರ ಬಗ್ಗೆ ಜಾಗೃತಿ ಅವಶ್ಯಕ ಎಂದರು.

ಸಾರ್ವಜನಿಕ ಗಣೇಶೋತ್ಸವ ಸಮಿತಿ ಗೌರವಾಧ್ಯಕ್ಷರಾದ ಪ್ರಕಾಶ್ ಪೂಜಾರಿ, ಗ್ರಾ.ಪಂ ಅಧ್ಯಕ್ಷೆ ಗೀತಾ ಅವಿನಾಶ್, ಶ್ರೀ ತಿರುಮಲ ಲಕ್ಷ್ಮೀವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ವಿ.ಕೆ ಶಿವರಾಮ ಶೆಟ್ಟಿ, ಉದ್ಯಮಿ ನಿಶ್ಚಿತ್ ಶೆಟ್ಟಿ, ವೆಂಕಟೇಶ್ ಶೆಟ್ಟಿ ತೆಂಕೊಡಿಗೆ, ಬೆಂಗಳೂರು ಉದ್ಯಮಿ ನವೀನ ಕುಮಾರ್ ಶೆಟ್ಟಿ, ಬೆಂಗಳೂರು, ಮುಂಬೈ ಉದ್ಯಮಿ ರಾಘವೇಂದ್ರ ಪೂಜಾರಿ, ಮಮತಾ ಎಸ್.ಕುಂದರ್ ಅರೆಕಲ್ಲು ವಂಡ್ಸೆ, ಗ್ರಾ.ಪಂ ಮಾಜಿ ಸದಸ್ಯ ರಂಜು ಶ್ಯಾಮಿಯಾನದ ಮುಖ್ಯಸ್ಥ ಉದಯ ಕೆ ನಾಯ್ಕ, ಆಶೀರ್ವಾದ್ ಫ್ರೆಂಡ್ಸ್ ಮಾಜಿ ಅಧ್ಯಕ್ಷ ಅಶ್ವತ್ ಶೆಟ್ಟಿ, ಅಂಚೆ ಇಲಾಖೆ ನಿವೃತ್ತ ಉದ್ಯೋಗಿ ಆನಂದ ನಾಯ್ಕ್ ನ್ಯಾಗಳಮನೆ, ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಅಧ್ಯಕ್ಷೀಯ ಮಾತುಗಳನ್ನಾಡಿದ ಗಿರೀಶ್ ಎನ್.ನಾಯ್ಕ್ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲರ ಸಹಕಾರವನ್ನು ಸ್ಮರಿಸಿಕೊಂಡು, ಕೃತಜ್ಞತೆ ಸಲ್ಲಿಸಿದರು.

ವಿವಿಧ ಕ್ರೀಡೆ, ಸಾಂಸ್ಕೃತಿಕ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮ ಸಹಕಾರ ನೀಡಿದವರನ್ನು ಗೌರವಿಸಲಾಯಿತು. ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕಾರ್ಯದರ್ಶಿ ವಿಠಲ ಆಚಾರ್ಯ ಆತ್ರಾಡಿ ಸ್ವಾಗತಿಸಿದರು. ರಾಘವೇಂದ್ರ ಬಿ.ಟಿ, ಅಶ್ವಿನ್ ಮೇಲ್ಮನೆ ಸನ್ಮಾನ ಪತ್ರ ವಾಚಿಸಿದರು. ಅಭಿಷೇಕ್ ಮೆಂಡನ್ ಸ್ಪರ್ಧಾ ವಿಜೇತರ ಪಟ್ಟಿ ವಾಚಿಸಿದರು. ಮಣಿಕಂಠ ಪೂಜಾರಿ ವಂದಿಸಿದರು.

ಕೆಪಿ‌ಎಸ್ ನೆಂಪು ಇಲ್ಲಿನ ಶಿಕ್ಷಕರಾದ ವಸಂತರಾಜ ಶೆಟ್ಟಿ, ಆಲೂರು ಸರಕಾರಿ ಪ್ರೌಢಶಾಲೆ ಶಿಕ್ಷಕರಾದ ಗಣೇಶ ದೇವಾಡಿಗ ಅಡಿಕೆಕೊಡ್ಲು, ವಂಡ್ಸೆ ಸ.ಮಾ.ಹಿ.ಪ್ರಾ.ಶಾಲೆಯ ಶಿಕ್ಷಕರಾದ ಸದಾಶಿವ ಕಾರ್ಯಕ್ರಮ ನಿರ್ವಹಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಅಂಗನವಾಡಿ ಕೇಂದ್ರ ವಂಡ್ಸೆ, ಸ.ಮಾ.ಹಿ.ಪ್ರಾ.ಶಾಲೆ ವಂಡ್ಸೆ ಹಾಗೂ ಸ್ಥಳೀಯರಿಂದ ವೈವಿದ್ಯಮಯ ಕಾರ್ಯಕ್ರಮ ನಡೆಯಿತು. ಬಳಿಕ ಓಂಕಾರ ಕಲಾವಿದರು ಕನ್ನುಕೆರೆ ತೆಕ್ಕಟ್ಟೆ ಇವರಿಂದ ನಾಟಕ-ವಾಚ್ ಮ್ಯಾನ್ ಪ್ರದರ್ಶನಗೊಂಡಿತು.

ಶಾಸಕ ಗುರುರಾಜ್ ಗಂಟಿಹೊಳೆ ಕಾರ್ಯಕ್ರಮಕ್ಕೆ ಆಗಮಿಸಿದ್ದರು.

ಸೆ.8ರಂದು ಆದಿತ್ಯವಾರ ಸಂಜೆ ವಿಜೃಂಭಣೆಯ ಪುರಮೆರವಣಿಗೆಯಲ್ಲಿ ಟ್ಯಾಬ್ಲೋ, ಕುಣಿತ ಭಜನೆಯೊಂದಿಗೆ ವಂಡ್ಸೆ ಕಳುವಿನಬಾಗಿಲು ಶ್ರೀ ಚಕ್ರ ನದಿಯಲ್ಲಿ ಶ್ರೀ ಗಣೇಶ ವಿಗ್ರಹದ ಜಲಸ್ಥಂಭನ ನಡೆಯಿತು.

 

 

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!