Wednesday, September 11, 2024

ಸಂಗೀತ ಮಾತೃ ಸ್ಥಾನದಲ್ಲಿ ನಿಲ್ಲುತ್ತದೆ-ಕೊಂಡದಕುಳಿ ರಾಮಚಂದ್ರ ಹೆಗಡೆ

ತೆಕ್ಕಟ್ಟೆ: ನಮ್ಮ ದೇಶದ ಮಣ್ಣಿನ ವಿಶಿಷ್ಟ ಪರಂಪರೆ ಎಂದರೆ ಗುರುವನ್ನು ಗೌರವಿಸುವ ಶಿಷ್ಟ ಪರಂಪರೆ. ಗುರುವಿನಿಂದ ಉಪಕೃತರಾದಾಗ ಅವರಿಗೆ ಕೃತಜ್ಞತಾ ಪೂರ್ವಕವಾಗಿ ಗೌರವವನ್ನು ಸಲ್ಲಿಸಲೇ ಬೇಕು. ಇದು ಸನಾತನ ಸಂಸ್ಕೃತಿ. ಭೂಮಿ ಪೂಜೆಯೋ, ದೇವರ ಪೂಜೆಯೋ, ಗುರುಪೂಜೆಯೋ, ಗೋಪೂಜೆಯೋ, ಆಯುಧ ಪೂಜೆಯೋ ಹೀಗೆ ಹಲವಾರು ವಿಧದ ಪೂಜೆ ಯಾಕೆಂದರೆ ಅದು ಕೃತಜ್ಞತಾ ಆಂತರಂಗಿಕ ಭಾವ. ಪ್ರಪಂಚದಲ್ಲಿ ಮೊದಲು ಹುಟ್ಟಿದ್ದೇ ಓಂಕಾರ ನಾದ. ಪ್ರಪಂಚದ ಸರ್ವವೂ ನಾದಕ್ಕೆ ಸೋಲುತ್ತಾರೆ. ಮಾತೃ ಸ್ಥಾನದಲ್ಲಿ ಸಂಗೀತ ನಿಲ್ಲುತ್ತದೆ. ಸಂಗೀತವೇ ಪ್ರಪಂಚದಲ್ಲಿ ಮೊದಲು ಹುಟ್ಟಿದ್ದು. ಸಂಗೀತ, ಪರಂಪರೆ, ಸಾಹಿತ್ಯ, ಗೌರವಗಳೆಲ್ಲಾ ಸ್ಥಾಯಿಯಾಗಿ ಉಳಿಸಿಕೊಂಡು ಹೋದರೆ ಅದು ಸವಿಯಾದ ರೀತಿಯಲ್ಲಿ ಸಮಾಜದಲ್ಲಿ ಬಿಂಬಿತವಾಗುತ್ತದೆ ಎಂದು ಯಕ್ಷಗಾನದ ಪ್ರಸಿದ್ಧ ಕಲಾವಿದರಾದ ಕೊಂಡದಕುಳಿ ರಾಮಚಂದ್ರ ಹೆಗಡೆ ಮಾತನ್ನಾಡಿದರು.

ತೆಕ್ಕಟ್ಟೆ ಹಯಗ್ರೀವದಲ್ಲಿ ಯಶಸ್ವೀ ಕಲಾವೃಂದ ಕೊಮೆ, ತೆಕ್ಕಟ್ಟೆ ಸಿನ್ಸ್ ೧೯೯೯ ಶ್ವೇತಯಾನ-೪೭ರ ಕಾರ್ಯಕ್ರಮದಡಿಯಲ್ಲಿ ಜುಲೈ 28ರಂದು ಗುರುಪರಂಪರಾ ಸಂಗೀತ ಸಭಾ ಕುಂದಾಪುರದ 8ನೇ ವರ್ಷದ ಗುರುಪೂರ್ಣಿಮಾ ಸಂಗೀತೋಪಾಸನಾ ಕಾರ್ಯಕ್ರಮದಲ್ಲಿ ಗುರು ದಂಪತಿಗಳಾದ ಸತೀಶ್ ಭಟ್ ಮಾಳಕೊಪ್ಪ ಹಾಗೂ ಪ್ರತಿಮಾ ಭಟ್ ಇವರನ್ನು ಗೌರವಿಸಿ  ಮಾತನ್ನಾಡಿದರು.

ಪರಂಪರೆಯ ಚೌಕಟ್ಟಿನೊಳಗೆ ಬದುಕುವ ಶಿಷ್ಠಾಚಾರ ನನ್ನದು. ಸಂಗೀತವು ಬಹಳ ಹಿಂದಿನಿಂದಲೂ ನಡೆದು ಬಂದ ದಾರಿ. ಅದನ್ನು ಬದಲಾಯಿಸುವ ಹಕ್ಕು ನನಗಿಲ್ಲ. ಶೃತಿ ಬದ್ಧತೆ ಹಾಗೂ ಲಯ ಬದ್ಧತೆ ಹಾಡುವಿಕೆಗೆ ಅತ್ಯಗತ್ಯ. ಇದು ನಮ್ಮ ಗರಡಿಯಲ್ಲಿ ಬೆಳೆದ ಮಕ್ಕಳು ಅನುಸರಿಸುತ್ತಿರುವುದು ನನಗೆ ಅತ್ಯಂತ ಖುಷಿ ಕೊಟ್ಟಿದೆ ಎಂದು ಗುರುವಂದನೆ ಸಲ್ಲಿಸಿಕೊಂಡ ಸತೀಶ್ ಭಟ್ ಮಾಳಕೊಪ್ಪ ಮಾತನ್ನಾಡಿದರು.

ಕಾರ್ಯಕ್ರಮದಲ್ಲಿ ಶಿಷ್ಯರುಗಳಾದ ನಾಗರಾಜ್ ಬೈಂದೂರು, ವೀಣಾ ನಾಯಕ್, ನೇಹಾ ಹೊಳ್ಳ, ಪಂಚಮಿ ವೈದ್ಯ, ಇನ್ನಿತರರು ಉಪಸ್ಥಿತರಿದ್ದರು. ಬಳಿಕ ಶಿಷ್ಯ ಬಳಗದ ಸಂಗೀತೋಪಾಸನಾ ಕಾರ್ಯಕ್ರಮವು ರಂಗದಲ್ಲಿ ಪ್ರಸ್ತುತಿಗೊಂಡಿತು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!