Sunday, September 8, 2024

ಕೇಂದ್ರ ಬಜೇಟ್‌ : ಈ ಬಾರಿ ಯಾವುದು ಅಗ್ಗ ಯಾವುದು ತುಟ್ಟಿ ? ಇಲ್ಲಿದೆ ಮಾಹಿತಿ

ಜನಪ್ರತಿನಿಧಿ (ನವದೆಹಲಿ) : ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ಮೊದಲ ಬಜೆಟ್ ಮಂಡನೆ ಮಾಡಿದ್ದಾರೆ. ಬಜೆಟ್‌ನಲ್ಲಿ ಹಲವು ಸರಕು ಹಾಗೂ ಸೇವೆಗಳ ಮೇಲಿನ ತೆರಿಗೆ ಏರಿಳಿತ ಮಾಡಲಾಗಿದೆ, ಈ ಹಿನ್ನೆಲೆಯಲ್ಲಿ ಬಜೆಟ್‌ ಬಳಿಕ ಏರಿಳಿತ ಕಾಣುವ ಸರಕು ಹಾಗೂ ಸೇವೆಗಳ ಬಗ್ಗೆ ಮಾಹಿತಿ ಇಲ್ಲಿದೆ.

ಯಾವುದರ ಬೆಲೆ ಕಡಿಮೆಯಾಗಿದೆ ?

  • ಚಿನ್ನ, ಬೆಳ್ಳಿ, ಪ್ಲಾಟಿನಂ ಮೇಲಿನ ಆಮದು ಸುಂಕ ಕಡಿತ, ಬೆಲೆ ಇಳಿಕೆ
  • ತಾಮ್ರದ ಮೇಲೂ ತೆರಿಗೆ ಕಡಿತ
  • ಮೊಬೈಲ್ ಫೋನ್ ಬಿಡಿ ಭಾಗಗಳ ಮೇಲಿನ ತೆರಿಗೆ ಇಳಿಕೆ
  • ಮೊಬೈಲ್ ಫೋನ್ ಬೆಲೆ ಇಳಿಕೆ
  • ಮೊಬೈಲ್ ಫೋನ್ ಚಾರ್ಜರ್ ಬೆಲೆ ಇಳಿಕೆ
  • ಕ್ಯಾನ್ಸರ್ ಔಷಧದ ಬೆಲೆ ಇಳಿಕೆ
  • ಸೋಲಾರ್ ಪ್ಯಾನಲ್‌ಗಳ ಬೆಲೆ ಇಳಿಕೆ
  • ವಿದ್ಯುತ್ ತಂತಿ & ಎಕ್ಸ್‌ ರೇ ಉಪಕರಣಗಳ ಬೆಲೆ ಇಳಿಕೆ
  • ಆದಾಯ ತೆರಿಗೆ ಪದ್ಧತಿ ಮತ್ತಷ್ಟು ಸರಳೀಕರಣ
  • ವಿದೇಶಿ ಬಟ್ಟೆ, ಚರ್ಮೋತ್ಪನ್ನಗಳು, ಟಿವಿ ಅಗ್ಗವಾಗಲಿದೆ
  • 20 ಖನಿಜಗಳ ಮೇಲೆ ಅಬಕಾರಿ ಸುಂಕ ಇಳಿಕೆ
  • ಇಕಾಮರ್ಸ್‌ ಮೇಲಿನ ಟಿಡಿಎಸ್‌ ಶೇ 1ರಿಂದ ಶೇ 0,1ಕ್ಕೆ ಇಳಿಕೆ
  • ಸ್ಟಾರ್ಟ್‌ಅಪ್‌ ವ್ಯವಸ್ಥೆ: ಏಂಜೆಲ್ ಟ್ಯಾಕ್ಸ್‌ ರದ್ದು

ಯಾವುದು ದುಬಾರಿಯಾಗಿದೆ ?

  • ಮರು ಬಳಕೆ ಆಗದ ಎಲ್ಲಾ ರೀತಿಯ ಪ್ಲಾಸ್ಟಿಕ್ ವಸ್ತುಗಳ ಬೆಲೆ ಏರಿಕೆ
  • ವಿವಿಧ ರೀತಿಯ ಬಟ್ಟೆ, ವಸ್ತ್ರಗಳ ಬೆಲೆ ಏರಿಕೆ
  • ಎಲ್ಲಾ ರೀತಿಯ ವಿದ್ಯುತ್ ಉಪಕರಣಗಳ ಬೆಲೆ ಏರಿಕೆ
  • ಮೊಬೈಲ್ ಟವರ್ ಬಿಡಿ ಭಾಗಗಳ ಬೆಲೆ ಏರಿಕೆ
  • ಸ್ಟೇಟ್ ಸ್ಟ್ಯಾಂಪ್ ಡ್ಯೂಟಿ ಹೆಚ್ಚಳಕ್ಕೆ ರಾಜ್ಯ ಸರ್ಕಾರಗಳಿಗೆ ಅವಕಾಶ

ಈ ಬಜೆಟ್‌ನಲ್ಲಿ ಕೇಂದ್ರ ಸರ್ಕಾರ ಕೆಲವು ವಸ್ತುಗಳ ಸುಂಕದಲ್ಲಿ ಏರಿಳಿತ ಮಾಡುವ ಹೊತ್ತಲ್ಲಿ ಪರಿಸರ ಸ್ನೇಹಿ ನಿಲುವನ್ನು ಅನುಸರಿಸಿದೆ ಎಂದು ಹೇಳಳಾಗುತ್ತಿದೆ. ಅದರಲ್ಲೂ ಪರಿಸರಕ್ಕೆ ಮಾರಕವಾದ, ಮರು ಬಳಕೆ ಮಾಡಲು ಸಾಧ್ಯವೇ ಆಗದ ಪ್ಲಾಸ್ಟಿಕ್ ವಸ್ತುಗಳ ಬೆಲೆ ಏರಿಕೆ ಮಾಡುವ ಮೂಲಕ ಸರ್ಕಾರ ಪರಿಸರ ಸ್ನೇಹಿ ನಿಲುವು ಅನುಸರಿಸಿದೆ. ಮಾತ್ರವಲ್ಲದೇ, ಸೌರ ವಿದ್ಯುತ್ ಬಳಕೆ ಪ್ರೋತ್ಸಾಹಿಸುವ ಸಲುವಾಗಿ ಅವುಗಳ ಬೆಲೆಯಲ್ಲಿ ಕಡಿಮೆ ಮಾಡಲಾಗಿದೆ.

ಇನ್ನು, ವಿದ್ಯುತ್ ತಂತಿ, ಎಕ್ಸರೇ ಮಿಷನ್, ಕ್ಯಾನ್ಸರ್ ಔಷಧಗಳ ಬೆಲೆಯಲ್ಲಿ ಇಳಿಕೆ ಮಾಡುವ ಮೂಲಕ ದೇಶದ ಜನತೆಯ ಅರೋಗ್ಯ ಸ್ನೇಹಿ ನಿಲುವನ್ನ ಸರ್ಕಾರ ಅನುಸರಿಸಿದೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!