Wednesday, September 11, 2024

ಭ್ರಷ್ಟ ವಿಜಯೇಂದ್ರನನ್ನು ನಾವು ಬಿಜೆಪಿಯ ರಾಜ್ಯಾಧ್ಯಕ್ಷನೆಂದು ಒಪ್ಪಿಕೊಳ್ಳುವುದಕ್ಕೆ ತಯಾರಿಲ್ಲ : ಯತ್ನಾಳ್‌ ಆಕ್ರೋಶ

ಜನಪ್ರತಿನಿಧಿ (ವಿಜಯಪುರ) : ವಿಜಯೇಂದ್ರನ ವಿರುದ್ಧ ಅವನ ನಾಲ್ಕಾರು ಚೇಲಾ ಶಾಶಕರನ್ನು ಹೊರತಾಗಿ ಉಳಿದೆಲ್ಲಾ ಶಾಸಕರು ವಿರೋಧವಿದ್ದು, ಈ ಬಗ್ಗೆ ಹೈಕಮಾಂಡ್‌ ನಾಯಕರನ್ನು ನಾವು ಪ್ರಶ್ನಿಸುತ್ತೇವೆ. ಭ್ರಷ್ಟ ವಿಜಯೇಂದ್ರನ ವಿರುದ್ಧ ಹೈಕಮಾಂಡ್‌ ಕ್ರಮ ತೆಗೆದುಕೊಳ್ಳಲಿ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಹೇಳಿದ್ದಾರೆ.

ಇಂದು(ಶನಿವಾರ) ವರದಿಗಾರರಿಗೆ ಸ್ಪಂದಿಸಿ ಮಾತನಾಡಿದ ಅವರು, ಭ್ರಷ್ಟ ವಿಜಯೇಂದ್ರನನ್ನು ನಾವು ಬಿಜೆಪಿಯ ರಾಜ್ಯಾಧ್ಯಕ್ಷನೆಂದು ಒಪ್ಪಿಕೊಳ್ಳುವುದಕ್ಕೆ ತಯಾರಿಲ್ಲ. ಪಕ್ಷ ವಿರೋಧಿ ಚಟುವಟಿಕೆ ಮಾಡುತ್ತಿದ್ದಾರೆಂದು ಹೈಕಮಾಂಡ್‌ ನನ್ನನ್ನು ಹೊರಹಾಕಲಿ. ನಾನು ಭ್ರಷ್ಟಾಚಾರ ಮಾಡಿದ್ದು ಹೌದಾದಲ್ಲಿ ನನ್ನನ್ನು ಪಕ್ಷದಿಂದ ಹೊರಹಾಕಲಿ, ತನಿಖೆ ಮಾಡಿಸಲಿ ಎಂದು ಅವರು ಸವಾಲೆಸೆದಿದ್ದಾರೆ.

ವಿಜಯೇಂದ್ರ ಅಡ್ಜಸ್ಟಮೆಂಟ್‌ ರಾಜಕಾರಣಿ. ವಿಜಯೇಂದ್ರನ ಕೃಪೆಯಿಂದ ಉಮೇಶ ಕಾಂಟ್ರಾಕ್ಟರ್‌ ಮನೆಯಲ್ಲಿ ಸಿಕ್ಕ ಸಾವಿರ ಕೋಟಿ ರೂ. ಮೌಲ್ಯದ ದಾಖಲೆಗಳು, ಕೌಂಟಿಂಗ್‌ ಮಾಡುವ ನಾಲ್ಕು ಮಸೀನ್‌ ಸಿಕ್ಕಿದವುಗಳು ಎಲ್ಲಿ ಹೋದವು ಎಂದು ಪ್ರಶ್ನಿಸಿದ್ದಲ್ಲದೇ, ವಿಜಯೇಂದ್ರನ ವಿರುದ್ಧ ಪಕ್ಷದಲ್ಲಿ ಅಸಮಾಧಾನ ಹೆಚ್ಚಿದೆ ಎಂದು ಹೇಳಿದ್ದಾರೆ.

