Sunday, October 13, 2024

ಚಂದನವನದಲ್ಲಿ ಲೈಂಗಿಕ ಕಿರುಕಳ : ಸಿಎಂ ಭೇಟಿ ಮಾಡಿ ಕೇರಳದ ಮಾದರಿಯಲ್ಲಿ ಸಮಿತಿ ರಚಿಸುವಂತೆ ಕಲಾವಿದರಿಂದ ಮನವಿ !

ಜನಪ್ರತಿನಿಧಿ (ಬೆಂಗಳೂರು) : ಕೇರಳದಲ್ಲಿ ನ್ಯಾ. ಹೇಮಾ ಸಮಿತಿ ಮಾದರಿಯಲ್ಲಿ ಕರ್ನಾಟಕದಲ್ಲೂ ಕನ್ನಡ ಸಿನೆಮಾ ರಂಗದಲ್ಲಿ ನಟಿಯರ ಮೇಲೆ ಆಗುತ್ತಿರುವ ಶೋಷಣೆಯ ಅಧ್ಯಯನಕ್ಕೆ ಸಮಿತಿ ರಚಿಸುವಂತೆ ಸಾಮಾಜಿಕ ಕಾರ್ಯಕರ್ತ, ನಟ ಚೇತನ್‌ ನೇತೃತ್ವದ ʼಫೈರ್‌ʼ ನಿಯೋಗವು ಇಂದು(ಗುರುವಾರ) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮನವಿ ಸಲ್ಲಿಸಿದೆ.

ಚೇತನ್‌ ಜೊತೆ ನಟಿ ಶ್ರುತಿ ಹರಿಹರನ್‌ ಕೂಡ ಇದ್ದರು. ಶ್ರುತಿ ಹರಿಹರನ್‌ ಕಳೆದ ಕೆಲವು ವರ್ಷಗಳ ಹಿಂದೆ ದೇಶದಾದ್ಯಂತ ಬಾರಿ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಿದ್ದ ಮೀಟೂ ಅಭಿಯಾನದಲ್ಲಿಯೂ ಚಂದನವನದ ಬಗ್ಗೆ ಚರ್ಚೆ ಎಬ್ಬಿಸಿದ್ದರು. ಮೀಟೂ ಹ್ಯಾಶ್‌ ಟ್ಯಾಗ್‌ ಬಳಸಿ ಸಾಮಾಜಿಕ ಜಾಲತಾಣದಲ್ಲಿ ಸಿನೆಮಾ ಚಿತ್ರೀಕರಣದ ಸಂದರ್ಭದಲ್ಲಿ ನಟ ಅರ್ಜುನ್‌ ಸರ್ಜಾ ಕಿರುಕುಳ ನೀಡಿರುವುದಾಗಿ ಹೇಳಿದ್ದರು. ಇದು ಇಡೀ ಚಿತ್ರರಂಗವನ್ನೇ ಬೆಚ್ಚಿಬೀಳಿಸಿತ್ತು.

ಕನ್ನಡ ಚಿತ್ರರಂಗದಲ್ಲಿ ಮಹಿಳೆಯರ ಸಮಸ್ಯೆ ಅಧ್ಯಯನಕ್ಕೆ ಸಮಿತಿ ರಚನೆ ಮಾಡಬೇಕು. ಚಿತ್ರರಂದಲ್ಲಿನ ಲೈಂಗಿಕ ಶೋಷಣೆ ತಡೆಗಟ್ಟುವ ಸಲುವಾಗಿ ಸಮಿತಿ ರಚಿಸಬೇಕು ಎಂದೂ ನಿಯೋಗ ಒತ್ತಾಯಿಸಿದೆ. ಈಗಾಗಲೇ ಫೈರ್‌ ಸಂಸ್ಥೆ ೧೩೦ ಕ್ಕೂ ಮಂದಿ ಸಹಿ ಮಾಡಿರುವ ಪತ್ರವನ್ನು ರಾಜ್ಯ ಸರ್ಕಾರ ಸಲ್ಲಿಸಿದೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!