spot_img
Saturday, December 7, 2024
spot_img

ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ಹಿಂಸೆ : ಉಡುಪಿ ಬಿಜೆಪಿಗರ ಧರಣಿ ಓಟ್‌ ಬ್ಯಾಂಕ್‌ ರಾಜಕಾರಣ : ವಿಕಾಸ್‌ ಹೆಗ್ಡೆ ಆಕ್ರೋಶ

ಜನಪ್ರತಿನಿಧಿ (ಉಡುಪಿ) : ಉಡುಪಿಯ ಬಿಜೆಪಿಗರು ಬಾಂಗ್ಲಾ ದೇಶದಲ್ಲಿ ಹಿಂದೂಗಳ ಮೇಲೆ ಆಗುತ್ತಿರುವ ದೌರ್ಜನ್ಯದ ವಿರುದ್ಧ ಮಾಡುತ್ತಿರುವ ಧರಣಿ ಕೇವಲ ಓಟ್ ಬ್ಯಾಂಕ್ ರಾಜಕಾರಣದ ಒಂದು ಭಾಗವಷ್ಟೇ ಎಂದು ಜಿಲ್ಲಾ ಕಾಂಗ್ರೆಸ್‌ ವಕ್ತಾರ ವಿಕಾಸ್‌ ಹೆಗ್ಡೆ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಮಣಿಪುರದಲ್ಲಿ ಆಗುತ್ತಿರುವ ನರಮೇಧದ ಬಗ್ಗೆ ಒಂದೇ ಒಂದು ಸೊಲ್ಲೆತ್ತದ ಇವರು(ಬಿಜೆಪಿ) ಬಾಂಗ್ಲಾದೇಶದ ವಿಚಾರದ ಬಗ್ಗೆ ಧ್ವನಿಯೆತ್ತಿರುವುದು ಹಾಸ್ಯಾಸ್ಪದವೇ ಸರಿ. ಕಾರ್ಕಳ ಥೀಂ ಪಾರ್ಕ್‌ ನಲ್ಲೇ ಹಿಂದೂ ಧಾರ್ಮಿಕ ವಿಚಾರಗಳಿಗೆ ಇವರದ್ದೇ ಪಕ್ಷದ ಶಾಸಕರಿಂದ ಧಕ್ಕೆಯಾಗಿದೆ ಎನ್ನುವುದು ಹೋರಾಟಗಾರರು ಮಾಹಿತಿ ಹಕ್ಕಿನಿಂದ ಪಡೆದ ದಾಖಲೆಗಳ ಮೂಲಕ ಬಯಲಾಗಿದೆ. ಭಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ಆಗುತ್ತಿರುವ ಹಿಂಸೆಯ ಬಗ್ಗೆ ಧ್ವನಿ ಎತ್ತುವ ಇವರು ಇಲ್ಲೇ ಕಾರ್ಕಳದಲ್ಲಿ ಪರಶುರಾಮ ಥೀಂ ಪಾರ್ಕ್‌ ನಲ್ಲಿ ನಕಲಿ ಮೂರ್ತಿಯನ್ನು ಸ್ಥಾಪಿಸಿ ಸಹಸ್ರ ಸಹಸ್ರ ಹಿಂದೂ ಧರ್ಮದ ಜನರ ನಂಬಿಕೆಗೆ ಧಕ್ಕೆ ಮಾಡಿದ ಶಾಸಕ ಸುನೀಲ್‌ ಕುಮಾರ್‌ ವಿರುದ್ಧ ಧ್ವನಿ ಎತ್ತಲಿ, ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರದ ಬಗ್ಗೆ ಧ್ವನಿ ಎತ್ತಲಿ. ಬಿಜೆಪಿಗರ ಕಣ್ಣಿಗೆ ಇವೆಲ್ಲಾ ಕಾಣಿಸಿಲ್ಲವೇ, ಹಿಂದೂ ಧರ್ಮವನ್ನು ಬಿಜೆಪಿ ಕೇವಲ ತನ್ನ ರಾಜಕಾರಣಕ್ಕಾಗಿ ಬಳಸಿಕೊಳ್ಳುತ್ತಿದೆ ಎನ್ನುವುದು ಇದರಲ್ಲೇ  ತಿಳಿಯುತ್ತದೆ ಎಂದು ಅವರು ಹೇಳಿದ್ದಾರೆ.

ಬಾಂಗ್ಲಾದೇಶದಲ್ಲಿ ಹಿಂದೂಗಳು ಮೇಲಿನ ಹಿಂಸೆ ನಿಲ್ಲಲಿ. ಆಂತರಿಕ ಸಮಸ್ಯೆಯಿಂದ ನಲುಗಿ ಹೋಗಿರುವ ಬಾಂಗ್ಲಾದೇಶದಲ್ಲಿ ಹಿಂದೂಗಳನ್ನು ಗುರಿಯಾಗಿಸಿ ಮಾಡುತ್ತಿರುವ ಹಿಂಸೆ, ಅತ್ಯಾಚಾರ, ಆಸ್ತಿಪಾಸ್ತಿ ಹಾನಿ ಇವೆಲ್ಲವೂ ಅತ್ಯಂತ ಹೇಯ ಕೃತ್ಯ. ಬಾಂಗ್ಲಾದೇಶದ ಆಂತರಿಕ ಗಲಭೆಗೆ ಈಗಾಗಲೇ ಪ್ರಧಾನಿ ಶೇಖ್ ಹಸೀನಾ ರಾಜೀನಾಮೆ ನೀಡಿ ಬಾಂಗ್ಲಾದೇಶ ತೊರೆದು ಕೂಡ ಆಯಿತು, ಆದರೂ ಇನ್ನೂ ಕೂಡ ಹೋರಾಟದ ಹೆಸರಿನಲ್ಲಿ ಹಿಂದೂಗಳನ್ನು ಗುರಿಯಾಗಿಸಿ ಅವರ ಮೇಲೆ ದಾಳಿ ಮಾಡುತ್ತಿರುವುದು ಯಾರೂ ಒಪ್ಪುವಂತಹ ಕೃತ್ಯವಲ್ಲ ಎಂದು ಅವರು ಹೇಳಿದ್ದಾರೆ.,

ಇನ್ನು, ಹಿಂದೆ ಪಾಕಿಸ್ತಾನದ ಕಪಿಮುಷ್ಟಿಗೆ ಸಿಲುಕಿ ನಲುಗಿ ಹೋಗಿದ್ದ ಜನತೆಗೆ ಬಾಂಗ್ಲಾ ವಿಮೋಚನೆ ಮಾಡಿ ಪುನರ್ಜನ್ಮ ನೀಡಿದ್ದು ಶ್ರೀಮತಿ ಇಂದಿರಾ ಗಾಂಧಿ. ಆದರೆ ಇಂದಿನ ಬಾಂಗ್ಲಾದೇಶದ ಪರಿಸ್ಥಿತಿ ಅತ್ಯಂತ ಶೋಚನೀಯ, ಬಾಂಗ್ಲಾದೇಶದ ಬಹುಸಂಖ್ಯಾತರು ಅಲ್ಲಿನ ಅಲ್ಪಸಂಖ್ಯಾತ ಸಮುದಾಯದವರಿಗೆ ರಕ್ಷಣೆ ನೀಡಬೇಕು ಈ ಬಗ್ಗೆ ಭಾರತ ಸರ್ಕಾರ ಕೂಡ ಕ್ರಮವಹಿಸಬೇಕು ಎಂದು ವಿಕಾಸ್ ಒತ್ತಾಯಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!