spot_img
Monday, June 15, 2026
spot_img

ಕುಂದಾಪುರ; ಯುಬಿಎಂಸಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕ್ಲಬ್ ಗಳ ಉದ್ಘಾಟನೆ

ಕುಂದಾಪುರ: ಕುಂದಾಪುರ ಯುಬಿಎಂಸಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ 2026-27ನೆಯ ಶೈಕ್ಷಣಿಕ ಶಾಲೆಯ ಶೈಕ್ಷಣಿಕ ವರ್ಷದ ಹಲವಾರು ಕ್ಲಬ್ಸ್ ಗಳನ್ನು 08-06- 2026 ರಂದು ಉದ್ಘಾಟಿಸಲಾಯಿತು. ಇವುಗಳಲ್ಲಿ ಸಾಂಸ್ಕೃತಿಕ ಕ್ಲಬ್ ಭಾಷಾ ಕ್ಲಬ್ ಆಟೋಟ ಕ್ಲಬ್ ವಿಜ್ಞಾನ ಕ್ಲಬ್ ಗಣಿತ ಕ್ಲಬ್ ಕಲಾ ಕ್ಲಬ್ ಗಳನ್ನು ಉದ್ಘಾಟಿಸಲಾಯಿತು. ಈ ಕಾರ್ಯಕ್ರಮಕ್ಕೆ ಕುಂದಾಪುರದ ಆರತಿ ಆಪ್ಟಿಕಲ್ಸ್ ನ ಮಾಲೀಕರಾದ ಶ್ರೀಮತಿ ಆರತಿ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಅವರು ‘ಮಕ್ಕಳ ಪ್ರತಿಭೆಯನ್ನು ಪ್ರಚುರ ಪಡಿಸಲು ಅವರಿಗೊಂದು ವೇದಿಕೆಯ ಅಗತ್ಯವಿದೆ , ಅದಕ್ಕೆ ಈ ಕ್ಲಬ್ ಗಳು ಖಂಡಿತ ಮನ್ನಣೆಯನ್ನ ಒದಗಿಸುತ್ತದೆ’ ಎಂದು ತಮ್ಮ ಅತಿಥಿ ಭಾಷಣದಲ್ಲಿ ನುಡಿದರು. ಕಾರ್ಯಕ್ರಮದ ಅಧ್ಯಕ್ಷರಾದ ಕುಂದಾಪುರ ಸಿ ಎಸ್ ಐ ಕೃಪಾ ಚರ್ಚಿನ ಧರ್ಮಗುರುಗಳಾದ ರೆವರೆಂಡ್ ಇಮಾನುಯಲ್ ಜಯಕರರವರು ಮಕ್ಕಳಿಗೆ ಕ್ಲಬ್‌ಗಳನ್ನು ಮಾಡಿಸುವುದರಿಂದ ಎಲ್ಲಾ ಕ್ಷೇತ್ರಗಳಲ್ಲಿ ಸ್ಪರ್ಧೆಗಳಲ್ಲಿ ಅವರ ಭಾಗವಹಿಸುವಿಕೆ ಹೆಚ್ಚಿಸಬಹುದು ಎಂದು ನುಡಿದರು. ಶಾಲಾ ಪ್ರಾಂಶುಪಾಲೆ ಶ್ರೀಮತಿ ಅನಿತಾ ರವರು ತಮ್ಮ ಪರಿಚಯ ಭಾಷಣದಲ್ಲಿ ಎಲ್ಲಾ ಮಕ್ಕಳು ಎಲ್ಲಾ ಕ್ಲಬ್ ಗಳಲ್ಲೂ ಭಾಗವಹಿಸಿ, ಶಿಕ್ಷಕರಿಂದ ಉತ್ತಮವಾದ ಪ್ರತಿಭೆಗಳನ್ನು ಸೃಷ್ಟಿಸುವಂಥಾಗಲಿ ಎಂದು ಹಾರೈಸಿದರು. ಈ ಕಾರ್ಯಕ್ರಮವನ್ನು ವಿದ್ಯಾರ್ಥಿನಿ ನೇಹಾ ನಿರೂಪಿಸಿ, ತಮನ್ನಾ ಸ್ವಾಗತಿಸಿದರು. ಸಾಯಿ ಸಂಕಲ್ಪ ವಂದಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!