Wednesday, September 11, 2024

ಆ.15ರಂದು ಕೋಟೇಶ್ವರದಲ್ಲಿ ಸ್ವಾತಂತ್ರ್ಯೋತ್ಸವ ಪ್ರಯುಕ್ತ ಯಕ್ಷ ವೈಭವ

ಕುಂದಾಪುರ: ಆದಿತ್ಯ ಟ್ರಸ್ಟ್ ಕ್ಯಾದಗಿ ಇವರ ನೇತೃತ್ವದಲ್ಲಿ 78ನೇ ಸ್ವಾತಂತ್ಸ್ಯೋತ್ಸವ ದಿನಾಚರಣೆಯ ಅಂಗವಾಗಿ ಆ.15ರಂದು ಕೋಟೇಶ್ವರ ಅಂಕದಕಟ್ಟೆಯ ಸಹನಾ ಕನ್ವೆನ್ಯನ್ ಸೆಂಟರ್‌ನಲ್ಲಿ ಯಕ್ಷ ವೈಭವ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಜರುಗಲಿದೆ.

ಹಾಸ್ಯ ಕಲಾವಿದ ಕ್ಯಾದಗಿಯವರ ನೇತೃತ್ವದಲ್ಲಿ ಹುಟ್ಟಿಕೊಂಡ ಆದಿತ್ಯ ಟ್ರಸ್ಟ್ ನೇತೃತ್ವದಲ್ಲಿ ಕಲೆಯನ್ನು ಉಳಿಸಿ ಬೆಳಸುವ ಹಂಬಲದೊಂದಿಗೆ ಯಕ್ಷ ಕಾರ್ಯಕ್ರಮಗಳನ್ನು ಸಂಘಟಿಸುತ್ತಾ ಟ್ರಸ್ಟ್ ಬರುತ್ತಿದೆ. ಈಗಾಗಲೇ ಯಕ್ಷಗಾನ, ನಾಟಕ, ತಾಳಮದ್ದಲೆ, ಏಕವ್ಯಕ್ತಿ (ಪುಷ್ಟಿಕ ಯಾನ) ಮುಂತಾದ ಕಾರ್ಯಕ್ರಮಗಳನ್ನು ಸಮಾಜಕ್ಕೆ ನೀಡುತ್ತಾ ಬಂದಿರುವ ಜೊತೆಗೆ ಹಿರಿಯ ಕಲಾವಿದರನ್ನು ಗೌರವಿಸುತ್ತಾ ಬಂದಿದೆ.

ಆ.15ರಂದು ಕೋಟೇಶ್ವರ ಅಂಕದಕಟ್ಟೆಯ ಸಹನಾ ಕನ್ವೆನ್ಯನ್ ಸೆಂಟರ್‌ನಲ್ಲಿ ಸ್ವಾತಂತ್ರ್ಯೋತ್ಸವ ಪ್ರಯುಕ್ತ ಮಧ್ಯಾಹ್ನ 3 ಗಂಟೆಗೆ ದಿಗ್ಗಜ ಕಲಾವಿದರಿಂದ ವಿಶಿಷ್ಟ ಹಾಗೂ ವಿನೂತನ ಶೈಲಿಯ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಕಾರ್ಯಕ್ರಮ ವಿಶೇಷತೆಯಾಗಿ 86ರ ಇಳಿ ವಯಸ್ಸಿನ ಗೋಡೆಯವರ ರಾಮ, ಯಾಜಿ ಮತ್ತು ಕೊಂಡದಕುಳಿಯವರ ಲವಕುಶ, ತೀರ್ಥಳ್ಳಿಯವರ ಶತ್ರುಘ್ನ, ಶಶಿಕಾಂತರ ಅರ್ಜುನ ಮತ್ತು ಯಲಗುಪ್ಪರ ಉರ್ವಶಿ ಹಾಗೂ ವಿಶೇಷ ಆಕರ್ಷಣೆಯಾಗಿ ಒಂದು ಪ್ರಸಂಗವನ್ನು 15ಕ್ಕೂ ಮಿಕ್ಕಿ ಹಾಸ್ಯಗಾರರಿಂದ ಹಾಸ್ಯದ ರಸದೌತಣ ಪ್ರೇಕ್ಷಕರಿಗೆ ಸಿಗಲಿದೆ.

ಈ ಸಂದರ್ಭ ಯಕ್ಷಗಾನದಲ್ಲಿ ಡಾಕ್ಟರೇಟ್ ಪದವಿ ಪಡೆದ ಬಾರ್ಕೂರು ದೀಪಕ್ ಶೆಟ್ಟಿ, ಹಿರಿಯ ಯಕ್ಷ ಕಲಾವಿದ ಗೋಡೆಯವರಿಗೆ ಯಕ್ಷ ಬ್ರಹ್ಮ ಬಿರುದಾವಳಿ ಪ್ರಶಸ್ತಿ ಮತ್ತು ಕಲಾ ಪೊಷಕ ಖ್ಯಾತ ವೈದ್ಯ ಡಾ.ಆದರ್ಶ ಹೆಬ್ಬಾರ್ ಇವರಿಗೆ ಸನ್ಮಾನ ಕಾರ್ಯಕ್ರಮಗಳು ನಡೆಯಲಿದೆ.

ಸಂಸದ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ, ಶಾಸಕ ಕಿರಣ್ ಕುಮಾರ್ ಕೊಡ್ಗಿ, ಸಮಾಜ ಸೇವಕ ದಿನೇಶ್ ಹೆಗ್ಡೆ ಮೊಳಹಳ್ಳಿ, ಮೇಳದ ಯಾಜಮಾನ ಕಿಶನ್ ಹೆಗ್ಡೆ, ಬಂಟರ ಸಂಘದ ಮುಖಂಡರಾದ ಸುಗ್ಗಿ ಸುಧಾಕರ್ ಶೆಟ್ಟಿ, ಹೊಟೇಲ್ ಉದ್ಯಮಿಗಳಾದ ಹಾಲಾಡಿ ಆದರ್ಶ ಹೆಗ್ಡೆ, ಯೋಗಿಶ್ ಗಾಣಿಗ ಮುಂಬೈ, ಶರತ್ ಶೆಟ್ಟಿ, ಸಮಾಜ ಸೇವಕರಾದ ಡಾ.ಉಮೇಶ್ ಪುತ್ರನ್, ಸುಧೀರ್ ಕುಮಾರ್ ಶೆಟ್ಟಿ ಮಾರ್ಕೋಡು, ರಾಜಾರಾಮ ಶೆಟ್ಟಿ ಬ್ರಹ್ಮಾವರ, ಗೋಪಾಡಿ ಚಿಕ್ಕು ಅಮ್ಮ ದೇವಸ್ಥಾನ ಮೊಕ್ತೇಸರ ಆನಂದ ಬಿಳಿಯ ಮತ್ತಿತರು ಉಪಸ್ಥಿತರಿರಲಿದ್ದಾರೆ ಎಂದು ಆದಿತ್ಯ ಟ್ರಸ್ಟ್ ಅಧ್ಯಕ್ಷ ಕ್ಯಾದಗಿ ಮಹಾಬಲೇಶ್ವರ ಭಟ್ ಹಾಗೂ ಕಾರ್ಯದರ್ಶಿ ಪ್ರಭಾ ಭಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!