Monday, September 9, 2024

ಕೋಡಿ ಬ್ಯಾರೀಸ್‌ ನಲ್ಲಿ ರಾಷ್ಟ್ರೀಯ ಕ್ರೀಡಾ ದಿನಾಚರಣೆ

ಜನಪ್ರತಿನಿಧಿ (ಕುಂದಾಪುರ) : ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳು ಕೋಡಿ ಕುಂದಾಪುರ ಇದರ ಆಶ್ರಯದಲ್ಲಿ ರಾಷ್ಟ್ರೀಯ ಕ್ರೀಡಾ ದಿನಾಚರಣೆ ನೆರವೇರಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾದ  ಕುಸುಮಾಕರ ಶೆಟ್ಟಿ, ಯುವ ಸಬಲೀಕರಣ ಕ್ರೀಡಾ ಇಲಾಖೆ ಅಧಿಕಾರಿ ಕುಂದಾಪುರ ಇವರು ಗಿಡಕ್ಕೆ ನೀರು ಹಾಕುವುದರೊಂದಿಗೆ ಸಾಂಕೇತಿಕವಾಗಿ ಉದ್ಘಾಟಿಸಿ ಕಾರ್ಯಕ್ರಮವನ್ನು ಉದ್ದೇಶಿಸಿ ಶಿಕ್ಷಣವೇ ಜೀವನ; ಜೀವನವೇ ಶಿಕ್ಷಣ” ಕಲಿಯುವ ಮನ ಹಾಗೂ ಛಲವಿದ್ದರೆ ಶಿಕ್ಷಣವೆಂಬುದು ಎಲ್ಲೆಲ್ಲೂ ಸಿಗುತ್ತದೆ. ಆದರೆ ಆರೋಗ್ಯ ಹಾಗಲ್ಲ ಕ್ರೀಡೆಯೊಂದಿಗೆ ದೈಹಿಕವಾಗಿ ಸದೃಢರಾಗಿ ಆರೋಗ್ಯವಂತ ಭಾರತಕ್ಕಾಗಿ, ಆರೋಗ್ಯವಂತ ಯುವಜನತೆ ಸಜ್ಜುಗೊಂಡು ಎದ್ದು ನಿಲ್ಲಬೇಕು” ಎಂದು ನುಡಿದರು.

ಕ್ರೀಡಾ ಸಾಧಕ ವಿದ್ಯಾರ್ಥಿಗಳ ವಿವರವನ್ನು ದೈಹಿಕ ಶಿಕ್ಷಣ ನಿರ್ದೇಶಕ ಸೌರಭ್ ವಾಚಿಸಿ, ಮುಖ್ಯ ಅತಿಥಿಗಳು ಸಾಧಕರಿಗೆ ಸ್ಮರಣಿಕೆ ನೀಡಿ ಅಭಿನಂದಿಸಿದರು.

ಬ್ಯಾರೀಸ್ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ. ಸಿದ್ದಪ್ಪ ಕೆ. ಎಸ್ ಪ್ರಾಸ್ತಾವಿಕವಾಗಿ

ನುಡಿದರು, ಡಿ.ಎಡ್ ಕಾಲೇಜಿನ ಪ್ರಾಂಶುಪಾಲೆ ಡಾ. ಫಿರ್ದೋಸ್, ಪದವಿ ಕಾಲೇಜಿನ ಪ್ರಾಂಶುಪಾಲೆ ಶಬೀನಾ.ಎಚ್, ಬ್ಯಾರೀಸ್ ಆಂಗ್ಲ ಮಾಧ್ಯಮ ಶಾಲೆ ಹಾಗೂ ಬ್ಯಾರೀಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಅಶ್ವಿನಿ ಶೆಟ್ಟಿ, ಕನ್ನಡ ಅನುದಾನಿತ ಪ್ರೌಢಶಾಲೆಯ ಹಿರಿಯ ಸಹಶಿಕ್ಷಕ ಸಂತೋಷ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಹಾಜಿ ಕೆ ಮೋಹಿದ್ದಿನ್ ಬ್ಯಾರಿ ಸ್ಮಾರಕ ಕನ್ನಡ ಅನುದಾನಿತ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಮೊಹಮ್ಮದ್ ಇಲಿಯಾಸ್ ಸ್ವಾಗತಿಸಿ, ಬ್ಯಾರೀಸ್ ಆಂಗ್ಲ ಮಾಧ್ಯಮ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ವೀಣಾ ಅಗೇರ್ ವಂದಿಸಿದರು. ಕನ್ನಡ ಉಪನ್ಯಾಸಕ ಡಾ. ಸಂದೀಪ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!