spot_img
Wednesday, January 22, 2025
spot_img

ನೀವು ಚಕ್ರವ್ಯೂಹವನ್ನು ರಚಿಸುತ್ತೀರಿ, ನಾವು ಅದನ್ನು ಬೇಧಿಸುತ್ತೇವೆ : ಕೇಂದ್ರ ಸರ್ಕಾರದ ವಿರುದ್ದ ರಾಗಾ ವಾಗ್ದಾಳಿ

ಜನಪ್ರತಿನಿಧಿ (ನವ ದೆಹಲಿ) : ಆರು ಮಂದಿ ಸೇರಿ ದೇಶವನ್ನು ಚಕ್ರವ್ಯೂಹದಲ್ಲಿ ಸಿಲುಕಿಸಿದ್ದಾರೆ ಎಂದು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ಮಾಡಿದ್ದಾರೆ.

ಬಜೇಟ್‌ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ರಾಹುಲ್‌ ಅವರು, ಚಕ್ರವ್ಯೂಹದ ಮೂಲಕ ಭಯವನ್ನು ಹಬ್ಬಿಸಿ, ರೈತರು, ಕಾರ್ಮಿಕರು ಸೇರಿ ಎಲ್ಲರೂ ಅದರೊಳಗೆ ಸಿಲುಕಿಕೊಳ್ಳುವ ಹಾಗೆ ಮಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

ಹರಿಯಾಣದ ಕುರುಕ್ಷೇತ್ರದಲ್ಲಿ ಸಾವಿರಾರು ವರ್ಷಗಳ ಹಿಂದೆ ಆರು ಮಂದಿ ಸೇರಿ ಅಭಿಮನ್ಯು ಎನ್ನುವ ತರುಣನನ್ನು ಕೊಲೆ ಮಾಡಿದರು. ಚಕ್ರವ್ಯೂಹ ಎಂದರೆ ಭಯ ಹಾಗೂ ಹಿಂಸೆ. ಅದರೊಳಗೆ ಸಿಲುಕಿಸಿ ಅಭಿಮನ್ಯುವನ್ನು ಕೊಂದು ಹಾಕಿದ್ದರು ಎಂದು ರಾಹುಲ್‌ ಹೇಳಿದ್ದಾರೆ.

ಅಂದು ಆರು ಮಂದಿ ಸೇರಿ ಚಕ್ರವ್ಯೂಹ ರಚಿಸಿ ಅಭಿಮನ್ಯುವನ್ನು ಕೊಲೆ ಮಾಡಿದರು. ಇಂದು ಕೇಂದ್ರ ಸರ್ಕಾರದಲ್ಲಿ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್‌ ಶಾ. ಆರ್‌ಎಎಸ್‌ ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ಧೋವಲ್, ಉದ್ಯಮಿಪತಿಗಳಾದ ಅಂಬಾನಿ ಹಾಗೂ ಅದಾನಿ ಸೇರಿ ಚಕ್ರವ್ಯೂಹ ರಚಿಸಿಕೊಂಡಿದ್ದಾರೆ ಎಂದು ಟೀಕಿಸಿದ್ದಾರೆ.

ಚಕ್ರವ್ಯೂಹವನ್ನು ಪದ್ಮವ್ಯೂಹವೆಂದು ಕರೆಯುತ್ತಾರೆ. ಅದು ಕಮಲದ ಹೂವಿನ ಹಾಗೆ ಕಾಣಿಸುತ್ತದೆ. ಕಮಲದ ಹೂವಿನ ಚಿತ್ರವನ್ನು ಪ್ರಧಾನಿ ಮೋದಿ ಎದೆಗೆ ಸಿಲುಕಿಕೊಂಡು ಓಡಾಡುತ್ತಾರೆ. ಅಭಿಮನ್ಯುವಿಗೆ ಮಾಡಿದ ಹಾಗೆ ಇಂದು ಯುವಕರು, ಮಹಿಳೆಯರು, ರೈತರ ಹಾಗೂ ಉದ್ದಿಮೆಗಳ ಮೇಲೆ ಮಾಡಲಾಗುತ್ತದೆ ಎಂದು ಅವರು ಹೇಳಿದ್ದಾರೆ.

ನೀವು ಚಕ್ರವ್ಯೂಹವನ್ನು ರಚಿಸುತ್ತೀರಿ, ನಾವು ಅದನ್ನು ಬೇಧಿಸುತ್ತೇವೆ. ಜಾತಿಗಣತಿ ಮಾಡುವ ಮೂಲಕ ಚಕ್ರವ್ಯೂಹ ಬೇಧಿಸುತ್ತೇವೆ. ಏಕಚಕ್ರಾಧಿಪತ್ಯ ಬಂಡವಾಳ ಹಾಗೂ ಆರ್ಥಿಕ ಶಕ್ತಿಯ ಕೇಂದ್ರೀಕರಣ, ಸಂಸ್ಥೆಗಳಾದ ಐಟಿ, ಇ.ಡಿ, ಸಿಬಿಐ ರಾಜಕೀಯ ಅಧಿಕಾರ ಈ ಮೂರು ಭಾರತವನ್ನು ತನ್ನ ಕೈಯೊಳಗೆ ಮಾಡಿಕೊಂಡ ಚಕ್ರವ್ಯೂಹದಲ್ಲಿ ಸೇರಿಕೊಂಡಿವೆ ಎಂದು ಅವರು ಹೇಳಿದ್ದಾರೆ.

The Chakravyuh that has captured India has three forces behind it:

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!