Wednesday, September 11, 2024

ಮಡಾಮಕ್ಕಿ ಹಂಜ ರಸ್ತೆ ತುರ್ತು ದುರಸ್ತಿ ಕಾಮಗಾರಿ ಆರಂಭ ! ನಿರಾಳರಾದ ಗ್ರಾಮಸ್ಥರು

ಜನಪ್ರತಿನಿಧಿ (ಮಡಾಮಕ್ಕಿ) : ತೀವ್ರ ಮಳೆಯ ಕಾರಣದಿಂದ ಮಡಾಮಕ್ಕಿ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಹಂಜ ಗ್ರಾಮದ ರಸ್ತೆ ಸಂಪೂರ್ಣ ಹದಗೆಟ್ಟಿತ್ತು ಪರಿಣಾಮ ಸ್ಥಳೀಯ ಸುಮಾರು ನೂರೈವತ್ತು ಕುಟುಂಬಗಳು, ಶಾಲಾ ಮಕ್ಕಳು ಮನೆಯಿಂದ ಹೊರಬರಬೇಕೆಂದರೇ ಕಷ್ಟಪಡುವಂತಹ ಸ್ಥಿತಿ ಉದ್ಭವಿಸಿತ್ತು. ದುರ್ಗಮ ಅರಣ್ಯ ಪ್ರದೇಶದಲ್ಲಿರುವ ಈ ಕುಗ್ರಾಮದ ಹಂಜ ಗ್ರಾಮಸ್ಥರ ಜೀವನ ಹೈರಾಣಾಗಿ ಹೋಗಿತ್ತು. ಸಂಪೂರ್ಣ ಕೆಸರುಮಯವಾಗಿರು ಈ ಮಾರ್ಗದಲ್ಲಿ ಇಂದಿಗೂ ಕಾಲ್ನಡಿಗೆಯೇ ಗತಿ ಎಂಬ ವಾತಾವರಣ ಸೃಷ್ಟಿಯಾಗಿತ್ತು.

ಜಿಲ್ಲಾಡಳಿತ ಈವರೆಗೆ ಈ ಬಗ್ಗೆ ಗಮನ ನೀಡಿರಲಿಲ್ಲ. ಮಡಾಮಕ್ಕಿ ಗ್ರಾಮ ಪಂಚಾಯತ್‌ ಅಧ್ಯಕ್ಷ ಉದಯ ಶೆಟ್ಟಿ ವಿಧಾನಪರಿಷತ್‌ ಸದಸ್ಯ ಮಜುನಾಥ ಭಂಡಾರಿ, ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅವರಿಗೆ ಪತ್ರದ ಮೂಲಕ ಪಂಚಾಯತ್‌ ವ್ಯಾಪ್ತಿಯಲ್ಲಿ ಹದಗೆಟ್ಟಿರುವ ರಸ್ತೆಗಳನ್ನು ದುರಸ್ತಿ ಮಾಡಿಕೊಡುವಂತೆ ಕೇಳಿಕೊಂಡಿದ್ದರು. ಮಾತ್ರವಲ್ಲದೇ ಕುಂದಾಪುರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಹರಿಪ್ರಸಾದ್‌ ಶೆಟ್ಟಿ ಕಾನ್ಮಕ್ಕಿ ಮಂಜುನಾಥ್‌ ಭಂಡಾರಿ ಅವರಲ್ಲಿ ಈ ಬಗ್ಗೆ ಖುದ್ದಾಗಿ ಚರ್ಚಿಸಿ ಸಮಸ್ಯೆ ಬಗೆಹರಿಸುವಲ್ಲಿ ಸಹಕರಿಸುವಂತೆ ವಿನಂತಿಸಿಕೊಂಡಿದ್ದರು. ಸಮಸ್ಯೆಗೆ ಸ್ಪಂದಿಸಿದ ಮಂಜುನಾಥ್‌ ಭಂಡಾರಿಯವರು ಈ ಬಗ್ಗೆ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್‌ ಕಾರ್ಯನಿರ್ವಹಣಾಧಿಕಾರಿಗಳೊಂದಿಗೆ ಚರ್ಚಿಸಿ ತುರ್ತು ಕಾಮಗಾರಿ ಮಾಡುವಂತೆ ಸೂಚಿಸಿದ್ದರು.

ಸಮಸ್ಯೆಗೆ ಪರಿಗಣನೆಗೆ ತೆಗೆದುಕೊಂಡ ಜಿಲ್ಲಾಡಳಿತ ಮಡಾಮಕ್ಕಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಹಂಜ ರಸ್ತೆಯ ತುರ್ತು ದುರಸ್ತಿ ಕಾಮಗಾರಿಯನ್ನು ಆರಂಭಿಸಿದ್ದು, ಇದರಿಂದ ಗ್ರಾಮಸ್ಥರು ತುಸು ನಿರಾಳರಾಗಿದ್ದಾರೆ.

ಈ ಪ್ರದೇಶದ ಶಾಲಾ ಮಕ್ಕಳು ದುರ್ಗಮ ಅರಣ್ಯ ಪ್ರದೇಶದ ಮಾರ್ಗದಲ್ಲಿ ಕೆಲವು ದಿನಗಳ ಹಿಂದೆ ಗೂಡ್ಸ್‌ ವಾಹನವೊಂದರಲ್ಲಿ ಶಾಲೆಗೆ ತೆರಳುತ್ತಿರುವ ದೃಶ್ಯ ಕಂಡುಬಂದಿತ್ತು, ಅದು ರಾಜ್ಯ ಮಟ್ಟದಲ್ಲಿ ಸುದ್ದಿಯಾಗಿತ್ತು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!