spot_img
Monday, June 15, 2026
spot_img

ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯಲ್ಲಿ ಪೋಷಕರ ಸಮಾಲೋಚನ ಸಭೆ

ಪ್ರಸಕ್ತ ವರ್ಷದ ಶೈಕ್ಷಣಿಕ ಚಟುವಟಿಕೆಗಳು, ಸಂಸ್ಥೆಯ ಕ್ರಿಯಾ ಯೋಜನೆಗಳು ಮತ್ತು ಧ್ಯೇಯೋದ್ದೇಶಗಳು, ಪಠ್ಯಕ್ರಮದ ವ್ಯಾಪ್ತಿ, ಶಿಕ್ಷಣ ಕ್ಷೇತ್ರದಲ್ಲಿನ ನೂತನ ಸವಾಲುಗಳು, ಪೋಷಕ-ಶಿಕ್ಷಕರ ಸಹಕಾರ, ಸಹಭಾಗಿತ್ವದ ಅವಶ್ಯಕತೆಗಳು ಇತ್ಯಾದಿ ಅಂಶಗಳನ್ನು ಪೋಷಕರಿಗೆ ತಲುಪಿಸಲು ಆರರಿಂದ ಎಂಟನೇ ತರಗತಿಯ ವಿದ್ಯಾರ್ಥಿಗಳ ಪೋಷಕರ ಸಮಾಲೋಚನ ಸಭೆಯನ್ನು ದಿನಾಂಕ 11-06-2026ರಂದು, ಒಂಭತ್ತು ಮತ್ತು ಹತ್ತನೇ ತರಗತಿಗಳ ಪೋಷಕರ ಸಮಾಲೋಚನಾ ಸಭೆಯನ್ನು ದಿನಾಂಕ 12-06-2026 ರಂದು ನಡೆಸಲಾಯಿತು.
ಶ್ರೀ ಸಿದ್ಧಿ ಪ್ರತಿಷ್ಠಾನದ ಕಾರ್ಯದರ್ಶಿಗಳು ಹಾಗೂ ಸಂಸ್ಥೆಯ ಪ್ರಾಂಶುಪಾಲರಾದ ಶರಣ ಕುಮಾರ ಅಧ್ಯಕ್ಷತೆಯ ನೆಲೆಯಲ್ಲಿ ಪೋಷಕರ ಅಹವಾಲುಗಳಿಗೆ ಸ್ಪಂದಿಸಿ ಮಾತನಾಡುತ್ತಾ “ಶಾಲಾ ವಾಹನಗಳ ವಿಚಾರದಲ್ಲಿ ಶಾಲೆ ಬಹಳಷ್ಟು ಜಾಗ್ರತೆ ವಹಿಸಿಕೊಂಡಿದ್ದು, ಹೊಸ ಬಸ್ಸುಗಳನ್ನು ಖರೀದಿಸಿದ್ದೇವೆ. ಶಾಲೆಯ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದ್ದು, ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಿಕೊಳ್ಳುತ್ತಿದ್ದೇವೆ. ಪೋಷಕರೂ ಕೂಡ ವಿದ್ಯಾರ್ಥಿಗಳ ಓದುವಿಕೆಗೆ ಯೋಗ್ಯವಾದ ವಾತಾವರಣವನ್ನು ಮನೆಯಲ್ಲೂ ಸಂರಚಿಸಬೇಕು. ಮಕ್ಕಳ ಮಾನಸಿಕ ಮತ್ತು ದೈಹಿಕ ಬದಲಾವಣೆಗಳನ್ನು ಆಗಾಗ ಪರಿಶೀಲಿಸುತ್ತಿದ್ದು, ಶಿಕ್ಷಕರ ಜೊತೆ ತಮ್ಮ ಮಗುವಿನ ಏಳಿಗೆಯ ಕುರಿತು ಆಗಾಗ ಸಂವಹನ ನಡೆಸುತ್ತಿರಬೇಕು. ಶಾಲೆಯು ವಿದ್ಯಾರ್ಥಿಗಳ ಸರ್ವಾಂಗೀಣ ವಿಕಾಸದ ಬಗ್ಗೆ ಚಿಂತಿಸುತ್ತಿದ್ದು, ಅದಕ್ಕೆ ಪೂರಕವಾಗಿ ಪೋಷಕರು ಸ್ಪಂದಿಸಿರಿ” ಎಂದು ವಿದ್ಯಾರ್ಥಿಗಳ ಹಿತದೃಷ್ಟಿಯ ಮಾಹಿತಿಗಳನ್ನು ಹಂಚಿಕೊಂಡರು.
ಈ ಸಂದರ್ಭದಲ್ಲಿ ಐ.ಸಿ.ಎಸ್.ಇ. ಪಠ್ಯಕ್ರಮ, ಪರೀಕ್ಷೆಗಳು, ವಿದ್ಯಾರ್ಥಿಗಳ ಮನೆಗೆಲಸ, ವಿದ್ಯಾರ್ಥಿಗಳ ವರ್ತನೆ ಮತ್ತು ದಿನಚರಿಯ ಕುರಿತು ಶಿಕ್ಷಕಿಯರಾದ ಶ್ರೀಮತಿ ಶ್ರದ್ಧಾ ನಾಯಕ್ ಮತ್ತು ಕುಮಾರಿ ಅಶ್ವಿನಿ ಪರಿಪೂರ್ಣ ಮಾಹಿತಿಯನ್ನು ಪಾಲಕರಿಗೆ ನೀಡಿದರು.
ವೇದಿಕೆಯಲ್ಲಿ ಆಡಳಿತಾಧಿಕಾರಿಗಳಾದ ಶ್ರೀಮತಿ ವೀಣಾ ರಶ್ಮಿ ಎಂ., ಉಪಪ್ರಾಂಶುಪಾಲರಾದ ರಾಮ ದೇವಾಡಿಗ, ಆಡಳಿತ ಸಲಹೆಗಾರರಾದ ಶ್ರೀಮತಿ ಸುಜಾತಾ ಸದಾರಾಮ್ ಪ್ರಾಥಮಿಕ ಶಾಲಾ ವಿಭಾಗದ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಹೇಮಮಾಲಿನಿ ಉಪಸ್ಥಿತರಿದ್ದರು. ಪೋಷಕ – ಶಿಕ್ಷಕ – ಶಿಕ್ಷಕೇತರ ವೃಂದದವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕಾರ್ಯಕ್ರಮವನ್ನು ಶಿಕ್ಷಕರಾದ ಪ್ರಸನ್ನ ಎಮ್ ಮತ್ತು ಶ್ರೀಮತಿ ಸುಮಲತಾ ಜೋಗಿ ನಿರ್ವಹಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!