Monday, September 9, 2024

ಸೆ.7ರಿಂದ ಸೆ.9: ಹಟ್ಟಿಯಂಗಡಿಯಲ್ಲಿ ಶ್ರೀ ಗಣೇಶ ಚತುರ್ಥಿ

ಕುಂದಾಪುರ: ಶ್ರೀ ಸಿದ್ಧಿವಿನಾಯಕ ದೇವಸ್ಥಾನ ಹಟ್ಟಿಯಂಗಡಿಯಲ್ಲಿ ಶ್ರೀ ಗಣೇಶ ಚತುರ್ಥಿ ಮಹೋತ್ಸವ ಹಾಗೂ ಅಷ್ಟೋತ್ತರ ಸಹಸ್ರ ನಾಳಿಕೇರ ಮಹಾಗಣಯಾಗ (1008 ತೆಂಗಿನಕಾಯಿ) ಶ್ರೀ ಸತ್ಯಗಣಪತಿ ವ್ರತ ಲಕ್ಷ ದೂರ್ವಾರ್ಚನೆ ಮತ್ತು ಸಿಂದೂರಾರ್ಚನೆ ಸೆ.7ರಿಂದ ಸೆ.9ರ ತನಕ ನಡೆಯಲಿದೆ.

ಸೆ.7ರಂದು ಬೆಳಿಗ್ಗೆ ಮಹಾಗಣಪತಿ ಹೋಮ ಸಂಕಲ್ಪ, ಮಧ್ಯಾಹ್ನ 12ಕ್ಕೆ 1008 ತೆಂಗಿನಕಾಯಿ ಮಹಾಗಣಪತಿ ಹವನದ ಪೂರ್ಣಾಹುತಿ, ಮಹಾಪೂಜೆ, ಮಹಾ ಸಂತರ್ಪಣೆ, ಸಂಜೆ 5ರಿಂದ ವಿಶೇಷ ವಾದ್ಯಗೋಷ್ಠಿ, ಸಂಜೆ 6 ಗಂಟೆಯಿಂದ ರಂಗಪೂಜಾದಿ ಸೇವೆಗಳು ನಡೆಯಲಿದೆ.

ಸೆ.8ರಂದು ಬೆಳಿಗ್ಗೆ 10 ಘಂಟೆಗೆ 108 ಶ್ರೀ ಸತ್ಯಗಣಪತಿ ವ್ರತ ಹಾಗೂ ಕಥಾ ನಿರೂಪಣೆ ಮತ್ತು ಮೋದಕ ಹವನ, ಮಧ್ಯಾಹ್ನ 1 ಘಂಟೆಯಿಂದ ಮಹಾಪೂಜೆ, ಮಹಾಮಂಗಳಾರತಿ, ಸಂಜೆ 6.30ಕ್ಕೆ ನೃತ್ಯ ಸೌರಭ ನಡೆಯಲಿದೆ.

ಸೆ.9ರಂದು ಸೋಮವಾರ ಬೆಳಿಗ್ಗೆ 9 ಘಂಟೆಯಿಂದ ಲಕ್ಷ ದೂರ್ವಾರ್ಚನೆ ಹಾಗೂ ಸಿಂದೂರಾರ್ಚನೆ, ಮಧ್ಯಾಹ್ನ 1 ಘಂಟೆಯಿಂದ ಮಹಾಪೂಜೆ, ಮಹಾಮಂಗಳಾರತಿ, ಸಂಜೆ 4 ಘಂಟೆಗೆ ಧಾರ್ಮಿಕ ಸಭೆ ಸನ್ಮಾನ ಸಮಾರಂಭ ನಡೆಯಲಿದೆ. ತಾಲೂಕು ಮಟ್ಟದಲ್ಲಿ ಪ್ರೌಢಶಾಲೆ, ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಏರ್ಪಡಿಸಲಾದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಣೆ ಹಾಗೂ ಆರ್ಹ ಫಲಾನುಭವಿಗಳಿಗೆ ಸಹಾಯಧನ ವಿತರಣೆ ಮತ್ತು ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಸಂಜೆ 6.30ರಿಂದ ಯಕ್ಷಗಾನ ಹಟ್ಟಿಯಂಗಡಿ ಮೇಳದವರಿಂದ ಯಕ್ಷಗಾನ ‘ಪವಿತ್ರ ಬಂಧನ’ ಪ್ರದರ್ಶನಗೊಳ್ಳಲಿದೆ ಎಂದು ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಧರ್ಮದರ್ಶಿ ಬಾಲಚಂದ್ರ ಭಟ್ಟ ತಿಳಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!