Tuesday, October 8, 2024

ಬೆಳೆಹಾನಿಗೆ ಗೌರವಯುತ ಪರಿಹಾರ ಸಿಗಲಿ

ಇತ್ತೀಚೆಗಿನ ವರ್ಷಗಳಲ್ಲಿ ಈ ಬಾರಿ ಮುಂಗಾರು ಮಳೆಯಿಂದ ಈಗಾಗಲೇ ಕರಾವಳಿ ಜಿಲ್ಲೆಯಲ್ಲಿ ಭಾರೀ ನಷ್ಟ ಸಂಭವಿಸಿದೆ. ನಿರಂತರವಾಗಿ ಸುರಿಯುತ್ತಿರುವ ಕುಂಭದ್ರೋಣ ಮಳೆ ಒಂದೆಡೆಯಾದರೆ ಕಳೆದ ವಾರ ಮೂರ್‍ನಾಲ್ಕು ದಿನ ಸತತವಾಗಿ ಬೀಸಿದ ಬಿರುಗಾಳಿ ಬಹುದೊಡ್ಡ ಅನಾಹುತವನ್ನೇ ಉಂಟು ಮಾಡಿದೆ. ಬಹುಮುಖ್ಯವಾಗಿ ಮೊದಲೇ ಹತಾಸೆಯಲ್ಲಿದ್ದ ಕೃಷಿಕ ಈ ಮಳೆ ಗಾಳಿಯಿಂದ ಸಂಪೂರ್ಣ ಕಂಗೆಟ್ಟು ಕುಳಿತಿದ್ದಾನೆ. ಕರಾವಳಿಯಲ್ಲಿ ವರ್ಷದಿಂದ ವರ್ಷಕ್ಕೆ ವಿಸ್ತೀರ್ಣದಲಗ್ಲಿ ತೀವ್ರ ಕುಸಿತ ಕಾಣುವ ಭತ್ತದ ಗದ್ದೆಗಳು ಈ ಬಾರಿ ನಾಟಿ ಸಂಪೂರ್ಣ ಕೊಳೆತು ಹೋಗಿದೆ. ಪುನಃ ನಾಟಿಗೂ ಮಳೆ ವಿರಾಮ ನೀಡುತ್ತಿಲ್ಲ. ದುಬಾರಿ ನಿರ್ವಹಣೆ ವೆಚ್ಚದಿಂದ ಭತ್ತ ಬೇಸಾಯಗಾರ ಸೋಲಿನ ಮೇಲೆ ಸೋಲು ಅನುಭವಿಸಿದ್ದಾನೆ. ಇನ್ನೂ ಈ ಭಾಗದ ಪ್ರಮುಖ ವಾಣಿಜ್ಯ ಬೆಳೆ ಅಡಿಕೆ ಬೆಳೆ. ಬಿರುಗಾಳಿಗೆ ಸಾಕಷ್ಟು ಅಡಿಕೆ ಮರಗಳು ಧರಾಶಾಹಿಯಾಗಿವೆ. ಅರ್ಧಕ್ಕೆ ಮುರಿದು ಬಿದ್ದಿವೆ. ಕೆಲವೆಡೆ ಭಾಗಶಃ ತೋಟಗಳು ಹಾನಿಗೊಳಗಾಗಿವೆ. ಒಂದೆಡೆ ಬಿಡದೆ ಸುರಿಯುತ್ತಿರುವ ಮಳೆಯಿಂದ ಅಡಿಕೆ ಎಳೆಗಾಯಿಗಳು ಧರೆ ಉರುಳಿ ಬೀಳುತ್ತಿರುವ ಆತಂಕದ ನಡುವೆಯೇ ಬೀಸಿದ ಭಯಂಕರ ಗಾಳಿಗೆ ಮರಗಳೇ ನೆಲಕ್ಕೆ ಉರುಳಿ ಬಿದ್ದಿದೆ. ಒಂದು ಅಡಿಕೆ ಸಸಿ ಫಲ ನೀಡಲು ಕನಿಷ್ಠ ಐದು ವರ್ಷವಾದರೂ ಲಾಲನೆ ಪಾಲನೆ ಮಾಡಬೇಕು. ಸಣ್ಣ ರೈತರಂತೂ ಈ ಬಾರಿಯ ಅತಿವೃಷ್ಟಿಯಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇರುವ ಏಕೈಕ ಆರ್ಥಿಕ ಮೂಲವಾದ ಅಡಿಕೆ ಬೆಳೆಹಾನಿಯ ಜೊತೆಯಲ್ಲಿ ಮರಗಳನ್ನು ರೈತರು ಕಳೆದುಕೊಂಡಿದ್ದಾರೆ. ರೈತರಿಗೆ ಗರಿಷ್ಠ ಮಟ್ಟದ ಪರಿಹಾರ ನೀಡುವ ಕೆಲಸ ಸರ್ಕಾರ ಮಾಡಬೇಕಾಗಿದೆ. ಸರ್ಕಾರ ನೀಡುವ ಬೆಳೆ ಪರಿಹಾರ ಎಂದಾಗ ರೈತರು ಅಸಮಾಧಾನ ವ್ಯಕ್ತ ಪಡಿಸುತ್ತಾರೆ. ಸರ್ಕಾರ ನೀಡುವ ಕಿಂಚನ್ ಪರಿಹಾರಕ್ಕೆ ವಾರಗಳ ಅಲೆದಾಡಬೇಕು. ಉತ್ತಮ ಪರಿಹಾರ ಮೊತ್ತವೂ ಸಿಗುವುದಿಲ್ಲ. ಸರ್ಕಾರಗಳು ಇನ್ನೂ ಕೂಡಾ ಓಬಿರಾಯನ ಕಾಲದಲ್ಲೇ ಇವೆ. ಇತ್ತೀಚೆಗೆ ಬೆಳೆ ವಿಮೆ ಮಾಡಿಸುವಲ್ಲಿಯೂ ಕೂಡಾ ಬೆರಳೆಣಿಕೆ ದಿನಗಳ ಕಾಲವಕಾಶ ನೀಡಲಾಗಿತ್ತು. ಇದು ಕೂಡಾ ರೈತರನ್ನು ಕೆರಳಿಸಿತ್ತು. ಮತ್ತೆ ಸಣ್ಣ ವಿಸ್ತರಣೆ ಮಾಡಿತ್ತಾದರೂ ಅದು ರೈತರ ಗಮನ ಬರುವಾಗಲೆ ಉಳಿದಿದ್ದು ಒಂದೆರಡು ದಿನವಷ್ಟೆ. ರೈತರ ಬಗ್ಗೆ ಸರ್ಕಾರದ ಧೋರಣೆಗಳು ಬದಲಾಗಬೇಕು. ಗೌರವಯುತವಾಗಿ ಬೆಳೆ ಹಾನಿಗೆ ಪರಿಹಾರ ನೀಡಿ ಮತ್ತೆ ಕೃಷಿ ಮಾಡಲು ಅವರನ್ನು ಹುರಿದುಂಬಿಸಬೇಕು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!