Wednesday, September 11, 2024

ಎಕ್ಸಲೆಂಟ್ ಪದವಿ ಪೂರ್ವ ಕಾಲೇಜು, ಕುಂದಾಪುರ: ಸಿ.ಎ, ಸಿ.ಎಸ್ ತರಬೇತಿ ತರಗತಿ ಉದ್ಘಾಟನೆ

ಕುಂದಾಪುರ : ಕುಂದಾಪುರ ಸುಣ್ಣಾರಿ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಸಿ.ಎ/ಸಿ.ಎಸ್ ತರಗತಿಗಳನ್ನು ಸೆ.3 ರಂದು ಉದ್ಘಾಟಿಸಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ, ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಮುಖ್ಯ ಅತಿಥಿಗಳಾದ ಲೆಕ್ಕ ಪರಿಶೋಧಕರು ಹಾಗೂ ಸಿ.ಎಸ್ ತಜ್ಞರಾದ ಪ್ರದೀಪ್ ಜೋಗಿ ಚೇರ್ಮನ್ ಆಫ್ ಐ.ಸಿ.ಎ.ಐ, ಉಡುಪಿ ಇವರು ಸಿ.ಎ/ಸಿ.ಎಸ್ ತರಗತಿಗಳ ಪುನಶ್ಚೇತನ ಕಾರ್ಯಕ್ರವiದಲ್ಲಿ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಲೆಕ್ಕ ಪರಿಶೋಧನೆಯ ಬಗ್ಗೆ ಮಾಹಿತಿಯ ಜೊತೆಗೆ ಲೆಕ್ಕ ಪರಿಶೋಧನಾ ಕ್ಷೇತ್ರದಲ್ಲಿರುವ ವಿಫುಲ ಅವಕಾಶಗಳು ಮತ್ತು ಪೂರ್ವ ತಯಾರಿಯ ಕುರಿತು ಅರಿವು ಮೂಡಿಸುವ ಬಗ್ಗೆ ಮಾತನಾಡುತ್ತಾ ನಿರಂತರ ಪರಿಶ್ರಮ ಮತ್ತು ನಿರ್ದಿಷ್ಟ ಗುರಿಯೊಂದಿಗೆ ಮುಂದುವರೆದಲ್ಲಿ ಸಿ.ಎ ಪರೀಕ್ಷೆಯಲ್ಲಿ ಸುಲಭವಾಗಿ ಉತ್ತಿರ್ಣರಾಗಬಹುದು ಎಂದರು. ಪ್ರತಿಯೊಬ್ಬರಲ್ಲೂ ಸಾಮಥ್ರ್ಯ ಇದೆ, ಆತ್ಮವಿಶ್ವಾಸದ ಕೊರತೆಯಿಂದ ನಾವು ಬೇರೆ ಅವಕಾಶಗಳನ್ನು ಅರಸುತ್ತಾ ಮುನ್ನಡೆಯುತ್ತೇವೆ. ಅವರಿವರ ಮಾತಿಗೆ ಮನ್ನಣೆ ನೀಡುತ್ತಾ,ತಮ್ಮ ಸಾಮಥ್ರ್ಯದ ಬಗ್ಗೆ ಕೀಳರಿಮೆಯಿಂದ ಅವಕಾಶಗಳನ್ನು ಕೈ ಚೆಲ್ಲುತ್ತೇವೆ ಎಂದರು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾದ ಸಿ.ಎ ಲೋಕೇಶ್ ಶೆಟ್ಟಿ ಚೇರ್ಮನ್ ಆಫ್ ಎಸ್.ಐ.ಸಿ.ಎ.ಎಸ್.ಎ, ಉಡುಪಿ ಇವರು ವಾಣಿಜ್ಯ ವಿದ್ಯಾರ್ಥಿಗಳನ್ನು ಉದ್ದೇಶಿಸಿ, ಕೇವಲ ಅತ್ಯಧಿಕ ಅಂಕಗಳನ್ನು ಪಡೆದವರು ಮಾತ್ರ ಸಿ.ಎ ಪಾಸಾಗುತ್ತಾರೆ ಎಂಬ ತಪ್ಪು ಕಲ್ಪನೆ ಬಹಳಷ್ಟು ವಿದ್ಯಾರ್ಥಿಗಳಲ್ಲಿದೆ, ಸಾಧಾರಣ ವಿದ್ಯಾರ್ಥಿಗಳು ಸಹ ದೃಢ ಮನಸ್ಸು ಮತ್ತು ನಿಯಮಿತ ಅಧ್ಯಯನದಿಂದ ಯಶಸ್ವಿಯಾಗಿದ್ದಾರೆ. ಯಾರೂ ಕೂಡ ಕ್ಲಿಷ್ಟ ವೆಂದು ಹಿಂಜರಿಯದೆ ನಿರ್ದಿಷ್ಟ ಗುರಿಯೊಂದಿಗೆ ಮುನ್ನಡೆದು ಸಿ.ಎ/ಸಿ.ಎಸ್ ಪರೀಕ್ಷೆಯಲ್ಲಿ ಯಶಸ್ವಿಯಾಗಬಹುದೆಂದು ತಿಳಿಸಿದರು.

ಈ ಸಂದರ್ಭದಲ್ಲಿ ಎಮ್.ಎಮ್.ಹೆಗ್ಡೆ ಎಜುಕೇಶನಲ್ & ಚಾರಿಟೇಬಲ್ ಟ್ರಸ್ಟ್‍ನ ಅಧ್ಯಕ್ಷರಾದ ಮಹೇಶ್ ಹೆಗ್ಡೆಯವರು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಸಿ.ಎ./ಸಿ.ಎಸ್ ಅಧ್ಯಯನದ ಪ್ರಾರಂಭದ ಹಂತದಲ್ಲಿ ಬರುವ ಸವಾಲುಗಳನ್ನು ಮತ್ತು ಅವುಗಳನ್ನು ಎದುರಿಸಿ ಸದೃಢರಾಗುವ ಮಾರ್ಗಗಳನ್ನು, ತದನಂತರದ ದಿನಗಳಲ್ಲಿ ಯಶಸ್ವಿನ ಮೆಟ್ಟಿಲೇರಿ ಸಂಭ್ರಮಿಸುವ ಕ್ರಮಗಳ ಬಗ್ಗೆ ಮಾರ್ಮಿಕವಾಗಿ ನುಡಿದರು. ಸಭೆಯಲ್ಲಿ ಉಪಸ್ಥಿತರಿದ್ದ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ನಾಗರಾಜ ಶೆಟ್ಟಿ ಅವರು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ವಾಣಿಜ್ಯ ವಿಭಾಗದ ಮುಖ್ಯಸ್ಥೆ ದಿವ್ಯಾ ಶೆಟ್ಟಿ ಸ್ವಾಗತಿಸಿದರು. ವಾಣಿಜ್ಯ ವಿಬಾಗದ ಲೆಕ್ಕಶಾಸ್ತ್ರ ಉಪನ್ಯಾಸಕಿ ಪೂಜಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ವಾಣಿಜ್ಯ ವಿಭಾಗದ ಅರ್ಥಶಾಸ್ತ್ರ ಉಪನ್ಯಾಸಕರಾದ ಶ್ರೀನಿವಾಸ ವೈದ್ಯರು ವಾಣಿಜ್ಯ ವಿಭಾಗದ ಎಲ್ಲಾ ಉಪನ್ಯಾಸಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

 

 

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!