spot_img
Wednesday, April 1, 2026
spot_img

ಭ್ರಷ್ಟ ಸಿದ್ದರಾಮಯ್ಯ ಸರ್ಕಾರ ತನ್ನ ಭ್ರಷ್ಟಾಚಾರ ಮುಚ್ಚಿಕೊಳ್ಳಲು ಗುಳ್ಳೆ ನರಿ ಬುದ್ಧಿ ತೋರಿಸುತ್ತಿದೆ : ಬಿಜೆಪಿ ಟೀಕೆ

ಜನಪ್ರತಿನಿಧಿ (ಬೆಂಗಳೂರು) : ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ ಮುಳುಗಿ ಪತನಗೊಳ್ಳಲು ಸಿದ್ಧವಾಗಿರುವ ರಾಜ್ಯ ಕಾಂಗ್ರೆಸ್‌ ಸರ್ಕಾರ  ಬಿಎಂಟಿಸಿ ಲಾಭದಲ್ಲಿದೆ ಎಂದು ಸುಳ್ಳು ಸುದ್ದಿ ಹಬ್ಬಿಸುವ ಮೂಲಕ ತೇಪೆ ಹಚ್ಚಿಕೊಳ್ಳಲು ಯತ್ನಿಸುತ್ತಿದೆ ಎಂದು ರಾಜ್ಯ ಬಿಜೆಪಿ ಖಾಸಗಿ ಸುದ್ದಿ ಮಾಧ್ಯಮವೊಂದರಲ್ಲಿ ಪ್ರಕಟಗೊಂಡಿರುವ ವರದಿಯನ್ನು ಉಲ್ಲೇಖಿಸಿ ಟೀಕಿಸಿದೆ.

ಕಾಂಗ್ರೆಸ್‌ ಸುಳ್ಳು ಸುದ್ದಿಯ ಕೀಳುಮಟ್ಟದ ರಾಜಕೀಯ ಪ್ರಚಾರ ನೋಡಿ ಜನರು ಸಾಮಾಜಿಕ ಜಾಲತಾಣದಲ್ಲಿ ನಗಾಡುತ್ತಿದ್ದಾರೆ. ಸಾರಿಗೆ ಇಲಾಖೆಗಳು ನಿಜಕ್ಕೂ ಲಾಭದಲ್ಲೇ ಇದ್ದರೆ, ಮಿನಿಸ್ಟರ್‌ ರಾಮಲಿಂಗಾ ರೆಡ್ಡಿ  ಅವರೇ, ಜನ ಸಾಮಾನ್ಯರ ಮೇಲೆ ಬಸ್‌ ಪ್ರಯಾಣ ದರ ಏರಿಕೆ ಏಕೆ? ಸಾಮಾನ್ಯ ಬಸ್‌ಗಳಿಂದಲೇ ಇಷ್ಟೊಂದು ಲಾಭ ಬರುತ್ತಿದೆ ಎಂದಾದರೆ, ಎಸಿ ಬಸ್‌ಗಳಲ್ಲಿ ಮಹಿಳೆಯರಿಗೆ ಸೌಲಭ್ಯ ಕೊಡುಬಹುದು ಅಲ್ಲವೇ? ಎಂದು ಬಿಜೆಪಿ ಪ್ರಶ್ನಿಸಿದೆ.

ರಾಜ್ಯದಲ್ಲಿರುವ ಪುರಷರಿಗೂ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಡಿ. ಸಾರಿಗೆ ನಿಗಮಗಳೆಲ್ಲವೂ ಭರಪೂರ ಲಾಭ ಗಳಿಸಲಿ. ಶಾಲಾ ಕಾಲೇಜು ಮಕ್ಕಳು ಓಡಾಡುವುದಕ್ಕೆ ಸರಿಯಾದ ಬಸ್‌ ಬಿಡುವ ಯೋಗ್ಯತೆ ಇಲ್ಲದ ಭ್ರಷ್ಟ ಸಿದ್ದರಾಮಯ್ಯ  ಸರ್ಕಾರ ತನ್ನ ಭ್ರಷ್ಟಾಚಾರ ಮುಚ್ಚಿಕೊಳ್ಳಲು ಗುಳ್ಳೆ ನರಿ ಬುದ್ಧಿ ತೋರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.

https://x.com/BJP4Karnataka/status/1826261536718880863?t=7EWyVXSUlUuuNkm5Z35umQ&s=08

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!