Monday, September 9, 2024

ಅಭಿಲಾಷ್ ಅವರಿಗೆ ಸಾಧನಶ್ರೀ ಪ್ರಶಸ್ತಿ ಪ್ರದಾನ

ಕುಂದಾಪುರ: ಜೆ.ಸಿ.ಐ ಭಾರತದ ವಲಯ ೧೫ರ ವ್ಯವಹಾರ ಸಮ್ಮೇಳನ-ವೈಭವ ಮಂಗಳೂರಿನಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಜೆಸಿ‌ಐ ಕುಂದಾಪುರ ಸಿಟಿಯ ಪೂರ್ವ ಅಧ್ಯಕ್ಷ, ವಲಯದ ಆಡಳಿತ ವಿಭಾಗದ ನಿರ್ದೇಶಕ ಹಾಗೂ ಕುಂದಾಪುರ ಮೆಸ್ಕಾಂನ ಉದ್ಯೋಗಿಯಾಗಿರುವ ಅಭಿಲಾಶ್ ಬಿ ಎ ಇವರಿಗೆ ಪ್ರತಿಷ್ಠಿತ ಸಾಧನಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಉದ್ಯೋಗ ಕ್ಷೇತ್ರದಲ್ಲಿ ಸತತ ೧೮ ವರ್ಷಗಳ ಕಾಲದ ಪ್ರಾಮಾಣಿಕ ಕರ್ತವ್ಯವನ್ನು ಗುರುತಿಸಿ ಹಾಗೂ ಜೆಸಿ‌ಐ ಸಂಸ್ಥೆಯಲ್ಲಿ ಕಳೆದ ಆರು ವರ್ಷಗಳಿಂದ ಸಂಸ್ಥೆಗೆ ನೀಡಿರುವ ಅನನ್ಯ ಕೊಡುಗೆಯನ್ನು ಶ್ಲಾಘಿಸುವ ನಿಟ್ಟಿನಲ್ಲಿ ಈ ಪ್ರಶಸ್ತಿಯನ್ನು ನೀಡಲಾಯಿತು.

ಈ ಸಂದರ್ಭದಲ್ಲಿ ವಲಯ ಅಧ್ಯಕ್ಷರಾದ ಗಿರೀಶ್ ಎಸ್ ಪಿ, ರಾಷ್ಟ್ರೀಯ ಉಪಾಧ್ಯಕ್ಷರಾದ ಕಾರ್ತಿಕೇಯ ಮಧ್ಯಸ್ಥ, ವ್ಯವಹಾರ ವಿಭಾಗದ ನಿರ್ದೇಶಕ ಸುನಿಲ್, ಪೂರ್ವ ರಾಷ್ಟ್ರೀಯ ಉಪಾಧ್ಯಕ್ಷ ಪುರಂದರ ರೈ, ಮುರುಳಿ ಶಾಮ್, ಅನಿಲ್, ಪೂರ್ವ ವಲಯ ಅಧ್ಯಕ್ಷ ಅಲನ್ ರೋಹನ್ ವಾಝ್, ಕುಂದಾಪುರ ಸಿಟಿ ಘಟಕದ ಅಧ್ಯಕ್ಷರಾದ ರಾಘವೇಂದ್ರ ಕುಲಾಲ್, ಸ್ಥಾಪಕ ಅಧ್ಯಕ್ಷ ಹುಸೇನ್ ಹೈಕಾಡಿ, ಪೂರ್ವಾಧ್ಯಕ್ಷರಾದ ರಾಘವೇಂದ್ರ ನಾವಡ ನಾಗೇಶ್ ನಾವಡ ಮತ್ತಿತರರು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!