spot_img
Wednesday, April 1, 2026
spot_img

ಜೇಸಿ ಸಪ್ತಾಹದ ಸಭಾಪತಿಯಾಗಿ ರಾಜು ಪೂಜಾರಿ ಮೂಡ್ಲಕಟ್ಟೆ ಆಯ್ಕೆ

ಕುಂದಾಪುರ: ಜೆಸಿ‌ಐ ಕುಂದಾಪುರ ಸಿಟಿಯ ಆತಿಥ್ಯದಲ್ಲಿ ಸೆಪ್ಟೆಂಬರ್ 9 ರಿಂದ 15 ರ ವರೆಗೆ ಕುಂದಾಪುರದ ಜ್ಯೂನಿಯರ್ ಕಾಲೇಜಿನ ಶ್ರೀ ಲಕ್ಷ್ಮೀನರಸಿಂಹ ಕಲಾ ಮಂದಿರದಲ್ಲಿ ಜರುಗುವ ಜೇಸಿ ಸಪ್ತಾಹದ ಸಭಾಪತಿಯಾಗಿ ರಾಜು ಪೂಜಾರಿ ಮೂಡ್ಲಕಟ್ಟೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಇವರು ಮಣಿಪಾಲ್ ಇನ್ಸ್ಟಿಟ್ಯೂಟ್ ಆಪ್ ಕಂಪ್ಯೂಟರ್ ಎಜುಕೇಶನ್ ಶಾಖೆಯನ್ನು ಹೊಸಂಗಡಿಯಲ್ಲಿ ಪ್ರಾರಂಭಿಸಿ, ಕೆ.ಪಿ.ಸಿ ಇಂಗ್ಲೀಷ್ ಮೇಡಿಯಮ್ ನಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿ, ಪ್ರಸ್ತುತ ಭಾರತ್ ವಿಕಾಸ ಸೌಹಾರ್ದ ಸಹಕಾರಿ ಸಂಘ ಕುಂದಾಪುರದಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ರೋಟರಿ ರಿವರ್ ಸೈಡ್ ಕ್ಲಬ್ ಇದರ ಸ್ಥಾಪಕ ಕಾರ್ಯದರ್ಶಿಯಾಗಿ ತದನಂತರ ಅಧ್ಯಕ್ಷರಾಗಿ ಪ್ರಸ್ತುತ ಡಿಸ್ಟ್ರಿಕ್ಟ್ ಕಾನ್ಫರೆನ್ಸ್ ಜೋನಲ್ ಕೋ-ಅರ್ಡಿನೇಟರ್ ಆಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ.

ಈ ಸಂದರ್ಭದಲ್ಲಿ ಜೆಸಿ‌ಐ ಕುಂದಾಪುರ ಸಿಟಿಯ ಅಧ್ಯಕ್ಷರಾದ ರಾಘವೇಂದ್ರ ಕುಲಾಲ್ ಸ್ಥಾಪಕ ಅಧ್ಯಕ್ಷ ಹುಸೇನ್ ಹೈಕಾಡಿ, ನಿಕಟಪೂರ್ವ ಅಧ್ಯಕ್ಷ ಡಾ ಸೋನಿ, ಪೂರ್ವ ಅಧ್ಯಕ್ಷ ರಾಘವೇಂದ್ರ ಚರಣ್ ನಾವಡ, ಜಯಚಂದ್ರ ಶೆಟ್ಟಿ, ನಾಗೇಶ್ ನಾವಡ, ಅಭಿಲಾಷ್ ಬಿ.ಎ, ಪ್ರಶಾಂತ್ ಹವಾಲ್ದಾರ್, ಗಿರೀಶ್ ಹೆಬ್ಬಾರ್, ವಿಜಯ ಭಂಡಾರಿ, ಲೇಡಿ ಜೇಸಿ ಕೋ-ಆರ್ಡಿನೇಟರ್ ರೇಷ್ಮಾ ಕೋಟ್ಯಾನ್, ಯುವ ಜೇಸಿ ಕೋ-ಆರ್ಡಿನೇಟರ್ ಕಿರಣ್, ಜೇಸಿ ಸದ್ಯಸ್ಯರಾದ ಸಿಂಚನ, ನಯನ ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!