Wednesday, September 11, 2024

ಶ್ರೀ ಶಾರದಾ ಅಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢಶಾಲೆ ಬಸ್ರೂರು: ಮುದ್ದುಕೃಷ್ಣ ಮುದ್ದುರಾಧೆ ಸ್ಪರ್ಧೆ

ಕುಂದಾಪುರ: ಬಸ್ರೂರು ಶ್ರೀ ಶಾರದಾ ಅಂಗ್ಲ ಮಾಧ್ಯಮ ಶಾಲೆ ಇಲ್ಲಿ ಶಾರದಾ ಮುದ್ದುಕೃಷ್ಣ ಮುದ್ದುರಾಧೆ ಸ್ಪರ್ಧೆಯನ್ನು ಏರ್ಪಡಿಸಲಾಯಿತು.ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ನಂತರ ಶಾಲಾ ಮಕ್ಕಳಿಂದ ನಡೆದ ವಿಶೇಷವಾದ ಹುಲಿ ಕುಣಿತ ನೋಡುಗರ ಕಣ್ಮನಗಳನ್ನು ಸೆಳೆಯಿತು.

ಸಭೆಯ ಅಧ್ಯಕ್ಷತೆಯನ್ನು ಶಾಲಾ ಸಂಚಾಲಕರಾದ ಸಂತೋಷ ಶೆಟ್ಟಿ ವಹಿಸಿದ್ದರು. ಸಭೆಗೆ ಅತಿಥಿಗಳಾಗಿ ಆಗಮಿಸಿದ್ದ ಸೀ ಸೈಡ್ ಹೈಸ್ಕೂಲ್ ಕೋಡಿ ಬ್ಯಾರಿಸ್ ನ ಮುಖ್ಯೋಪಾಧ್ಯಾಯರಾದ ಜಯಶೀಲ ಶೆಟ್ಟಿ ಅವರು ಮಾತನಾಡಿ. ಶ್ರೀಕೃಷ್ಣನ ವೇಷವನ್ನು ಧರಿಸಿದ ಮಕ್ಕಳು ಸಾಕ್ಷಾತ್ ಶ್ರೀ ಕೃಷ್ಣನಂತೆ ಕಂಡರು ಎಂದು ಹೇಳಿದರು.

ಇನ್ನೋರ್ವ ಅತಿಥಿಗಳಾಗಿ ಆಗಮಿಸಿದ ಬಸ್ರೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ದಿನಕರ್ ಶೆಟ್ಟಿ ಬೇಳೂರು ಅವರು ಮಾತನಾಡಿ ಮಕ್ಕಳಿಗೆ ಶಿಕ್ಷಣದ ಜೊತೆಜೊತೆಗೆ ಸಾಂಸ್ಕೃತಿಕ ಚಟುವಟಿಕೆಗಳ ಬಗೆಗೆ ಉತ್ತೇಜನ ನೀಡುತ್ತಿರುವ ಶಾಲೆಯ ಬಗೆಗೆ ಸದಭಿಪ್ರಾಯವನ್ನು ವ್ಯಕ್ತಪಡಿಸಿದರು. ಸ್ಪರ್ಧೆಗೆ ವಿವಿಧ ಕಡೆಗಳಿಂದ ಸುಮಾರು 100 ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದರು. ವಿದೂಷಿ ಸುಫಲಿತಾ ಮನಪ್ರೀತ್ ವಿದೂಷಿ ಅನುಷ ಉಮೇಶ್ ಪೂಜಾರಿ ಹಾಗೂ ಸುಶ್ಮಿತಾ ಸಾಲಿಗ್ರಾಮ ಇವರು ಸ್ಪರ್ಧೆಯ ನಿರ್ಣಾಯಕರಾಗಿ ಆಗಮಿಸಿದ್ದರು. ಸ್ಪರ್ಧೆಯಲ್ಲಿ ಮೊದಲನೇ ಸ್ಥಾನವನ್ನು ಅದ್ರಿತ್ ಎಸ್ ಕ್ಷತ್ರಿಯ. ದ್ವಿತೀಯ ಸ್ಥಾನವನ್ನು ವಿಹಲ್ಯ ವಿ ಖಾರ್ವಿ ಹಾಗೂ ತೃತೀಯ ಸ್ಥಾನವನ್ನು ಅನ್ವಿಕ್ ಪಡೆದುಕೊಂಡರು, ವಿಜೇತ ವಿದ್ಯಾರ್ಥಿಗಳಿಗೆ ನಗದು ಬಹುಮಾನ ಹಾಗೂ ಸ್ಮರಣಕೆಯನ್ನು ನೀಡಿ ಪ್ರೋತ್ಸಾಹಿಸಲಾಯಿತು ಅಲ್ಲದೆ ಭಾಗವಹಿಸಿದ ಎಲ್ಲ ಮಕ್ಕಳಿಗೂ ಸಮಾಧಾನಕರ ಬಹುಮಾನವನ್ನು ವಿತರಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಆಡಳಿತ ಅಧಿಕಾರಿ ಆಶಾ ಸಂತೋಷ್ ಶೆಟ್ಟಿ ಹಾಗೂ ಶೈಕ್ಷಣಿಕ ನಿರ್ದೇಶಕರಾದ ಪ್ರಕಾಶ್ ಶೆಟ್ಟಿ ಅವರು ಉಪಸ್ಥಿತರಿದ್ದರು. ಸಹ ಆಡಳಿತ ಆಡಳಿತಾಧಿಕಾರಿ ಸುಮಂತ್ ಸ್ವಾಗತಿಸಿದರು. ಶಿಕ್ಷಕಿಯರಾದ ದಿವ್ಯ ಶೆಟ್ಟಿ ಮತ್ತು ಅಂಜಲಿ ಕಾರ್ಯಕ್ರಮ ನಿರೂಪಿಸಿದರು. ಸಹ ಶಿಕ್ಷಕಿ ಅನಿತ ವಂದಿಸಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!