Monday, September 9, 2024

ಬೆಂಗಳೂರು: ಯಕ್ಷದೇಗುಲ ತಂಡದಿಂದ ಯಕ್ಷಗಾನ ಪ್ರದರ್ಶನ

ಬೆಂಗಳೂರು: ಬೆಂಗಳೂರಿನಲ್ಲಿ ಕಳೆದ 44  ವರ್ಷದಿಂದ ಕೆ. ಮೋಹನ್ ನಿರ್ದೇಶನ ಮತ್ತು ಪ್ರಿಯಾಂಕ ಕೆ. ಮೋಹನ್ ನೃತ್ಯ ಸಂಯೋಜನೆಯಲ್ಲಿ ಬೆಂಗಳೂರಿನ ಯಕ್ಷದೇಗುಲ ತಂಡವು ಸಾಂಪ್ರದಾಯಿಕ ಯಕ್ಷಗಾನ, ನಾಟಕಗಳು ಹಾಗೆಯೇ ನವೀನ ಮತ್ತು ಪ್ರಾಯೋಗಿಕ ನಿರ್ಮಾಣಗಳನ್ನು ಪ್ರದರ್ಶಿಸುವ ಏಕೈಕ ತಂಡವಾಗಿದೆ. ಈವರೆಗೆ 5000ಕ್ಕೂ ಹೆಚ್ಚು ಪ್ರದರ್ಶನವನ್ನು ದೇಶ, ವಿದೇಶದಲ್ಲೂ ನೀಡಿ ಪ್ರಖ್ಯಾತಿ ಹೊಂದಿದೆ.

ಸದಾ ತರಬೇತಿ, ಪ್ರದರ್ಶನ ನೀಡುವ ಚಟುವಟಿಕೆಯಿಂದಿರುವ ಯಕ್ಷದೇಗುಲ ಪ್ರಖ್ಯಾತ ಕಲಾವಿದರ ಕೊಡುವಿಕೆಯಲ್ಲಿ ಆ.೨೦ರಂದು ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಶ್ರೀ ರಾಘವೇಂದ್ರ ತೀರ್ಥ ಗುರು ಸಾರ್ವಭೌಮರ ಆರಾಧನಾ ಮಹೋತ್ಸವದಲ್ಲಿ “ಸುದರ್ಶನ ಗರ್ವಭಂಗ” ಯಕ್ಷಗಾನ ಪ್ರದರ್ಶನ ಸಾವಿರಾರು ಪ್ರೇಕ್ಷಕರನ್ನು ಬಲುವಾಗಿ ರಂಜಿಸಿತು. ಕಲಾವಿದರಾಗಿ ಹಿಮ್ಮೇಳದಲ್ಲಿ ಯಕ್ಷ ಗುರುಗಳಾದ ಲಂಬೋದರ ಹೆಗಡೆ, ಚಂಡೆಯಲ್ಲಿ ಶ್ರೀನಿವಾಸ ಪ್ರಭು, ಮದ್ದಲೆಯಲ್ಲಿ ಸಂಪತ್ ಕುಮಾರ್, ಮುಮ್ಮೇಳದಲ್ಲಿ ಹಿರಿಯ ಕಲಾವಿದರಾದ ಬಾಲಕೃಷ್ಣ ಭಟ್, ಕಡಬಾಳ ಉದಯ ಹೆಗಡೆ, ತಮ್ಮಣ್ಣ ಗಾಂವ್ಕರ್, ಸ್ಪೂರ್ತಿ ಭಟ್, ರಾಮಕೃಷ್ಣ ಭಟ್, ಉದಯ ಭೋವಿ, ಶ್ರೀ ವಿದ್ಯಾ, ಶ್ರೀವತ್ಸ ಮತ್ತು ಪ್ರಕಾಶ್ ಉಳ್ಳೂರರವರು ಭಾಗವಹಿಸಿದರು.

ಕಾರ್ಯಕ್ರಮವನ್ನು ಯಕ್ಷಗುರು ಕೋಟ ಸುದರ್ಶನ ಉರಾಳರು ಸಂಯೋಜನೆ ಮಾಡಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!