Monday, September 9, 2024

ಯಾವ ವ್ಯಕ್ತಿ, ಮನೆ, ವರ್ಗ ಬಿಜೆಪಿಯ ಸದಸ್ಯತ್ವದಿಂದ ಹೊರಗುಳಿಯಬಾರದು : ಯೋಗಿ ಆದಿತ್ಯನಾಥ್‌

ಜನಪ್ರತಿನಿಧಿ (ಉತ್ತರ ಪ್ರದೇಶ) : ಭಾರತ ಜನತಾ ಪಕ್ಷದ ಸದಸ್ಯತ್ವ ಅಭಿಯಾನ ಇಂದಿನಿಂದ ಆರಂಭವಾಗುತ್ತಿದ್ದು, ಅಭಿಯಾನದಿಂದ ಯಾವುದೇ ವ್ಯಕ್ತಿ ಅಥವಾ ಮನೆ, ವರ್ಗ  ಹೊರಗುಳಿದಿಲ್ಲ ಎನ್ನುವುದನ್ನು ಕಾರ್ಯಕರ್ತರು ಖಚಿತಪಡಿಸಬೇಕು ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಇಂದು(ಸೋಮವಾರ) ಕರೆ ನೀಡಿದ್ದಾರೆ.

ಈ ಬಗ್ಗೆ ತನ್ನ ಅಧಿಕೃತ ಎಕ್ಸ್‌ ಖಾತೆಯಲ್ಲಿ ಪ್ರಸ್ತಾಪಿಸಿರುವ ಅವರು, ಇಂದಿನಿಂದ ಪ್ರಾರಂಭಗೊಳ್ಳುತ್ತಿರುವ ಬಿಜೆಪಿ ಸದಸ್ಯತ್ವ ಅಭಿಯಾನ ಅಭಿವೃದ್ಧಿ ಹೊಂದಿದ ಭಾರತಕ್ಕಾಗಿ ದೂರದೃಷ್ಟು, ಅಂತ್ಯೋದಯದ ಪ್ರತಿಜ್ಞೆ. ಜನರ ಸೇವೆಗಾಗಿ ಶಪತ ಹಾಗೂ ದೇಶ ಮೊದಲು ಎಂಬ ಉತ್ಸಾಹದೊಂದಿಗೆ ಪ್ರತಿಯೊಬ್ಬರನ್ನೂ ತಲುಪುವ ಚಳವಳಿಯಾಗಿದೆ ಎಂದು ಹೇಳಿದ್ದಾರೆ.

ಬಿಜೆಪಿ ಕಾರ್ಯಕರ್ತರಾದ ನಾವೆಲ್ಲಾ ಪ್ರಧಾನಿ ನರೇಂದ್ರ ಮೋದಿ ನೀಡಿರುವ ಎಲ್ಲರ ಜೊತೆ, ಎಲ್ಲರ ಅಭಿವೃದ್ಧಿ ಎಲ್ಲರ ವಿಶ್ವಾಸ ಹಾಗೂ ಪ್ರತಿಯೊಬ್ಬರ ಪ್ರಯತ್ನ ಎಂಬ ಮಂತ್ರವನ್ನು ಮೈಗಡಿಸಿಕೊಂಡು ಈ ರಾಷ್ಟ್ರೀಯ ಕಾರ್ಯಭಾರದ ಯಶಸ್ಸಿಗಾಗಿ ಪೂರ್ಣ ಉತ್ಸಾಗ ಹಾಗೂ ಬದ್ಧತೆಯಿಂದ ಪಾಲ್ಗೋಳ್ಳೋಣ ಎಂದು ಕರೆ ನೀಡಿದ್ದಾರೆ.

ನೆನಪಿರಲಿ, ಯಾವುದೇ ಮನೆ,, ವ್ಯಕ್ತಿ ಅಥವಾ ಯಾವುದೇ ವರ್ಗವೂ ಈ ಅಭಿಯಾನದಿಂದ ಹೊರಗುಳಿಯಬಾರದು ಎಂದು ಅವರು ಒತ್ತಿ ಹೇಳಿದ್ದಾರೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!