Wednesday, September 11, 2024

ಉಡುಪಿಯಲ್ಲಿ ಸು.ವಿ.ಕಾ. ದ ಏಕವ್ಯಕ್ತಿ ನಾಟಕ ಪ್ರದರ್ಶನ

ಜನಪ್ರತಿನಿಧಿ (ಉಡುಪಿ) : ಕೋಟದ ಸು.ವಿ.ಕಾ. ಸಾಂಸ್ಕೃತಿಕ ಸಂಘಟನೆಯು ಉಡುಪಿ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಸಾಹಿತ್ಯ ಸಂಘದ ಆಶ್ರಯದಲ್ಲಿ ಆಗಸ್ಟ್ ೩೦ ರ ಶುಕ್ರವಾರ ರಂಗನಿರ್ದೇಶಕ ಡಾ| ಶ್ರೀಪಾದ ಭಟ್ ಅವರ ಪರಿಕಲ್ಪನೆ ಮತ್ತು ನಿರ್ದೇಶನದಲ್ಲಿ ಕುಮಾರಿ ಕಾವ್ಯ ಹಂದೆ ಅಭಿನಯದ ಏಕವ್ಯಕ್ತಿ ಕಾವ್ಯಾಭಿನಯ ‘ಹಕ್ಕಿ ಮತ್ತು ಅವಳು’ ಪ್ರದರ್ಶನಗೊಂಡಿತು.

ಹಿನ್ನೆಲೆಯಲ್ಲಿ ಶಿಕ್ಷಕಿ ವಿನಿತಾ ಹಂದೆ ಮತ್ತು ಉಪನ್ಯಾಸಕ ಸುಜಯೀಂದ್ರ ಹಂದೆ ನಿರ್ವಹಿಸಿದರು. ಕಾಲೇಜಿನ ಪ್ರಾಂಶುಪಾಲರು ಜಗದೀಶ್ ಕುಮಾರ್ ಸಾಹಿತ್ಯ ವೇದಿಕೆಯ ಪರವಾಗಿ ನಟಿ ಕಾವ್ಯ ಹಂದೆಯವರನ್ನು ಸಂಮಾನಿಸಿ ಗೌರವಿಸಿದರು.

ಕಾಲೇಜಿನ ಹಿರಿಯ ಉಪನ್ಯಾಸಕಿ ಸುಮಾ, ಸಾಹಿತ್ಯ ಸಂಘದ ಸಂಚಾಲಕಿ, ಲೇಖಕಿ ಸುಧಾ

ಆಡುಕಳ, ಉಪನ್ಯಾಸಕರಾದ ಪ್ರೇಮ, ಭವ್ಯ, ಶಾಲಿನಿ, ಡಾ|ಉಷಾ, ಗಂಗಾಧರ, ಛಾಯಾ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಸಾಹಿತ್ಯ ಸಂಘದ ವಿದ್ಯಾರ್ಥಿ ಪ್ರತಿನಿಧಿಗಳಾದ ಕುಮಾರಿ ಗ್ರೀಷ್ಮಿತಾ ಪಿಂಟೊ, ಕುಮಾರಿ ಲವಿಕಾ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

ʼಹಕ್ಕಿ ಮತ್ತು ಅವಳು’ ಏಕವ್ಯಕ್ತಿ ನಾಟಕ ಪ್ರದರ್ಶನದಲ್ಲಿ ನಟಿ ಕಾವ್ಯ ಹಂದೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!