Wednesday, September 11, 2024

ಪರಂಪರೆಯ ಕೊಂಡಿ ಕಳಚಿಕೊಂಡ ಸಾಹಿತ್ಯ ಶ್ರೇಷ್ಠವಾಗುವುದಕ್ಕೆ ಸಾಧ್ಯವಿಲ್ಲ : ರಾಜ್‌ ಆಚಾರ್ಯ

ಜನಪ್ರತಿನಿಧಿ (ಮಂಗಳೂರು/ಬೆಂಗಳೂರು) : ಸಾಹಿತ್ಯ ಎಂದಿಗೂ ಗುಪ್ತಗಾಮಿನಿ, ಸಾಹಿತ್ಯ ಹಾಳಾದರೇ ದೇಶವೇ ಹಾಳಾದ ಹಾಗೆ. ಸಾಹಿತ್ಯ ವಿವಿಧ ಮಜಲುಗಳನ್ನು ಕಂಡುಕೊಂಡು ಬಂದಿದೆ. ಪ್ರಕಾರಗಳು ನಮ್ಮ ಅನುಕೂಲಕ್ಕಷ್ಟೇ ಬದಲಾಗಿವೆ ಎಂದು ಸಾಹಿತಿ ರಾಜ್‌ ಆಚಾರ್ಯ ಹೇಳಿದರು.

ಅವರು ʼಅಭಿವ್ಯಕ್ತʼ ಸಾಹಿತ್ಯ ಬಳಗ ಆಯೋಜಿಸಿದ ಆನ್‌ಲೈನ್‌ ನಲ್ಲಿ ಆಯೋಜಿಸಿದ ಸದಸ್ಯರ ತಿಂಗಳ ಸಭೆಯಲ್ಲಿ ʼಸಮಕಾಲೀನ ಸಾಹಿತ್ಯದ ತಲ್ಲಣಗಳುʼ ವಿಷಯದ ಮೇಲೆ ವಿಶೇಷ ಉಪನ್ಯಾಸ ನೀಡಿದರು.

ಪರಂಪರೆಯ ಕೊಂಡಿಯನ್ನು ಕಳೆದುಕೊಂಡ ಎಲ್ಲಾ ಸಾಹಿತ್ಯವೂ ಪೇಲವವೇ ಆಗಿವೆ. ಪಂಪನೇ ಕಾವ್ಯಕ್ಕೆ ಮೂಲ. ಪಂಪನ ಅರಿವು ಇಲ್ಲದಿದ್ದರೇ, ನಮ್ಮ ಸಾಹಿತ್ಯದ ಪರಂಪರೆಯ ವೈವಿದ್ಯತೆಯನ್ನು ಅರಿತುಕೊಳ್ಳದಿದ್ದರೆ ಅಥವಾ ನಮ್ಮ ಸಾಹಿತ್ಯದ ಪರಂಪರೆಯನ್ನು ಕಳಚಿಕೊಂಡರೇ ಸಾಹಿತ್ಯ ಕ್ಷೇತ್ರದಲ್ಲಿ ಸಾರ್ವಕಾಲಿಕ ಮೆಚ್ಚುಗೆ ಪಡೆಯುವುದಕ್ಕೆ ಸಾಧ್ಯವಿಲ್ಲ. ಅದು ಶ್ರೇಷ್ಠವಾಗುವುದಕ್ಕೂ ಸಾಧ್ಯವಿಲ್ಲ. ಕಾಲಕಾಲಕ್ಕೂ ಸಲ್ಲುವ ಕಾವ್ಯವೇ ಸಾಹಿತ್ಯವಾಗುವುದಕ್ಕೆ ಸಾಧ್ಯ. ಭೂತವನ್ನು ನೋಡಿ, ವರ್ತಮಾನವನ್ನು ಅರಿತು, ಭವಿಷ್ಯದ ದೃಷ್ಟಿ ಇರುವವನಷ್ಟೆ ಕವಿಯಾಗುವುದಕ್ಕೆ, ಸಾಹಿತಿಯಾಗುವುದಕ್ಕೆ ಸಾಧ್ಯ ಎಂದು ಅವರು ಅಭಿಪ್ರಾಯ ಪಟ್ಟರು.

ವಿಮರ್ಶೆಯನ್ನು ಒಪ್ಪುವ ಮನಸ್ಥಿತಿ ಯಾರಿಗೂ ಇಲ್ಲ. ಒಬ್ಬ ಒಳ್ಳೆಯ ಬರಹಗಾರ ವಿಮರ್ಶೆಯನ್ನು ಸ್ವೀಕರಿಸುವ ಮನಸ್ಥಿತಿಯನ್ನು ಹೊಂದಿರಬೇಕು. ಅನುಭವನಿಷ್ಠೆಯಿಂದ ಬರೆಯಬೇಕು. ಓದು ಮುಖ್ಯವಾಗಬೇಕೆ ಹೊರತು ಬರಹವಲ್ಲ ಎಂದು ಅವರು ಹೇಳಿದರು.

ಉಪನ್ಯಾಸದ ಬಳಿಕ ಸದಸ್ಯರೊಂದಿಗೆ ಸಂವಾದ ನಡೆಯಿತು. ಬಳಗದ ಭವಿಷ್ಯದ ಕಾರ್ಯಕ್ರಮಗಳ ಬಗ್ಗೆ ಯೋಜನೆಗಳ ಬಗ್ಗೆ ಚರ್ಚಿಸಲಾಯಿತು.

ʼಅಭಿವ್ಯಕ್ತʼ ಸಂಚಾಲಕ, ಕವಿ ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಪ್ರಸ್ತಾವಿಸಿ, ಕಾರ್ಯಕ್ರಮ ನಿರ್ವಹಿಸಿದರು. ಸದಸ್ಯರು ಪಾಲ್ಗೊಂಡಿದ್ದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!