Wednesday, September 11, 2024

ಕರ್ನಾಟಕ ರಾಜ್ಯ ಕನ್ನಡ ಜಾನಪದ ಪರಿಷತ್: ಬ್ರಹ್ಮಾವರ ತಾಲೂಕು ಘಟಕದ ಪದಾಧಿಕಾರಿಗಳ ಆಯ್ಕೆ

ಬ್ರಹ್ಮಾವರ : ಕರ್ನಾಟಕ ರಾಜ್ಯ ಕನ್ನಡ ಜಾನಪದ ಪರಿಷತ್ ಅಧೀನದ ಉಡುಪಿ ಜಿಲ್ಲಾ ಘಟಕಕ್ಕೆ ಪೂರಕವಾಗಿ ಬ್ರಹ್ಮಾವರ ತಾಲೂಕು ಘಟಕದ ಪದಾಧಿಕಾರಿಗಳ ಆಯ್ಕೆ ಶನಿವಾರ ಬ್ರಹ್ಮಾವರ ಸರಕಾರಿ ಪದವಿ ಪೂರ್ವ ಕಾಲೇಜಿನ ವಠಾರದಲ್ಲಿ ಜರುಗಿತು.

ಬ್ರಹ್ಮಾವರದ ನಿವೃತ್ತ ಪ್ರೌಡಶಾಲಾ ಮುಖ್ಯೋಪದ್ಯಾಯ ತಿಮ್ಮ ನಾಯ್ಕ್ ಬ್ರಹ್ಮಾವರ ತಾಲೂಕು ಘಟಕದ ಅಧ್ಯಕ್ಷರಾಗಿ ಆಯ್ಕೆಗೊಂಡರು. ಹಾಗೂ ಇನ್ನಿತರ ಪಧಾಧಿಕಾರಿಗಳ ಆಯ್ಕೆ ನಡೆಯಿತು.

ಇದೇ ಸಂದರ್ಬದಲ್ಲಿ ತಿಮ್ಮನಾಯ್ಕ್ ಮಾತನಾಡಿ ಬ್ರಹ್ಮಾವರ ತಾಲೂಕು ಮಟ್ಟದ ಕನ್ನಡ ಜಾನಪದ ಮನಸುಗಳ ಒಗ್ಗೂಡುವಿಕೆಗೆ . ಜಾನಪದ ಕಲೆಗಳ ಮತ್ತು ನಾಡು ನುಡಿಯೊಂದಿಗೆ ಜಾನಪದ ಕಲಾವಿದರನ್ನು ಬೆಳೆಸುವ ಮತ್ತು ಉಳಿಸುವ ಪ್ರೋತ್ಸಾಹಿಸುವದಕ್ಕಾಗಿ ಶ್ರಮಿಸಿ ಕನ್ನಡ ಜಾನಪದ ಪರಿಷತ್ ತಾಲೂಕಿನಾದ್ಯಂತ ಇರುವ ಜನರನ್ನು ಸಂಘಟಿಸಿ ಇಲ್ಲಿನ ಎಲ್ಲಾ ಜನಪದವನ್ನು ಒಗ್ಗೂಡಿಸುವ ಎಂದರು.

ಅಗಸ್ಟ್ 12ರಂದು ಸಂಜೆ 5 ಗಂಟೆಗೆ ರಾಜ್ಯ ಮತ್ತು ಜಿಲ್ಲಾ ಘಟಕದ ಪಧಾಧಿಕಾರಿಗಳಿಂದ ಬ್ರಹ್ಮಾವರ ಘಟಕದ ಉದ್ಘಾಟನಾ ಕಾರ್ಯಕ್ರಮ ಜರುಗಲಿದೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!