Saturday, October 12, 2024

ಶಿರಾಡಿ ಘಾಟ್‌ ಸಂಪರ್ಕ ರಸ್ತೆ ಮೂರನೇ ದಿನವೂ ಬಂದ್‌ | ಮುಂದುವರಿದ ವಿಪತ್ತು ನಿರ್ವಹಣಾ ಕಾರ್ಯಾಚರಣೆ !

ಜನಪ್ರತಿನಿಧಿ (ಸಕಲೇಶಪುರ) : ನಿರಂತರ ಸುರಿಯುತ್ತಿರುವ ಮಳೆಗೆ ಶಿರಾಡಿ ಘಾಟ್‌‌ ಸಂಪರ್ಕ ರಸ್ತೆ ಸಂಚಾರ 3ನೇ ದಿನವೂ ಸ್ಥಗಿತಗೊಂಡಿದೆ. ಇಂದು(ಗುರುವಾರ) ಕೂಡ ವಿಪತ್ತು ಕಾರ್ಯಾಚರಣೆ ಮುಂದುವರಿದಿದ್ದು, ಕುಸಿತಗೊಂಡಿರುವ ಗುಡ್ಡದಡಿ ಸಿಲುಕಿರುವ ವಾಹನಗಳು ಹೊರ ತೆಗೆಯುವ ಕಾರ್ಯಾಚರಣೆ ಮುಂದುವರಿದಿದೆ ಎಂದು ತಿಳಿದುಬಂದಿದೆ.

ಶಿರಾಡಿ ಘಾಟ್‌ ನ ಬೆಂಗಳೂರು-ಮಂಗಳೂರು ಸಂಪರ್ಕ ರಸ್ತೆ ಸಂಚಾರ ಬಂದ್ ಮಾಡಲಾಗಿದ್ದು, ಮುಖ್ಯ ಹೆದ್ದಾರಿಯಲ್ಲಿ ವಾಹನಗಳ ಸಂಚಾರ ಬಂದ್‌ ಮಾಡಿರುವ ಕಾರಣದಿಂದಾಗಿ ಕಿಲೋಮೀಟರ್ ಗಟ್ಟಲೇ ಟ್ರಾಫಿಕ್ ಜಾಮ್ ಉಂಟಾಗಿದೆ. ಜನರು ಪರ್ಯಾವಾಗಿ ಚಾರ್ಮಾಡಿ ಹಾಗೂ ಸಂಪಾಜೆ ಮಾರ್ಗವನ್ನು ಬಳಸುವಂತೆ ಸೂಚಿಸಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.

ನಿನ್ನೆ ಇಡೀ ರಾತ್ರಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದು, ಮಣ್ಣಿನಡಿ ಸಿಲುಕಿದ್ದ ಒಂದು ಟ್ಯಾಂಕರ್ ಅನ್ನು ಹೊರ ತೆಗೆಯಲಾಗಿತ್ತು, ಇನ್ನು ಎರಡು ಕಂಟೇನರ್ ಮಣ್ಣಿನಲ್ಲೇ ಸಿಲುಕಿಕೊಂಡಿದೆ. ಆದರೆ ಸಕಲೇಶಪುರ ತಾಲೂಕಿನ ದೊಡ್ಡ ತಪ್ಪಲೆ ಮತ್ತೆ ಗುಡ್ಡ ಕುಸಿತವಾಗಿದೆ.

ಈ ಸಂಬಂಧಿಸಿದಂತೆ ವರದಿಗಾರರಿಗೆ ಪ್ರತಿಕ್ರಿಯಿಸಿದ ಹಾಸನ ಜಿಲ್ಲಾಧಿಕಾರಿ ಸಿ.ಸತ್ಯಭಾಮ, ಸಕಲೇಶಪುರ ತಾಲೂಕು ದೊಡ್ಡ ತಪ್ಪಲೆ ಬಳಿ ಗುಡ್ಡ ಕುಸಿದು ವಾಹನ ಸಂಚಾರಕ್ಕೆ ಅಡೆತಡೆ ಆಗಿದೆ. ನಿನ್ನೆಯೂ ವಾಹನಗಳ ಮೇಲೆ ಮಣ್ಣು ಕುಸಿದಿತ್ತು. ರಾತ್ರಿ ಇಡೀ ಕಾರ್ಯಾಚರಣೆ ನಂತರ ರಸ್ತೆ ಸಂಚಾರಕ್ಕೆ ಮುಕ್ತ ಮಾಡಲಾಗಿದೆ, ಎನ್‌ಹೆಚ್‌ಎಐ ನ ಅಧಿಕಾರಿಗಳು ಸ್ಥಳದಲ್ಲೇ ಇದ್ದು ಕಾರ್ಯಾಚರಣೆ ಮುಂದುವರಿಸಿದ್ದಾರೆ ಎಂದು ತಿಳಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!