Sunday, October 13, 2024

ಹಿಜಾಬ್‌ ವಿವಾದ : ಕುಂದಾಪುರದ ಪ್ರಾಂಶುಪಾಲರಿಗೆ ಪ್ರಶಸ್ತಿಗೆ ತಡೆ | ಇಷ್ಟು ದ್ವೇಷಕಾರುವ ನಿಲುವು ಯಾವ ಸರ್ಕಾರಕ್ಕೂ ಒಳಿತಲ್ಲ : ಗಂಟಿಹೊಳೆ

ರಾಜ್ಯ ಸರ್ಕಾರದ ನಿರ್ಧಾರವನ್ನು ಕಟುವಾಗಿ ಖಂಡಿಸಿದ ಶಾಸಕ ಗುರುರಾಜ್ ಗಂಟಿಹೊಳೆ

ಜನಪ್ರತಿನಿಧಿ (ಬೈಂದೂರು) : ಶಿಕ್ಷಕರ ದಿನಾಚರಣೆ ಅಂಗವಾಗಿ ರಾಜ್ಯಮಟ್ಟದ ಉತ್ತಮ  ಪ್ರಾಂಶುಪಾಲರಾಗಿ ಆಯ್ಕೆಯಾದ ಕುಂದಾಪುರ ಪ.ಪೂ. ಕಾಲೇಜಿನ ಪ್ರಾಂಶುಪಾಲರಾದ ರಾಮಕೃಷ್ಣ ಬಿ.ಜೆ. ಅವರಿಗೆ ಪ್ರಶಸ್ತಿ ನೀಡದೇ ರಾಜ್ಯ ಸರ್ಕಾರ ದ್ವೇಷ ಸಾಧಿಸಿದೆ ಎಂದು ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಕಿಡಿಕಾರಿದ್ದಾರೆ.

ಸರ್ಕಾರಿ ಶಾಲೆ ಸಹಿತ ಪದವಿ ಪೂರ್ವ ಕಾಲೇಜಿನವರೆಗೂ ಕಡ್ಡಾಯವಾಗಿ ಸಮವಸ್ತ್ರ ನಿಯಮ ಪಾಲನೆ ಮಾಡಬೇಕು ಎಂದು ಅಂದಿನ ಸರ್ಕಾರ ಹಾಗೂ ಕೋರ್ಟ್ ನಿರ್ದೇಶನ ನೀಡಿದ ಹಿನ್ನೆಲೆಯಲ್ಲಿ ಕಾಲೇಜಿನ ಪ್ರಾಂಶುಪಾಲರಾಗಿ ರಾಮಕೃಷ್ಣ ಅವರು ಅದನ್ನು ಪಾಲನೆ ಮಾಡಿದ್ದಾರೆ. ಸರ್ಕಾರದ ನಿಯಮ ಪಾಲನೆ ಮಾಡಿದ್ದೇ ತಪ್ಪು ಎನ್ನುವ ಸಂದೇಶವೊಂದನ್ನು ಸರ್ಕಾರ ರವಾನಿಸಿರುವುದು ಅತ್ಯಂತ ಕಳವಳಕಾರಿ ಸಂಗತಿಯಾಗಿದೆ ಎಂದು ಅವರು ಹೇಳಿದ್ದಾರೆ.

ವಿದ್ಯಾವಂತರ ಇಲಾಖೆಯಲ್ಲಿ ಅವಿದ್ಯಾವಂತ ನಡೆ
ಶಿಕ್ಷಣ ಇಲಾಖೆ ಎಲ್ಲರನ್ನು ಸಮಾನವಾಗಿ ಕಾಣಬೇಕು. ವಿದ್ಯಾವಂತರ ಇಲಾಖೆಯಾಗಿ ಅವಿದ್ಯಾವಂತರಂತೆ ವರ್ತನೆ ತೋರುವುದು ತರವಲ್ಲ. ಇಡೀ ಕರಾವಳಿ ವಿದ್ಯಾವಂತರ ನಾಡು ಎಂದು ಖ್ಯಾತಿ ಪಡೆದಿದೆ.   ಯಾವುದೋ  ದುಷ್ಟ ಶಕ್ತಿಗಳ ಒತ್ತಡಕ್ಕೆ ಮಣಿದು ಸರ್ಕಾರ ಪ್ರಾಂಶುಪಾಲರ ನೈತಿಕ ಬಲ‌ ಕುಗ್ಗಿಸುತ್ತಿರುವುದು ಸರಿಯಲ್ಲ ಎಂದೂ ಅವರು ಹೇಳಿದ್ದಾರೆ.

ಉತ್ತಮ ಪ್ರಾಂಶುಪಾಲರ ಆಯ್ಕೆಗೆ ಇಲಾಖೆಯಿಂದ ಸಮಿತಿ ರಚನೆ ಮಾಡಲಾಗಿತ್ತು. ಸ್ವೀಕಾರಗೊಂಡ ಎಲ್ಲ ಅರ್ಜಿ/ಪ್ರಸ್ತಾವನೆಗಳನ್ನು  ಸಮಿತಿ ಕೂಲಂಕುಷವಾಗಿ ಪರಿಶೀಲಿಸಿ ರಾಜ್ಯ ಮಟ್ಟಕ್ಕೆ ಕಳುಹಿಸಿದೆ. ರಾಜ್ಯಮಟ್ಟದ ಸಮಿತಿ ಇದನ್ನು ಪರಿಶೀಲಿಸಿ ಅಂತಿಮಗೊಳಿಸಿದೆ. ಶೈಕ್ಷಣಿಕ, ಸಾಮಾಜಿಕ ಸಾಧನೆಯನ್ನು ಪರಿಗಣಿಸಿ ತಜ್ಞರ ಸಮಿತಿ  ನಡೆಸಿದ ಆಯ್ಕೆಯನ್ನು ಯಾರದೋ ಒತ್ತಡಕ್ಕೆ ಮಣಿದು ಸರ್ಕಾರ ವಾಪಸ್ ಪಡೆದಿರುವುದು ಹೇಯ ಕೃತ್ಯವಾಗಿದೆ ಎಂದು ಖಂಡಿಸಿದ್ದಲ್ಲದೇ, ಸರ್ಕಾರ ಈ‌ ಕೂಡಲೇ ಅವರಿಗೆ ಪ್ರಶಸ್ತಿ ಪ್ರದಾನಿಸಿ, ಕ್ಷಮೆ ಯಾಚಿಸಬೇಕು ಎಂದು ಗಂಟಿಹೊಳೆ ಆಗ್ರಹಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!