Saturday, October 12, 2024

ಯೋಗೀಂದ್ರ ಮರವಂತೆ ಪುಸ್ತಕ 21ಕ್ಕೆ ಲಂಡನ್‌ನಲ್ಲಿ ಬಿಡುಗಡೆ

ಕುಂದಾಪುರ: ಲೇಖಕ ಯೋಗೀಂದ್ರ ಮರವಂತೆ ಅವರ ಹೊಸಪುಸ್ತಕ ‘ನೀಲಿ ಫಲಕಗಳಲ್ಲಿ ನೆನಪಾಗಿ ನಿಂದವರು’ ಸೆ. 21ರಂದು ಲಂಡನ್‌ನಲ್ಲಿ ಬಿಡುಗಡೆಯಾಗಲಿದೆ. ಕಾರ್ಯನಿಮಿತ್ತ ಯು.ಕೆ ಪ್ರವಾಸದಲ್ಲಿರುವ ಕನ್ನಡದ ಖ್ಯಾತ ಲೇಖಕ, ವಿಮರ್ಶಕ ಎಸ್. ದಿವಾಕರ್ ಇದನ್ನು ಬಿಡುಗಡೆಗೊಳಿಸಲಿದ್ದಾರೆ. ಧಾರವಾಡದ ಮನೋಹರ ಗ್ರಂಥಮಾಲೆ ಈ ಕೃತಿಯನ್ನು ಪ್ರಕಟಿಸಿದೆ.

ಲಂಡನ್‌ನಲ್ಲಿ ಇತಿಹಾಸ ಪ್ರಸಿದ್ದರು ವಾಸಿಸಿದ್ದ ಕಟ್ಟಡಗಳ ಗೋಡೆಯ ಮೇಲೆ ಬ್ಲೂಫ್ಲೇಕ್ ಅಥವಾ ನೀಲಿಫಲಕ ಅಳವಡಿಸುವ ಪರಂಪರೆ ಇದೆ. ಇಂತಹ ವ್ಯಕ್ತಿಗಳಲ್ಲಿ ಜಾಗತಿಕವಾಗಿ ಪ್ರಸಿದ್ಧಿ ಪಡೆದ ಭಾರತೀಯರೂ ಸೇರಿದಂತೆ ಜಗತ್ತಿನ ವಿವಿಧ ದೇಶಗಳ ಹಲವರು ಸ್ಥಾನ ಪಡೆದಿದ್ದಾರೆ. ಇಂತಹ ಆಯ್ದ ೨೮ ವ್ಯಕ್ತಿಗಳ ಕುರಿತಾದ ನಿರೂಪಣೆಯನ್ನು ತಮ್ಮ ಸೂಕ್ಷ್ಮ ನಿರೀಕ್ಷಣಾ ಕೌಶಲ ಮತ್ತು ತಾವು ರೂಢಿಸಿಕೊಂಡ ವಿಶಿಷ್ಟ ಭಾಷಾಶೈಲಿಯ ಮೂಲಕ ಯೋಗೀಂದ್ರ ಈ ಪುಸ್ತಕದಲ್ಲಿ ಚಿತ್ರಿಸಿದ್ದಾರೆ. ಲಂಡನ್ ಸಮೀಪದ ಬ್ರಿಸ್ಟಲ್ ನಗರದ ಏರ್‌ಬಸ್ ವಿಮಾನ ನಿರ್ಮಾಣ ಸಂಸ್ಥೆಯಲ್ಲಿ ತಂತ್ರಜ್ಞ ಆಗಿರುವ ಯೋಗೀಂದ್ರ ಅವರ ಲಂಡನ್ ಡೈರಿ, ಮುರಿದ ಸೈಕಲ್ ಹುಲಾಹೂಪ್ ಹುಡುಗಿ, ನನ್ನ ಕಿಟಕಿ, ಏರೋ ಪುರಾಣ ಪ್ರಬಂಧ ಸಂಕಲನಗಳು ಓದುಗರ ಮತ್ತು ವಿಮರ್ಶಕರ ಗಮನ ಸೆಳೆದಿವೆ.

ಪುಸ್ತಕ ಬಿಡುಗಡೆಯ ಸಂದರ್ಭಕ್ಕೆ ದಿವಾಕರ್ ಅವರ ಪತ್ನಿ ಲೇಖಕಿ, ಪ್ರ್ರಾಧ್ಯಾಪಿಕೆ ಜಯಶ್ರೀ ಕಾಸರವಳ್ಳಿ ಮತ್ತು ಯು.ಕೆಯ ಆಮಂತ್ರಿತ ಸ್ನೇಹಿತರು ಸಾಕ್ಷಿಯಾಗಲಿದ್ದಾರೆ ಎಂದು ಯೋಗೀಂದ್ರ ಅವರ ಸಹೋದರ ಜತೀಂದ್ರ ಮರವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!