Monday, September 9, 2024

ಜಿಲ್ಲಾಧಿಕಾರಿ ಭೇಟಿ ಬಳಿಕ ಅಹೋರಾತ್ರಿ ಧರಣಿ ಹಿಂಪಡೆದ ಶಾಸಕ ಗಂಟಿಹೊಳೆ | ಹಿಂಬಾಗಿಲಿನ ಅಧಿಕಾರ ಶೋಭೆಯಲ್ಲ : ಗೋಪಾಲ್‌ ಪೂಜಾರಿ ವಿರುದ್ಧ ಗಂಟಿಹೊಳೆ ಗಂಭೀರ ಆರೋಪ

ಜನಪ್ರತಿನಿಧಿ (ಬೈಂದೂರು) : ಶಾಸಕರ ಸಾಂವಿಧಾನಿಕ ಹಕ್ಕುಗಳನ್ನು ಜಿಲ್ಲಾಡಳಿತ ಹತ್ತಿಕ್ಕುತ್ತಿದೆ. ಅಧಿಕಾರಿಗಳಳು ಕಾಂಗ್ರೆಸ್ ಪಕ್ಷದ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿ ಬೈಂದೂರು ತಾಲೂಕು ಆಡಳಿತ ಸೌಧದ ಎದುರು ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಗುರುರಾಜ್‌ ಶೆಟ್ಟಿ ಗಂಟಿಹೊಳೆ ನಡೆಸುತ್ತಿದ್ದ ಧರಣಿ ಇಂದು(ಮಂಗಳವಾರ) ಬೆಳಿಗ್ಗೆ ಅಂತ್ಯ ಚುಕ್ಕಿ ಇಟ್ಟಿದ್ದಾರೆ.

ನಿನ್ನೆ(ಸೋಮವಾರ) ಸಂಜೆಯಿಂದ ಕಾರ್ಯಕರ್ತರೊಡಗೂಡಿ ಧರಣಿ ಆರಂಭಿಸಿದ ನಂತರ ತಹಶೀಲ್ದಾರರು, ಸಹಾಯಕ ಕಮಿಷನರ್‌ ಶಾಸಕರ ಮನ ಒಲಿಸುವ ಪ್ರಯತ್ನ ಮಾಡಿದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ. ಗಂಟಿಹೊಳೆ ಅವರ ಧರಣಿಗೆ ಜಿಲ್ಲಾ ಬಿಜೆಪಿ ಮುಖಂಡರು ಕಾಪು, ಉಡುಪಿ, ಕುಂದಾಪುರ ಶಾಸಕರು ಕೂಡ ಆಗಮಿಸಿ ಬೆಂಬಲ ನೀಡಿದ್ದರು.

ಇಂದು(ಮಂಗಳವಾರ) ಬೆಳಿಗ್ಗೆ ಧರಣಿ ನಡೆಸುತ್ತಿರುವಲ್ಲಿಗೆ ಆಗಮಿಸಿದ ಜಿಲ್ಲಾಧಿಕಾರಿಗಳು ಹಾಗೂ ಉಡುಪಿ -ಚಿಕ್ಕಮಗಳೂರು ಲೋಕಸಭಾ ಸಂಸದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಇತರ ಮುಖಂಡರು ಈ ಸಂಬಂಧಿಸಿದಂತೆ ಚರ್ಚಸಿದರು.

ಈ ನಂತರ ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ಪ್ರತಿಕ್ರಿಯಿಸಿ, ಜಿಲ್ಲಾಡಳಿತದಿಂದ ಶಾಸಕರ ಹಕ್ಕುಚ್ಯುತಿ ಆಗಿಲ್ಲ. ಸಾಂವಿಧಾನಿಕ ನಿಯಮಗಳನ್ನು ಬಿಟ್ಟು ನಾವು ಕೆಲಸ ಮಾಡಲು ಸಾಧ್ಯವಿಲ್ಲ. ಶಾಸಕರ ಖಾಸಗಿ ಕಛೇರಿಯಲ್ಲಿ ಅಧಿಕೃತ ಸಭೆಗೆ ಸರಕಾರದ ನಿಯಮದಲ್ಲಿ ಅವಕಾಶವಿಲ್ಲ. ಶಾಸಕರು ಅಧಿಕಾರಿಗಳ ಸಭೆ ಮಾಡಬಾರದೆಂದು ನಾವು ಎಲ್ಲಿಯೂ ಹೇಳಿಲ್ಲ. ಬದಲಾಗಿ ಸರಕಾರಿ ಕಛೇರಿ, ಶಾಸಕರ ಭವನದಲ್ಲಿ ನಡೆಯುವ ಅಧಿಕೃತ ಸಭೆಯಲ್ಲಿ ಮಾತ್ರ ಭಾಗವಹಿಸಲು ತಿಳಿಸಿದ್ದೇವೆ ಎಂದು ಅವರು ಹೇಳಿದರು.

ಮಾತ್ರವಲ್ಲದೆ, ಬೈಂದೂರು ಶಾಸಕರ ಮನವಿಯನ್ನು ಸರ್ಕಾರದ ಗಮನಕ್ಕೆ ತರುವುದಾಗಿ ತಿಳಿಸಿದರು. ಸರ್ಕಾರದ ಸ್ಪಷ್ಟನೆ ಬಂದ ಬಳಿಕ ಮಾಹಿತಿ ನೀಡುವುದಾಗಿ ತಿಳಿಸಿದರು. ಈ ಬೆನ್ನಲ್ಲೇ ಶಾಸಕರು ಅಹೋರಾತ್ರಿ ಧರಣಿಯನ್ನು ಹಿಂಪಡೆದರು.

ಮಾಜಿ ಶಾಸಕ ಗೋಪಾಲ ಪೂಜಾರಿ ಮೇಲೆ ಗಂಟಿಹೊಳೆ ಆರೋಪ : ಹಿಂಬಾಗಿಲಿನಲ್ಲಿ ರಾಜಕಾರಣ ಮಾಡುವುದು, ಅಧಿಕಾರ ಮಾಡುವುದು ಶೋಭೆಯಲ್ಲ. ಪಶು ವೈದ್ಯರು ಸೇರಿ ಉತ್ತಮ ಅಧಿಕಾರಿಗಳ ವರ್ಗಾವಣೆ ಮಾಡುವ ಮೂಲಕ ಮಾಜಿ ಶಾಸಕರ ನೇತ್ರತ್ವದಲ್ಲಿ ಕಾಂಗ್ರೆಸ್ ತಂಡ ವರ್ಗಾವಣೆ ದಂಧೆಯಲ್ಲಿ ಹಣ ಮಾಡುತ್ತಿದ್ದಾರೆ. ಬೈಂದೂರಿನ ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಅವರು ಬೈಂದೂರಿನ ಜನರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಗಂಟಿಹೊಳೆ ಗಂಭೀರ ಆರೋಪ ಮಾಡಿದ್ದಾರೆ.

ನಾನು ಜನರು ಆರಿಸಿ ಕಳುಹಿಸಿದ ಶಾಸಕ. ಇಂತಹ ಯಾವುದೇ ದಬ್ಟಾಳಿಕೆಗೆ ಬಗ್ಗುವುದಿಲ್ಲ ಮತ್ತು ಶಾಸಕರ ಅಧಿಕಾರ ನನಗೆ ತಿಳಿಸುವ ಅಗತ್ಯವಿಲ್ಲ ಎಂದು ಅವರು ಹೇಳಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!