spot_img
Wednesday, January 22, 2025
spot_img

ಆನೆಗುಡ್ಡೆ ಶ್ರೀ ವಿನಾಯಕ ದೇಗುಲ: ಸೈಕಲ್‌ ಜಾಥ ಯೋಧ-2024 ಲಾಂಛನ ಅನಾವರಣ

ಆನೆಗುಡ್ಡೆ, ಆ.29 : ಕುಂದಾಪುರ ರೂರಲ್ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ, ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ(ರಿ.) ಕುಂದಾಪುರ, ಎಂ.ಜಿ. ಫ್ರೆಂಡ್ಸ್, ಕುಂಭಾಶಿ, ವಿಶ್ವಹಿಂದೂ ಪರಿಷತ್ ಹಾಗೂ ಭಜರಂಗದಳ ತೆಕ್ಕಟ್ಟೆ ಘಟಕ, ಸೈಕಲ್ ಅಸೋಸಿಯೇಶನ್ ಕುಂದಾಪುರ ಇವರ ಸಹಯೋಗದೊಂದಿಗೆ ವಿಶ್ವ ಹೃದಯ ದಿನದ ಅಂಗವಾಗಿ ಸೆ.29ರಂದು ನಡೆಯಲಿರುವ ಸುಮಾರು 10ಕಿ.ಮೀ. ಸೈಕಲ್‌ ಜಾಥ ಯೋಧ -2024 ಇದರ ಲಾಂಛನವನ್ನು ಕುಂಭಾಶಿ ಆನೆಗುಡ್ಡೆ ಶ್ರೀ ವಿನಾಯಕ ದೇಗುಲದ ಆಡಳಿತ ಧರ್ಮದರ್ಶಿ ಕೆ.ಶ್ರೀರಮಣ ಉಪಾಧ್ಯಾಯ ಅವರು ಆ.29ರಂದು ಕುಂಭಾಶಿ ಆನೆಗುಡ್ಡೆ ಶ್ರೀ ವಿನಾಯಕ ದೇಗುಲದಲ್ಲಿ ಅನಾವರಣಗೊಳಿಸಿದರು.

ಇದೇ ಸಂದರ್ಭದಲ್ಲಿ ಗೀತಾನಂದ ಫೌಂಡೇಶನ್ ಇದರ ಪ್ರವರ್ತಕ ಆನಂದ ಸಿ.ಕುಂದರ್ ಅವರು ಟೀ ಶರ್ಟ್ (ಜೆರ್ಸಿ) ಅನಾವರಣಗೊಳಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಹಿರಿಯ ನ್ಯಾಯವಾದಿ ರವಿಕಿರಣ್ ಮುರುಡೇಶ್ವರ, ಕುಂಭಾಶಿ ಗ್ರಾಮ ಪಂಚಾಯತ್ ಇದರ ಅಧ್ಯಕ್ಷ ಆನಂದ ಪೂಜಾರಿ, ಹಿರಿಯ ಗ್ರಾ.ಪಂ. ಸದಸ್ಯೆ ರಾಧಾದಾಸ್, ಕೆ.ರವಿರಾಜ್ ಉಪಾಧ್ಯಾಯ, ಪರ್ಯಾಯ ಅರ್ಚಕ ಕೆ.ಕೃಷ್ಣಾನಂದ ಉಪಾಧ್ಯಾಯ ಮತ್ತು ಸಹೋದರರು, ದೇಗುಲದ ವ್ಯವಸ್ಥಾಪಕ ನಟೇಶ್ ಕಾರಂತ್ ತೆಕ್ಕಟ್ಟೆ, ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ (ರಿ.) ಕುಂದಾಪುರ ಇದರ ಅಧ್ಯಕ್ಷ ನಾಗರಾಜ ರಾಯಪ್ಪನಮಠ, ಸೈಕಲ್ ಅಸೋಸಿಯೇಶನ್ ಕುಂದಾಪುರ ಇದರ ಪ್ರವೀಣ್, ವಿಶ್ವಹಿಂದೂ ಪರಿಷತ್ ಹಾಗೂ ‘ಭಜರಂಗ ದಳ ದ ತಾಲೂಕು ಸಹ ಸಂಚಾಲಕ ಶ್ರೀನಾಥ ಶೆಟ್ಟಿ ಮೇಲ್ತಾರುಮನೆ, ಬಿಜೆಪಿ ಯುವಮೋರ್ಚಾ ಇದರ ಅಧ್ಯಕ್ಷ ಕಿರಣ್ ಪೂಜಾರಿ ತೆಕ್ಕಟ್ಟೆ,, ಆನ್‌ಲೈನ್ ಪಾರ್ಟನರ್ ಗೌತಮ್ ನಾವಡ, ಪಿಡಬ್ಲ್ಯುಡಿ ಗುತ್ತಿಗೆದಾರ ಅರ್ಜುನ್‌ದಾಸ್, ಎಂಜಿನಿಯರ್ ಶ್ರೀನಿಧಿ ಉಪಾಧ್ಯಾಯ, ಕುಂದಾಪುರ ರೂರಲ್ ಆಯುರ್ವೇದ ಮೆಡಿಕಲ್ ಕಾಲೇಜಿನ ಟ್ರಸ್ಟಿ ಡಾ. ಮುರಳಿಕೃಷ್ಣ ಭಟ್, ಮೋಹನ್‌ಕೃಷ್ಣ ಭಟ್, ಕೌಶಿಕ್ ದೇವಾಡಿಗ, ರವಿಕುಮಾರ್ ಶೆಟ್ಟಿ , ಡಾ. ಹೇಮಾ, ಡಾ. ಅಖಿಲ್, ಡಾ. ಪ್ರತಾಪ್ ಮತ್ತಿತರರು ಉಪಸ್ಥಿತರಿದ್ದರು.

ಕುಂದಾಪುರ ರೂರಲ್ ಆಯುರ್ವೇದ ಮೆಡಿಕಲ್ ಕಾಲೇಜು ಇದರ ಪ್ರಾಂಶುಪಾಲ ಡಾ| ಎಸ್.ಜಿ.ಪ್ರಸನ್ನ ಐತಾಳ್ ಸ್ವಾಗತಿಸಿ, ಡಾ|ಸವಿತಾ ಪ್ರಸನ್ನ ಐತಾಳ್ ವಂದಿಸಿದರು.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!