spot_img
Saturday, December 7, 2024
spot_img

ಕಂಡ್ಲೂರಿನಲ್ಲಿ ಯಕ್ಷಗಾನ ಪ್ರದರ್ಶನ: ಸಾಧಕರಿಗೆ ಸನ್ಮಾನ

ಕುಂದಾಪುರ: ಕಂಡ್ಲೂರು ಮಾರಿಕಾಂಬಾ ದೇವಿ ಜಾತ್ರೆ ಹಾಗೂ ಸ್ವಾತಂತ್ರೋತ್ಸವದ ಪ್ರಯುಕ್ತ ಯಕ್ಷಸೌರಭ ಪ್ರವಾಸಿ ಮೇಳ ಕುಂದಾಪುರ ಇವರಿಂದ ನೇತಾಜಿ ಶಾಲೆ ಕಂಡ್ಲೂರಿನಲ್ಲಿ ‘ಜ್ವಾಲ ಪ್ರತಾಪ’ ಯಕ್ಷಗಾನ ಪ್ರದರ್ಶನಗೊಂಡಿತು.

ಈ ಸಂದರ್ಭದಲ್ಲಿ ಕಾಂತಾರ ಸಿನಿಮಾ ಖ್ಯಾತಿಯ ದೈವನರ್ತಕ ನಾಗರಾಜ್ ಮೂಡುವಾಲ್ತೂರು ಹಾಗೂ ಪ್ರಸಂಗಕರ್ತ ಮಹಾಬಲ ಪುಜಾರಿ ಹೇರಿಕುದ್ರು ಇವರನ್ನು ಗೌರವಿಸಲಾಯಿತು.

ವೇದಿಕೆಯಲ್ಲಿ ಕಾವ್ರಾಡಿ ಗ್ರಾಮ ಪಂಚಾಯತ್ ಮಾಜಿ ಅಧ್ಶಕ್ಷ ವಿಜಯ ಪುತ್ರನ್ ಕಂಡ್ಲೂರು, ಹೊಟೇಲ್ ಉದ್ಶಮಿ ರಾಜೇಶ್ ಶೇರಿಗಾರ್ ಕಂಡ್ಲೂರು, ಕಾಳಿಂಗ ಶೆಟ್ಟಿ ಹಳನಾಡು, ಸಂತೋಷ ಶೆಟ್ಟಿ ಬಲಾಡಿ, ಮುಖ್ಯ ಶಿಕ್ಷಕ ಪ್ರಕಾಶ್ ಶೆಟ್ಟಿ, ಯಕ್ಷಗಾನದ ವ್ಯವಸ್ಥಾಪಕ ಮಹಮ್ಮದ್ ಗೌಸ್ ಕಾವ್ರಾಡಿ, ಚಂದ್ರ ಭಂಡಾರಿ ಕಾವ್ರಾಡಿ, ಭಾಗವತರಾದ ಚಂದ್ರಕಾಂತ್ ಮೂಡುಬೆಳ್ಳೆ, ಕಲಾವಿದ ಶಶಿಕಾಂತ ಶೆಟ್ಟಿ ಕಾರ್ಕಳ ಉಪಸ್ಥಿತರಿದ್ದರು.

ಶಾಲೆಯ ಸಂಚಾಲಕ ಸೌಕೂರು ಸುಭಾಶ್ಚಂದ್ರ ಶೆಟ್ಟಿ ಯಕ್ಷಗಾನ ಪ್ರದರ್ಶನಕ್ಕೆ ಸ್ಥಳವಕಾಶ ನೀಡಿ ಸಹಕರಿಸಿದರು. ಮೊಗವೀರ ಯಕ್ಷ ಕಲಾ ವೇದಿಕೆ ಕಂಡ್ಲೂರು ಚಂದ್ರ ಮೊಗವೀರ ಕಾರ್ಯಕ್ರಮ ಸಂಯೋಜಿಸಿದರು.

 

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!