Monday, September 9, 2024

ಮುಡಾ ಪ್ರಕರಣ : ಸಿಎಂ ಸಿದ್ದರಾಮಯ್ಯಗೆ ತಾತ್ಕಾಲಿಕ ರಿಲೀಫ್‌ ನೀಡಿ ಹೈಕೋರ್ಟ್‌ ಆದೇಶ

ಜನಪ್ರತಿನಿಧಿ (ಬೆಂಗಳೂರು) : ಮುಡಾ ಹಗರಣದಲ್ಲಿ ಸಿಲುಕಿದ್ದ ಸಿಎಂ ಸಿದ್ದರಾಮಯ್ಯ ಅವರಿಗೆ ತಕ್ಷಣದ ರಿಲೀಫ್‌ ಸಿಕ್ಕಿದೆ. ಸಿದ್ದರಾಮಯ್ಯ ವಿರುದ್ದ ಯಾವುದೇ ತಕ್ಷಣದ ಕ್ರಮ ಕೈಗೊಳ್ಳಬಾರದು ಎಂದು ಜನಪ್ರತಿನಿಧಿಗಳ ವಿಶೇಷ ಕೋರ್ಟ್‌ ಗೆ ಹೈಕೋರ್ಟ್‌ ಗೆ  ಸೂಚನೆ ನೀಡಿ ಆದೇಶಿಸಿದೆ.

ರಾಜ್ಯಪಾಲ ಥಾವರ್‌ ಚಾಂದ್‌ ಗೆಹ್ಲೋಟ್‌ ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಅವರು ಪ್ರಾಸಿಕ್ಯೂಶನ್‌ ಗೆ ಅನುಮತಿ ನೀಡಿದ್ದರು. ಆಗಸ್ಟ್‌ 29ರವರೆಗೆ ಮಧ್ಯಂತರ ತಡೆ ನೀಡಲಾಗಿದ್ದು, 29ರಂದು ಮುಂದಿನ ವಿಚಾರಣೆ ಹೈಕೋರ್ಟ್‌ ನಲ್ಲಿ ನಡೆಯಲಿದೆ.

ರಾಜ್ಯಪಾಲರ ಕ್ರಮ “ಕಾನೂನುಬಾಹಿರ ಮತ್ತು ಕಾನೂನಿನ ಅಧಿಕಾರ ರಹಿತ” ಮತ್ತು ಅವರ ಪ್ರಾಸಿಕ್ಯೂಷನ್‌ ಗೆ ಅವಕಾಶ ನೀಡುವುದರಿಂದ “ತಮ್ಮ ಖ್ಯಾತಿಗೆ ಹಾನಿ” ಹಾಗೂ “ಆಡಳಿತವನ್ನು ಅಡ್ಡಿಪಡಿಸುವ ಅಪಾಯವಿದೆ” ಹಾಗೂ ಸಂಭಾವ್ಯ ರಾಜಕೀಯ ಅಸ್ಥಿರತೆಗೆ ಕಾರಣವಾಗುತ್ತದೆ ಎಂಬ ಕಾರಣಕ್ಕಾಗಿ ಸಿದ್ದರಾಮಯ್ಯ ಈ ಮಧ್ಯಂತರ ಪರಿಹಾರವನ್ನು ಕೋರಿದ್ದರು.

ಖ್ಯಾತ ವಕೀಲ ಅಭಿಷೇಕ್‌ ಮನು ಸಿಂಘ್ವಿ ಸಿಎಂ ಸಿದ್ದರಾಮಯ್ಯ ಪರ ವಾದ ಮಂಡಿಸಿದ್ದರು. ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಪರ ತುಷಾರ್‌ ಮೆಹ್ತಾ ಹಾಗೂ ದೂರುದಾರ ಪ್ರಭುಲಿಂಗ ನಾವದಗಿ ವಾದ ಮಂಡಿಸಿದ್ದರು.‌

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!