Wednesday, September 11, 2024

ಮರವಂತೆ ಕರ್ಕಾಟಕ ಅಮಾವಾಸ್ಯೆ ಜಾತ್ರೆ

 

 

ಮರವಂತೆ: ಮಹಾರಾಜ ಸ್ವಾಮಿ ಶ್ರೀ ವರಾಹ ದೇವಸ್ಥಾನದಲ್ಲಿ ಕರ್ಕಾಟಕ ಅಮಾವಾಸ್ಯೆ ಜಾತ್ರೆ ಆ.4ರಂದು ವಿಜೃಂಭಣೆಯಿಂದ ನೆರವೇರಿತು. ಮಳೆಗಾಲದಲ್ಲಿ ನಡೆಯುವ ಈ ಜಾತ್ರೆಗೆ ನಾಡಿನ ವಿವಿಧೆಡೆಯಿಂದ ಜನಸಾಗರವೇ ಹರಿದು ಬಂತು.

ನಸುಕಿನಿಂದಲೇ ಭಕ್ತಾದಿಗಳು ಶ್ರೀ ಕ್ಷೇತ್ರಕ್ಕೆ ಆಗಮಿಸಿದರು. ಸಾವಿರಾರು ಸಂಖ್ಯೆಯಲ್ಲಿ ಭಕ್ತರ ಸಮೂಹವೇ ಮರವಂತೆ ಆಗಮಿಸಿತು. ರಾಷ್ಟ್ರೀಯ ಹೆದ್ದಾರಿಯಲ್ಲಿ ೬೦೦ ಮೀಟರ್ ಗೂ ಉದ್ದದ ಸರದಿ ಸಾಲು ಏರ್ಪಟ್ಟಿದ್ದು ಸೌಪರ್ಣಿಕ ನದಿಯ ಸೇತುವೆ ಕೊನೆಯ ತನಕ ದೇವರ ದರ್ಶನಕ್ಕಾಗಿ ಭಕ್ತರ ಸರದಿ ಸಾಲು ಇತ್ತು. ದೇವರ ದರ್ಶನ, ಪೂಜೆ ಇತ್ಯಾದಿಗಳನ್ನು ಸಲ್ಲಿಸಿದ ಭಕ್ತರಿಗೆ ಪಾಯಸದ ವ್ಯವಸ್ಥೆ ಮಾಡಲಾಗಿತ್ತು.

ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಸತೀಶ್ ಎಂ ನಾಯಕ್, ಸರ್ವ ಸದಸ್ಯರು, ದೇವಸ್ಥಾನದ ಅರ್ಚಕರು, ಉಪಾದಿವಂತರು, ನೌಕರರು, ಸ್ವಯಂಸೇವಕರು ಜಾತ್ರೆಯ ಯಶಸ್ಸಿನಲ್ಲಿ ಶ್ರಮಿಸಿದರು.

ಸಮುದ್ರದ ಅಬ್ಬರ ಹೆಚ್ಚಿದ್ದರಿಂದ ಬಿಗಿ ಬಂದೋಬಸ್ತ್ ಮಾಡಲಾಗಿತ್ತು. ಸಾಕಷ್ಟು ಸಂಖ್ಯೆಯಲ್ಲಿ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿತ್ತು. ಸಮುದ್ರ ತೆರೆಗಳ ನೀರನ್ನಷ್ಟೇ ಸಿಂಪರಣೆ ಮಾಡಿಕೊಂಡು ಪುನೀತತೆ ಅನುಭವಿಸುತ್ತಿರುವುದು ಕಂಡು ಬಂತು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!