spot_img
Wednesday, April 1, 2026
spot_img

ವಯನಾಡು ಗುಡ್ಡ ಕುಸಿತ : ವಿಪತ್ತು ಕಾರ್ಯಾಚರಣೆ ಮುಗಿಸಿ ಭಾಗಶಃ ವಾಪಾಸ್‌ ತೆರಳಿದ ಸೇನೆ

ಜನಪ್ರತಿನಿಧಿ (ವಯನಾಡು) : ಕೇರಳದ ವಯನಾಡು ಜಿಲ್ಲೆಯ ಚೂರಲ್‌ ಮಲ, ಮುಂಡಕ್ಕೈ ವಿಪತ್ತು ಪೀಡಿತ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದ ಭಾರತೀಯ ಸೇನೆ ಭಾಗಶಃ ಮರಳಿವೆ ಎಂಬ ಮಾಹಿತಿ ಲಭ್ಯವಾಗಿದೆ.

ಕಳೆದ ಒಂಬತ್ತು ಹತ್ತು ದಿನಗಳಿಂದ ವಿಪತ್ತು ನಿರ್ವಹಣೆ ಮುಗಿಸಿ ಸೇನೆಯು ಮರಳಿ ತೆರಳುವ ನಿರ್ಧಾರವನ್ನು ಕೇರಳ ಲೋಕೋಪಯೋಗಿ ಸಚಿವ ಪಿ.ಎ ಮೊಹಮ್ಮದ್‌ ರಿಯಾಸ್‌ ತಿಳಿಸಿರುವುದಾಗಿ ವರದಿಯಾಗಿದೆ.

ಸುಮಾರು 190 ಅಡಿ ಉದ್ದದ ತಾತ್ಕಾಲಿಕ ಸೇತುವೆಯನ್ನು ಕೆಲವೇ ಗಂಟೆಗಳಲ್ಲಿ ನಿರ್ಮಿಸಿ ದಾಖಲೆ ಬರೆದಿದೆ. ಚೂರಲ್‌ ಮಲ ಹಾಗೂ ಮುಂಡಕ್ಕೈ ಪ್ರದೇಶಗಳಲ್ಲಿ ವಿಪತ್ತು ನಿರ್ವಹಣೆ ಕಾರ್ಯಾಚರಣೆಯಲ್ಲಿ ತೀವ್ರಗೊಳಿಸುವಲ್ಲಿ ಸೇನೆ ಪ್ರಮುಖ ಪಾತ್ರ ವಹಿಸಿದೆ. ಒಂದೇ ದೇಹ ಒಂದೇ ಯೋಚನೆಯಂತೆ ಕಾರ್ಯ ನಿರ್ವಹಿಸಿದ ಅವರು ಇಲ್ಲಿಂದ ತೆರಳುತ್ತಿರುವುದರಿಂದ ನೋವಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಸಂಕಷಟದ ಸಂದರ್ಭದಲ್ಲಿ ಸೇನೆ ಇಲ್ಲಿಗೆ ಬಂದು ವಿಪತ್ತು ನಿರ್ವಹಣೆ ಮಾಡಿ ವಿಪತ್ತು ಪೀಡಿತ ಪ್ರದೇಶದ ಜನರನ್ನು ಸಂತೈಸುವಲ್ಲಿ ಸಹಕರಿಸಿದೆ. ಅವರನ್ನು ಬೀಳ್ಕೊಡಲು ನಮಗೆ ಸಾಧ್ಯವಾಗುತ್ತಿಲ್ಲ. ಅವರ ನಿಸ್ವಾರ್ಥ ಸೇವೆಗೆ ಧನ್ಯವಾದ ಅರ್ಪಿಸುತ್ತೇವೆ ಎಂದು ಅವರು ಹೇಳಿದರು.

ಸೇನಾ ಸಿಬ್ಬಂಧಿಗಳಿಗೆ ಅವರು ನೆನಪಿನ ಕಾಣಿಕೆ ನೀಡಿ ಗೌರವಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!