Wednesday, September 11, 2024

ಐಟಿಬಿಪಿ ನೇಮಕಾತಿ : ಎಸ್‌ಎಸ್‌ಎಲ್‌ಸಿ, ಡಿಪ್ಲೋಮಾ ಓದಿದವರಿಗೆ ಸುವರ್ಣವಕಾಶ

ಜನಪ್ರತಿನಿಧಿ : ಇತ್ತೀಚೆಗೆ ಐಟಿಬಿಪಿ ಕಾನ್ಸ್‌ಟೇಬಲ್‌ ಪಯೋನೀರ್ ಹುದ್ದೆಗಳಿಗೆ ಹಾಗೂ ವೆಟರಿನರಿ ಮತ್ತು ಪ್ರಾಣಿ ಸಾಗಾಣಿಕೆ ವಿಭಾಗದ ಹುದ್ದೆಗಳಿಗೆ ಅಧಿಸೂಚನೆ ಬಿಡುಗಡೆ ಮಾಡಿದೆ. ಈ ವಿಭಾಗಗಳ ಹೆಡ್‌ ಕಾನ್ಸ್‌ಟೇಬಲ್‌ ಹಾಗೂ ಕಾನ್ಸ್‌ಟೇಬಲ್‌ ಹುದ್ದೆಗಳಿಗೆ ಎಸ್‌ಎಸ್‌ಎಲ್‌ಸಿ, ಡಿಪ್ಲೊಮ, ಪಿಯುಸಿ ಪಾಸಾದವರು ಅರ್ಜಿ ಸಲ್ಲಿಸಬಹುದಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿ ಸಲ್ಲಿಸಲಾಗಿದೆ.

ಐಟಿಬಿಪಿ ಹುದ್ದೆಗಳ ವಿವರ
ಹೆಡ್‌ ಕಾನ್ಸ್‌ಟೇಬಲ್‌ (ಡ್ರೆಸರ್ ವೆಟರಿನರಿ) (ಪುರುಷ)‌ – 8
ಹೆಡ್‌ ಕಾನ್ಸ್‌ಟೇಬಲ್‌ (ಡ್ರೆಸರ್ ವೆಟರಿನರಿ) (ಮಹಿಳಾ) – 1
ಕಾನ್ಸ್‌ಟೇಬಲ್ (ಅನಿಮಲ್ ಟ್ರಾನ್ಸ್‌ಪೋರ್ಟ್‌) (ಪುರುಷ) – 97
ಕಾನ್ಸ್‌ಟೇಬಲ್ (ಅನಿಮಲ್ ಟ್ರಾನ್ಸ್‌ಪೋರ್ಟ್‌) (ಮಹಿಳಾ) – 18
ಕಾನ್ಸ್‌ಟೇಬಲ್ (Kennelman) (ಪುರುಷರಿಗೆ ಮಾತ್ರ) – 4
ಒಟ್ಟು ಹುದ್ದೆಗಳು – 128

ಐಟಿಬಿಪಿ ವೇತನ ಶ್ರೇಣಿ ವಿವರ (7ನೇ ವೇತನ ಆಯೋಗದ ಪ್ರಕಾರ)
ಹೆಡ್‌ ಕಾನ್ಸ್‌ಟೇಬಲ್‌ (ಡ್ರೆಸರ್ ವೆಟರಿನರಿ) : ಲೆವೆಲ್ 4, ರೂ.25,500 – 81,100
ಕಾನ್ಸ್‌ಟೇಬಲ್ (ಅನಿಮಲ್ ಟ್ರಾನ್ಸ್‌ಪೋರ್ಟ್‌): ಲೆವೆಲ್ 3, ರೂ.21700 – 69100.

ಐಟಿಬಿಪಿ ವಿದ್ಯಾರ್ಹತೆ ವಿವರ
ಹೆಡ್‌ ಕಾನ್ಸ್‌ಟೇಬಲ್‌ (ಡ್ರೆಸರ್ ವೆಟರಿನರಿ) : ದ್ವಿತೀಯ ಪಿಯುಸಿ ಪಾಸ್‌. ರೆಗ್ಯುಲರ್ ಪ್ಯಾರಾ ವೆಟರಿನರಿ ಕೋರ್ಸ್‌, ಡಿಪ್ಲೊಮ ಅಥವಾ ಒಂದು ವರ್ಷದ ವೆಟರಿನರಿ, ಥೆರಪಿಸ್ಟ್‌ ಕೋರ್ಸ್‌ ಉತ್ತೀರ್ಣರಾಗಿರಬೇಕು.
ಕಾನ್ಸ್‌ಟೇಬಲ್ (ಅನಿಮಲ್ ಟ್ರಾನ್ಸ್‌ಪೋರ್ಟ್‌): ಎಸ್‌ಎಸ್‌ಎಲ್‌ಸಿ ಉತ್ತೀರ್ಣರಾಗಿರಬೇಕು

ಐಟಿಬಿಪಿ ಹುದ್ದೆಗಳಿಗೆ ಅರ್ಜಿ ಪ್ರಕ್ರಿಯೆಯ ದಿನಾಂಕಗಳು
ಆನ್‌ಲೈನ್‌ ಅಪ್ಲಿಕೇಶನ್ ಸ್ವೀಕಾರ ಆರಂಭಿಕ ದಿನಾಂಕ: 12-08-2024
ಆನ್‌ಲೈನ್‌ ಅಪ್ಲಿಕೇಶನ್ ಸಲ್ಲಿಸಲು ಕೊನೆ ದಿನಾಂಕ: 10-09-2024 ರ ರಾತ್ರಿ 11-59 ಗಂಟೆವರೆಗೆ.

ಐಟಿಬಿಪಿ ಹುದ್ದೆಗಳಿಗೆ ಅಪ್ಲಿಕೇಶನ್‌ ಶುಲ್ಕ ವಿವರ
ಸಾಮಾನ್ಯ ಅರ್ಹತೆಯವರಿಗೆ ರೂ.100.
ಇತರೆ ಹಿಂದುಳಿದ ವರ್ಗದವರಿಗೆ ರೂ.100.
ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ ರೂ.100.
ಎಸ್‌ಸಿ / ಎಸ್‌ಟಿ / ಮಹಿಳಾ, ಮಾಜಿ ಸೈನಿಕರಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.
ಅರ್ಜಿ ಶುಲ್ಕವನ್ನು ಆನ್‌ಲೈನ್‌ ಮೂಲಕ ಪಾವತಿ ಮಾಡಬಹುದು.

ಆಯ್ಕೆ ವಿಧಾನ : ಲಿಖಿತ ಪರೀಕ್ಷೆ, ಪಿಇಟಿ, ಪಿಎಸ್‌ಟಿ, ಮೂಲ ದಾಖಲೆಗಳ ಪರಿಶೀಲನೆ ನಡೆಸಿ ನೇಮಕಾತಿ ಮಾಡಲಾಗುತ್ತದೆ.

ಅರ್ಜಿ ಸಲ್ಲಿಸುವುದು ಹೇಗೆ? :  ಈ ಹುದ್ದೆಗಳಲ್ಲಿ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ವೆಬ್‌ಸೈಟ್‌ ವಿಳಾಸ https://recruitment.itbpolice.nic.in/rect/index.php ಕ್ಕೆ ಭೇಟಿ ನೀಡುವ ಮೂಲಕ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!