Wednesday, September 11, 2024

ವಕ್ವಾಡಿಯಲ್ಲಿ ದುಷ್ಕರ್ಮಿಗಳಿಂದ ತಲ್ವಾರ್‌ನಿಂದ ಹಲ್ಲೆ | ಆರೋಪಿಗಳಿಬ್ಬರು ಪೊಲೀಸರ ವಶಕ್ಕೆ, ಉಳಿದವರಿಗಾಗಿ ಮುಂದುವರಿದ ಶೋಧ

ಜನಪ್ರತಿನಿಧಿ (ವಕ್ವಾಡಿ) : ಕುಂದಾಪುರ ತಾಲೂಕಿನ ಕಾಳಾವಾರ ಗ್ರಾಮ ಪಂಚಾಯತ್‌ ವ್ಯಾಪ್ತಿಯ ವಕ್ವಾಡಿಯಲ್ಲಿ ನಿನ್ನೆ(ಆದಿತ್ಯವಾರ) ಸಂಜೆ ಗಾಂಜಾ ವ್ಯಸನಿಗಳು ಎಂದು ಹೇಳಲಾಗುವ ಸುಮಾರು ಹತ್ತು ಮಂದಿ ಇದ್ದ ತಂಡವೊಂದು ನಾಲ್ಕೈದು ಮಂದಿಗೆ ತಲ್ವಾರ್‌ ಜಳಪಿಸಿ ಹಲ್ಲೆ ನಡೆಸಿರುವ ಘಟನೆ ನಡೆದಿದೆ.