ಪೆನ್‌ಡ್ರೈವ್‌ ಹಂಚಿದ್ದೇ ವಿಜಯೇಂದ್ರ : ಯತ್ನಾಳ್‌ ಬಾಂಬ್‌   

ದೇವೇಗೌಡರ ಕುಟುಂಬದ ಮಾನ ಮೃಯಾದೆ ತೆಗೆದಿದ್ದೇ ವಿಜಯೇಂದ್ರ. ವಿಜಯೇಂದ್ರನ ನಿರ್ದೇಶನದಿಂದಲೇ ಪೆನ್‌ಡ್ರೈವ್‌ ಹಂಚಿಕೆಯಾಗಿದೆ. ತಾಕತ್ತಿದ್ದರೇ ನನ್ನನ್ನು ಕೇಳಲಿ. ಬಿಜೆಪಿಯ ಪಕ್ಷ ಎಷ್ಟು ಶಾಸಕರನ್ನು ಬ್ಲಾಕ್‌ಮೇಲ್‌ ಮಾಡುತ್ತೀರಿ ಎಂದು ಪಕ್ಷದ ವಿರುದ್ಧವೇ ಟೀಕಾ ಪ್ರಹಾರ ಮಾಡಿದರು.

ವಿಜಯೇಂದ್ರನಿಗೆ ಪಕ್ಷದ ಹಿರಿಯರ ಬಗ್ಗೆ ಗೌರವವಿಲ್ಲ. ಪಾದಯಾತ್ರೆ ಮಾಡುವ ಬಗ್ಗೆ ಪಕ್ಷದ ಹಿರಿಯ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸ ಮಾಡಿಲ್ಲ. ಬಾಡಿಗೆ ಜನರನ್ನು ತಂದು ಪಾದಯಾತ್ರೆ ಮಾಡು, ಹೀರೋ ಆಗಬಹುದು ಎಂದು ಅವರ ಅಪ್ಪ ಹೇಳಿದ. ಮಗ ಏಕಪಕ್ಷೀಯ ನಿರ್ಧಾರ ತೆಗೆದುಕೊಂಡ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಹೈಕಮಾಂಡ್‌ ಮುಂದೇ ನಾವು ಖಂಡಿತ ಪ್ರಶ್ನೆ ಮಾಡುತ್ತೇವೆ. ನಮ್ಮಂತಹ ಪ್ರಾಮಾಣಿಕರನ್ನು ಉಚ್ಚಾಟನೆ ಮಾಡುತ್ತೀರೋ ಅಥವಾ ಇಂತಹ ಭ್ರಷ್ಟ ಕುಟುಂಬವನ್ನು ಮುಂದುವಿರಸುವಿರೋ ಎಂದು ಪ್ರಶ್ನೆ ಮಾಡುತ್ತೇವೆ ಎಂದು ಹೇಳಿದ್ದಲ್ಲದೇ, ಬಿಜೆಪಿ ಸರ್ಕಾರದಲ್ಲಿ ಎರಡು ಪಟ್ಟು ಖರೀದಿ ಮಾಡುವಷ್ಟು ಸಾಮಗ್ರಿ ವೆಚ್ಚದಷ್ಟು ಬಾಡಿಗೆ ಹಣ ನೀಡಿ ವಿಜಯೇಂದ್ರ ಹಗರಣ ನಡೆಸಿದ. ಬೆಡ್, ಮಾಸ್ಕ್ ಖರೀದಿ ಸೇರಿದಂತೆ ಕೋವಿಡ್ ಖರೀದಿ ಹಗರಣದ ಕುರಿತು ವಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯ ಸದನದಲ್ಲಿ ಎರಡು ದಿನ ಮಾತನಾಡಿದ್ದರು. ಈಗ ತಾವೇ ಮುಖ್ಯಮಂತ್ರಿಯಾಗಿ 14 ತಿಂಗಳಾಯ್ತು, ಕತ್ತೆ ಕಾಯುತ್ತಿದ್ದಾರೆಯೇ? ಎಂದು ಗುಡುಗಿದ್ದಾರೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!