Monday, September 9, 2024

ಸಿದ್ದರಾಮಯ್ಯ ಮನೆಗೆ ತೆರಳುವ ಕಾಲ ಸನ್ನಿಹಿತವಾಗಿದೆ : ಬಿಎಸ್‌ವೈ

ಜನಪ್ರತಿನಿಧಿ (ಬೆಂಗಳೂರು) : ಸಿದ್ದರಾಮಯ್ಯ ಮನೆಗೆ ತೆರಳುವ ಕಾಲ ಸನ್ನಿಹಿತವಾಗಲಿದೆ. ರಾಜಕೀಯದಿಂದ ಯಾರು ನಿವೃತ್ತಿ ಹೊಂದುತ್ತಾರೆ ಎನ್ನುವುದು ಇನ್ನು ಕೆಲವೇ ತಿಂಗಳಲ್ಲಿ ತಿಳಿಯುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಸಂಸದೀಯ ಮಂಡಳಿಯ ಸದಸ್ಯ ಬಿ.ಎಸ್‌ ಯಡಿಯೂರಪ್ಪ ಹೇಳಿದ್ದಾರೆ.

ಚಾಮುಂಡಿ ಬೆಟ್ಟದಲ್ಲಿ ದೇವರ ದರ್ಶನ ಮಾಡಿ ಪತ್ರಕರ್ತರಿಗೆ ಸ್ಪಂದಿಸಿ ಮಾತನಾಡಿದ ಅವರು, ಸಿದ್ದರಾಮಯ್ಯ ಯಡಿಯೂರಪ್ಪ ರಾಜಕೀಯ ನಿವೃತ್ತಿ ಘೋಷಸಬೇಕು ಎಂದು ಹೇಳಿರುವುದಕ್ಕೆ ಪ್ರತಿಕ್ರಿಯಿಸಿ, ಮನೆಗೆ ಹೋಗುವ ಕಾಲ ಬಂದಾಗ ಹೀಗೆ ಹೇಳುವುದು ಸ್ವಾಭಾವಿಕ. ನ್ಯಾಯಾಲಯದಲ್ಲಿ ಏನಾಗುತ್ತದೆ. ಯಾರು ನಿವೃತ್ತಿ ಹೊಂದುತ್ತಾರೆ ಎನ್ನುವುದು ಎಲ್ಲವೂ ತಿಳಿಯುತ್ತದೆ. ಆಗ ಯಾರು ನಿವೃತ್ತಿ ಆಗಬೇಕು ಎಂಬುವುದನ್ನು ತೀರ್ಮಾನ ಮಾಡೋಣ ಎಂದು ಹೇಳಿದರು.

ಈ ದೇಶದ ಇತಿಹಾಸದಲ್ಲಿ ಒಬ್ಬ ಮುಖ್ಯಮಂತ್ರಿ ತಮ್ಮ ಮನೆಯವರಿಗೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಬೆಲೆ ಬಾಳುವ ನಿವೇಶನ ಕೊಟ್ಟ ಉದಾಹರಣೆ ಇದೆಯೇ ? ಸ್ವಂತ ಹೆಂಡತಿಗೆ ಸೈಟು ಕೊಟ್ಟಿರುವುದು ಅಕ್ಷಮ್ಯ ಅಪರಾಧ ಎಂದು ಹೇಳಿದರು.

ನನ್ನ ವಿರುದ್ಧದ ಪೋಕ್ಸೋ ಕಾಯ್ದೆ ಪ್ರಕರಣದ ನ್ಯಾಯಾಲಯದಲ್ಲಿ ತೀರ್ಮಾಣ ಆದ ಬಳಿಕ ಸತ್ಯ ಸಂಗತಿ ಬಹಿರಂಗ ಆಗುತ್ತದೆ. ಅಲ್ಲಿಯವರೆಗೂ ನಾನು ಏನನ್ನೂ ಮಾತನಾಡುವುದಿಲ್ಲ. ಅಲ್ಲಿಯೇ ಸಿದ್ದರಾಮಯ್ಯ ಅವರಿಗೆ ತಕ್ಕ ಉತ್ತರ ಸಿಗಲಿದೆ ಎಂದು ತಿರುಗೇಟು ನೀಡಿದರು.

ಬಿಜೆಪಿ -ಜೆಡಿಎಸ್‌ ಹಮ್ಮಿಕೊಂಡಿರುವ ಜನಾಕ್ರೋಶ ಯಾತ್ರೆಯು ಇತಿಹಾಸಲ್ಲಿ ಐತಿಹಾಸಿಕ ಪಾದಯಾತ್ರೆ. ಭ್ರಷ್ಟ ಸರ್ಕಾರ ಕಿತ್ತೊಗೆಯಲಿ ವಿಜಯೇಂದ್ರ ನೇತೃತ್ವದಲ್ಲಿ ಈ ಪಾದಯಾತ್ರೆ ನಡೆದಿದೆ. ಜನರಿಂದ  ನಿರೀಕ್ಷೆಗೂ ಮೀರಿ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಹೇಳಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!