spot_img
Wednesday, April 1, 2026
spot_img

ಎಕ್ಸಲೆಂಟ್ ಕುಂದಾಪುರ: ಅನೀಶ್ ಆರ್ ಶೆಟ್ಟಿ ವಿದ್ಯಾರ್ಥಿಯ ಸಾಧನೆ

ಕುಂದಾಪುರ: ಎಕ್ಸಲೆಂಟ್ ಕುಂದಾಪುರ ವಿದ್ಯಾಸಂಸ್ಥೆಯು ಶಿಕ್ಷಣದ ಜೊತೆ ಜೊತೆಗೆ ಕ್ರೀಡೆ, ಸಾಂಸ್ಕ್ರತಿಕ ಚಟುವಟಿಕೆಗಳಲ್ಲಿ ತನ್ನದೇ ಆಗಿರುವ ಹೊಸ ಚಾಪನ್ನು ಮೂಡಿಸಿಕೊಂಡು ಬಂದು ಕೇವಲ ತಾಲೂಕು ಜಿಲ್ಲೆ ಹಾಗೂ ರಾಜ್ಯ ಮಟ್ಟದಲ್ಲಿ ಮಾತ್ರವಲ್ಲದೇ ಆಂತರ್‌ರಾಜ್ಯ ಮಟ್ಟದಲ್ಲೂ ಸಹ ತನ್ನ ವಿಜಯ ಪತಾಕೆಯನ್ನು ಹಾರಿಸಿದೆ. ಶಿವಮೊಗ್ಗದಲ್ಲಿ ನಡೆದಂತ ಅಂತರ್‌ರಾಜ್ಯ ಮಟ್ಟದ (ರಾಷ್ಟ್ರೀಯ) ಕರಾಟೆ ಸ್ಪರ್ಧೆಯಲ್ಲಿ ಕಾಟ ವಿಭಾಗದಲ್ಲಿ ರಾಷ್ಟ್ರಕ್ಕೆ ದ್ವಿತೀಯ ಸ್ಥಾನವನ್ನು ಎಕ್ಸಲೆಂಟ್ ಸಂಸ್ಥೆಯ ವಿಜ್ಞಾನ ವಿಭಾಗದ ವಿದ್ಯಾರ್ಥಿಯಾದ ಅನೀಶ್ ಆರ್ ಶೆಟ್ಟಿ ತನ್ನ ಮುಡಿಗೇರಿಸಿಕೊಂಡಿದ್ದಾರೆ. ಇವರು ಹಾಲಾಡಿ ರಮೇಶ್ ಶೆಟ್ಟಿ ಮತ್ತು ರಜನಿ ಆರ್ ಶೆಟ್ಟಿ ರವರ ಪುತ್ರರಾಗಿದ್ದಾರೆ.

ಇವರ ತರಬೇತುದಾರರಾಗಿ ಅಬ್ಜಲ್ ಕೆ.ಡಿ.ಎಫ್ ಕುಂದಾಪುರ ಇವರ ಮಾರ್ಗದರ್ಶನದಲ್ಲಿ ಬಹುಮಾನ ಪಡೆದಿರುತ್ತಾರೆ. ಇವರ ಸಾಧನೆಯನ್ನು ಎಮ್. ಎಮ್ ಹೆಗ್ಡೆ ಎಜುಕೇಶನಲ್ & ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾದ ಎಮ್ ಮಹೇಶ್ ಹೆಗ್ಡೆ ಹಾಗೂ ಕಾರ್ಯದರ್ಶಿಯಾದ ದೀಪಾ ಎಮ್ ಹೆಗ್ಡೆ, ಪ್ರಾಂಶುಪಾಲರು, ಉಪನ್ಯಾಸಕರು, ಮುಖ್ಯೋಪಾಧ್ಯಾಯರು, ಶಿಕ್ಷಕ ಶಿಕ್ಷಕೇತರ ಸಿಬ್ಬಂಧಿ ವರ್ಗದವರು ಅಭಿನಂದಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!