ದೂರುದಾರರದಾರಾದ ವಕ್ವಾಡಿಯ ಅಶೋಕ (44) ಇವರು ಸ್ನೇಹಿತರಾದ ಚಂದ್ರಶೇಖರ, ಸುಧಾಕರ, ಹಾಗೂ ವಿಜಯ ಅರವರೊಂದಿಗೆ ದಿನಾಂಕ 18/08/2024 ರಂದು ಮದ್ಯಾಹ್ನ ವಕ್ವಾಡಿ ರಸ ಬಾರಿನಲ್ಲಿ ಊಟ ಮಾಡಲು ಹೋಗಿದ್ದು ಆ ಸಮಯ ಬಾರಿನಲ್ಲಿ ಕುಂಬಾಶಿ ಗಣೇಶ, ವಕ್ವಾಡಿಯ ಎಡ್ವರ್ಡ, ಆದರ್ಶ, ಇಲಿಯಾಸ್‌, ಗೋವರ್ಧನ, ಪುನಿತ್‌ ಹಾಗೂ ಇತರರು ದೂರುದಾರರ ಪಕ್ಕದ ಕ್ಯಾಬಿನ್‌ ನಲ್ಲಿ ಊಟ ಮಾಡುತ್ತಿದ್ದರು, ದೂರುದಾರರು ಬಾರಿನ ಹೊರಗೆ ಬರುವಾಗ ದೂರುದಾರರ ಸ್ನೇಹಿತರಾದ ಚಂದ್ರಶೇಖರ ಮತ್ತು ಎಡ್ವರ್ಡ ರವರ ಕಡೆಯವರಿಗೆ ಮಾತುಕಥೆ ಆಗಿದ್ದು ನಂತರ ಆರು ಗಂಟೆಗೆ ಸುಧಾಕರನಿಗೆ ಆದರ್ಶ ಎಂಬಾತನು ಕರೆ ಮಾಡಿ ನೀವು ಎಲ್ಲಿ ಇದ್ದೀರಿ ನಾವು ಅಲ್ಲಿಗೆ ಬಂದು ಮಾತನಾಡುತ್ತೇವೆ ಎಂದು ಹೇಳಿದಾಗ ವಕ್ವಾಡಿ ಗ್ರಾಮದ ಗುರುಕುಲ ಶಾಲೆಯ ಬಳಿ ಸೇತುವೆ ಸಮೀಪ ಇರುವುದಾಗಿ ತಿಳಿಸಿದಂತೆ, ಆ ಸಮಯ ಆಪಾದಿತರಾದ ಎಡ್ವರ್ಡ, ಕುಂಬಾಶಿ ಗಣೇಶ, ಆದರ್ಶ, ಶಶಿಕಾಂತ, ಇಲಿಯಾಸ್‌, ಗೋವರ್ಧನ, ಪುನೀತ, ತರುಣ, ಸುಶಾಂತ, ಹರ್ಷ, ವಿಘ್ನೇಶ ಇಬ್ಬರು ಅಲ್ಲಿಗೆ 4-5 ಬೈಕಿನಲ್ಲಿ ಬಂದು , ಎಡ್ವರ್ಡನು ಕೈಯಲ್ಲಿ ತಲ್ವಾರ, ಉಳಿದವರ ಕೈಯಲ್ಲಿ ಬಿಯರ್‌ ಬಾಟಲಿ, ಬ್ಯಾಟ್‌, ವಿಕೇಟ್ ಹಿಡಿದುಕೊಂಡು ಬಂದು ಎಕಾಎಕಿಯಾಗಿ ಶಶಿಕಾಂತನು ಆತನ ಕೈಯಲ್ಲಿದ್ದ ಬಿಯರ್‌ ಬಾಟಲಿಯಿಂದ ದೂರುದಾರರ ಹಣೆಗೆ ಹೊಡೆದನು. ಉಳಿದವರೆಲ್ಲರು ಕೈಯಲ್ಲಿದ್ದ ಬಾಟಲಿ, ವಿಕೇಟ, ಬ್ಯಾಟನಿಂದ ಕಾಲಿಗೆ, ಭುಜಕ್ಕೆ ಹೊಡೆದರು, ಚಂದ್ರಶೇಖರ ರವರಿಗೆ ಕುಂಬಾಶಿ ಗಣೇಶನು ಕೈಯಲ್ಲಿದ್ದ ಬಿಯರ್‌ ಬಾಟಲಿಯಿಂದ ಕೊಲೆ ಮಾಡುವ ಉದ್ದೇಶದಿಂದ ತಲೆಯ ಬಲಭಾಗಕ್ಕೆ, ಹಿಂಬಾಗಕ್ಕೆ ಹೊಡೆದನು, ಹಾಗೂ ಇತರರು ಕೂಡ ಹೊಡೆದಿರುತ್ತಾರೆ. ಆ ಸಮಯ ಎರಡು ರಿಕ್ಷಾದಲ್ಲಿ ಪ್ರಯಾಣಿಕರು ಬಂದಿದ್ದು, ಗಲಾಟೆಯನ್ನು ನೋಡಿ ನಿಲ್ಲಿಸಿದಾಗ 2 ರಿಕ್ಷಾದ ಮುಂದಿನ ಗ್ಲಾಸ್‌ ನ್ನು ಎಡ್ವರ್ಡನು ತಲ್ವಾರ್‌ ನಿಂದ ಹೊಡೆದು ಪುಡಿ ಮಾಡಿರುತ್ತಾನೆ. ಆ ಸಮಯ ಅಲ್ಲಿಗೆ ಕಾರ್ತಿಕ, ಉಮೇಶ, ನಾಗರಾಜ ಬಂದಿದ್ದು, ಅವರ ಪೈಕಿ ಉಮೇಶನ ಬೈಕಿಗೂ ಎಡ್ವರ್ಡನು ಹೊಡೆದು ಜಖಂಗೊಳಿಸಿರುತ್ತಾನೆ. ಅಲ್ಲದೇ ಸುಧಾಕರ ಮತ್ತು ವಿಜಯ ರವರಿಗೂ ಹಲ್ಲೆ ಮಾಡಿರುತ್ತಾರೆ. ನಂತರ ಆರೋಪಿತರು ಅವಾಚ್ಯ ಶಬ್ದಗಳಿಂದ ಬೈದು ಬೆದರಿಕೆ ಹಾಕಿ ಅವರುಗಳು ಬಂದ ಬೈಕಿನಲ್ಲಿ ಹೋಗಿರುತ್ತಾರೆ. ಆರೋಪಿತ ಆದರ್ಶ ಮತ್ತು ಚಂದ್ರಶೇಖರ ರವರ ನಡುವಿನ ಹಿಂದಿನ ಗಲಾಟೆಯ ದ್ವೇಷದಿಂದ ಆಪಾದಿತರೆಲ್ಲರೂ ಸೇರಿ ಕೊಲೆ ಮಾಡುವ ಉದ್ದೇಶದಿಂದ ದೂರುದಾರರಿಗೆ ಹಾಗೂ ಚಂದ್ರಶೇಖರ ಎಂಬಾತನಿಗೆ ಮಾರಾಣಾಂತಿಕ ಹಲ್ಲೆ ನಡೆಸಿರುವುದಾಗಿ ದೂರಿನಲ್ಲಿ ಹೇಳಲಾಗಿದೆ.

ದೂರಿನಂತೆ ಕುಂದಾಪುರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 72/2024 ಕಲಂ: 189(2), 191(2), 191(3), 118(1) 109, 324(4), 351(3), 352 ಜೊತೆಗೆ 190 BNS ರಂತೆ ಪ್ರಕರಣ ದಾಖಲಾಗಿರುತ್ತದೆ.

ಮಾಹಿತಿ : ಉಡುಪಿ ಪೊಲೀಸ್‌ ಬ್ಲಾಗ್‌ 

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!