spot_img
Sunday, February 15, 2026
spot_img

ಬೈಂದೂರು ಒತ್ತಿನೆಣೆ ಗುಡ್ಡ ಕುಸಿಯುವ ಭೀತಿ : ಹೆದ್ದಾರಿ ಸಂಪರ್ಕ ಕಡಿತಗೊಳ್ಳುವ ಸಾಧ್ಯತೆ

ಜನಪ್ರತಿನಿಧಿ (ಬೈಂದೂರು ) : ಪುನರ್ವಸು ಮಳೆ ಆರಂಭದಿಂದ ಸುರಿಯುತ್ತಿರುವ ಭಾರಿ ಮಳೆಯ ಕಾರಣದಿಂದಾಗಿ ಬೈಂದೂರು ತಾಲೂಕಿನ ಒತ್ತಿನೆಣೆಯಲ್ಲಿ ಈ ವರ್ಷವೂ ಗುಡ್ಡ ಕುಸಿತವಾಗುವ ಭೀತಿ ಎದುರಾಗಿದೆ.

ರಾಷ್ಟ್ರೀಯ ಹೆದ್ದಾರಿ ಚತುಷ್ಪದದ ಕಾಮಗಾರಿಯ ಸಂದರ್ಭದಲ್ಲಿ ಒತ್ತಿನೆಣೆ ಗುಡ್ಡವನ್ನು ಅವೈಜ್ಙಾನಿಕವಾಗಿ ಕೊರೆದು ಇಬ್ಭಾಗ ಮಾಡಲಾಗಿತ್ತು. ಚತುಷ್ಪಥ ಹೆದ್ದಾರಿ ನಿರ್ಮಾಣಕ್ಕಾಗಿ ಒತ್ತಿನೆಣೆ ಗುಡ್ಡವನ್ನು 90 ಡಿಗ್ರಿ ಕೋನದಲ್ಲಿ ಆಳ ತೆಗೆದು ನಿರ್ಮಿಸಲಾಗಿತ್ತು. ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯ ಕಾರಣದಿಂದಾಗಿ ಸಂಭವನೀಯ ಅಪಾಯ ತಡೆಗಟ್ಟುವ ದೃಷ್ಟಿಯಲ್ಲಿ ರಸ್ತೆ ನಿರ್ಮಾಣ ಸಂಸ್ಥೆ ಐಆರ್‌ಬಿ ಗುಡ್ಡಕ್ಕೆ ಹಾಕಿದ್ದ ಸಿಮೆಂಟ್‌ ಸ್ಲೋಪ್‌ ಜಾರುವ ಬೀತಿ ಎದುರಾಗಿದೆ.

ಮಳೆ ಹೀಗೆ ಮುಂದುವರಿದರೇ ಸಂಪೂರ್ಣ ಗುಡ್ಡ ಹೆದ್ದಾರಿಗೆ ಕುಸಿದು ಬೀಳುವ ಆತಂಕವಿದೆ. ಒಂದು ವೇಳೆ ಗುಡ್ಡ ಕುಸಿದರೆ ಮಂಗಳೂರು-ಉತ್ತರ ಕನ್ನಡ ಸಂಪರ್ಕ ಕಡಿತಗೊಳ್ಳಲಿದೆ.

ಮಳೆಗಾಲದಲ್ಲಂತೂ ಇಲ್ಲಿ ಭೀತಿಯಿಂದಲೇ ಸಂಚಾರ ಮಾಡುವ ಸ್ಥಿತಿ. ಐಆರ್‌ಬಿ ಅವೈಜ್ಞಾನಿಕ ಕಾಮಗಾರಿಯಿಂದ ಪ್ರತಿ ವರ್ಷ ಮಳೆಗಾಲದಲ್ಲಿ ಗುಡ್ಡ ಕುಸಿತದ ಭೀತಿ ಎದುರಿಸುವಂತಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇನ್ನು, ಈಗಾಗಲೇ ಪಟ್ಟಣ ಪಂಚಾಯತ್‌ ವತಿಯಿಂದ ಬದಲಿ ಮಾರ್ಗ ಎಚ್ಚರಿಕೆಯ ಸೂಚನೆ ನೀಡಲಾಗುತ್ತಿದೆ. ಸ್ಥಳೀಯ ಆಡಳಿತಾಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಮಾಜಿ ಶಾಸಕ, ಜಿಲ್ಲೆಯ ಧಾರ್ಮಿಕ ಮುಂದಾಳು ಬಿ.ಅಪ್ಪಣ್ಣ ಹೆಗ್ಡೆ ಇನ್ನಿಲ್ಲ

kundapura: ಮಾಜಿ ಶಾಸಕ, ಉಡುಪಿ ಜಿಲ್ಲೆಯ ಧಾರ್ಮಿಕ ಮುಂದಾಳು, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದ ಅಗ್ರಮೇವ ನಾಯಕ ಬಸ್ರೂರು ಅಪ್ಪಣ್ಣ ಹೆಗ್ಡೆ ಇನ್ನೂ ನೆನಪು ಮಾತ್ರ. ಫೆ.7ಶನಿವಾರ (ಇಂದು ಬೆಳಿಗ್ಗೆ) ಅವರು ವಯೋಸಹಜ ಕಾರಣದಿಂದ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!