spot_img
Saturday, June 13, 2026
spot_img

ಸ.ಹಿ.ಪ್ರಾ.ಶಾಲೆ ನೂಜಾಡಿ-2 ಬಗ್ವಾಡಿ: ನೋಟ್ ಪುಸ್ತಕ ವಿತರಣೆ, ಎಲ್.ಕೆ.ಜಿ ಪುಟಾಣಿಗಳ ಅಕ್ಷರಭ್ಯಾಸ, ಪ್ರತಿಭಾ ಪುರಸ್ಕಾರ

ಕುಂದಾಪುರ: ಬೈಂದೂರು ವಲಯದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನೂಜಾಡಿ-2 ಬಗ್ವಾಡಿ ಇಲ್ಲಿ ಉಚಿತ ನೋಟ್ ಪುಸ್ತಕ ವಿತರಣಾ ಸಮಾರಂಭ, ಎಲ್.ಕೆ.ಜಿ ಪುಟಾಣಿಗಳ ಅಕ್ಷರಭ್ಯಾಸ ಕಾರ್ಯಕ್ರಮ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಿತು.

ಊರ ಹಿರಿಯ ಪುರೋಹಿತರಾದ ನಾಗಪ್ಪಯ್ಯ ಭಟ್ ನೇತೃತ್ವದಲ್ಲಿ ಎಲ್.ಕೆ.ಜಿ ಪುಟಾಣಿಗಳ ಅಕ್ಷರಭ್ಯಾಸ ಕಾರ್ಯಕ್ರಮವು ನಡೆಯಿತು. ದಾನಿಗಳಾದ ಕುಂಭಾಶಿಯ ಎಂ.ಎನ್ ಚಂದನ್ ಮತ್ತು ಮೀನಾ ಚಂದನ್ ದಂಪತಿಗಳು ಎಲ್ಲಾ ಮಕ್ಕಳಿಗೆ ಒಂದು ವರ್ಷಕ್ಕೆ ಆಗುವಷ್ಟು ನೋಟ್ ಪುಸ್ತಕಗಳನ್ನು ವಿತರಿಸಿದರು. ಈ ಶಾಲೆಯಲ್ಲಿ ಕಲಿತು 2026 ಮಾರ್ಚ್‌ನಲ್ಲಿ ನಡೆದ ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳಲ್ಲಿ ಶೇಕಡ 75ಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಎಂ.ಎನ್ ಚಂದನ್ ದಂಪತಿಗಳು ವಿದ್ಯಾರ್ಥಿವೇತನ ವಿತರಿಸಿ ಶಾಲಾವತಿಯಿಂದ ಗೌರವಿಸಲಾಯಿತು.

ಸಭೆಯ ಅಧ್ಯಕ್ಷತೆಯನ್ನು ಎಸ್.ಡಿ.ಎಂ.ಸಿ ಅಧ್ಯಕ್ಷರಾದ ರಾಧಾಕೃಷ್ಣ ಗಾಣಿಗ ವಹಿಸಿದ್ದರು. ದಾನಿಗಳಾದ ಎಂ.ಎನ್ ಚಂದನ್, ಮೀನಾ ಚಂದನ್, ಶತಮಾನೋತ್ಸವ ಸಮಿತಿಯ ಅಧ್ಯಕ್ಷರಾದ ಬಿ.ಎನ್ ಶೆಟ್ಟಿ, ಹಳೆ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ರಾಜೀವ ಶೆಟ್ಟಿ, ಹೊಸಾಡು ಕ್ಲಸ್ಟರ್ ಸಿ ಆರ್ ಪಿ.ಸತೀಶ್ ಶೆಟ್ಟಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರಕಾಶ್ ಆಚಾರ್ಯ ಹಾಗೂ ಪೋಷಕರು, ಎಸ್.ಡಿ.ಎಂ.ಸಿ ಸದಸ್ಯರು, ಶಿಕ್ಷಕರು ಉಪಸ್ಥಿತರಿದ್ದರು.

ಮುಖ್ಯೋಪಾಧ್ಯಾಯನಿ ಶೈಲಜಾ ಶೆಟ್ಟಿ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಹ ಶಿಕ್ಷಕಿ ಪೂರ್ಣಿಮಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ಸತ್ಯವತಿ ವಂದಿಸಿದರು. ಶಿಕ್ಷಕಿಯರಾದ ಉಷಾ, ರೇಷ್ಮಾ, ಚೈತ್ರ, ಸ್ವಾತಿ, ಶ್ವೇತ, ಹರ್ಷಿತ ಸಹಕರಿಸಿದರು.

 

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!